ಫೆಲಿಕ್ಸ್ ವಾಂಕೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫೆಲಿಕ್ಸ್ ವಾಂಕೇಲ್ ಸಮಾಧಿ

ಜೀವನ[ಬದಲಾಯಿಸಿ]

ಫೆಲಿಕ್ಸ್ ವಾಂಕೇಲ್ , ಜರ್ಮನಿಯ ಒಬ್ಬ ಖ್ಯಾತ ತಂತ್ರಜ್ಞಾನಿ. ಬಡತನದ ಕಾರಣ ಫೆಲಿಕ್ಸ್ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ . ತಮ್ಮ ಜೀವನಕ್ಕಾಗಿ ಅವರು ಕಾರು ದುರಸ್ತಿ ಕಾರ್ಯವನ್ನ ಆಯ್ದುಕೊಂಡರು . ಆದರೆ, ಅವರ ಕಠಿಣ ಪರಿಶ್ರಮದಿಂದಾಗಿ , ಕೇವಲ ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲೇ ಸ್ವಂತ ಉದ್ದಿಮೆಯನ್ನ ಪ್ರಾರಂಭಿಸಿದರು . ಬಹುಮುಖ ಪ್ರತಿಭೆಯಾದ ಫೆಲಿಕ್ಸ್ , ಬರೀ ವ್ಯವಹಾರದಲ್ಲಷ್ಟೇ ತಮ್ಮನ್ನ ತಾವು ತೊಡಗಿಸಿಕೊಳ್ಳಲಿಲ್ಲ, ಬದಲಾಗಿ ತಮಗೆ ಬಹು ಪ್ರಿಯವಾದ ಯಂತ್ರ ಸುಧಾರಣೆಯತ್ತ ಸಹ ಗಮನ ಹರಿಸಿದರು. [೧]

ಸಾಧನೆಗಳು[ಬದಲಾಯಿಸಿ]

ಫೆಲಿಕ್ಸ್ ಅವರ ಕಠಿಣ ಪರಿಶ್ರಮ , ಆಸಕ್ತಿಯ ಫಲವಾಗಿ ಅವರು ರೋಟರಿ ಪಿಸ್ಟನ್ ಯಂತ್ರವನ್ನ ತಯಾರಿಸಿದರು . ಇವರ ಶ್ರಮವನ್ನ ಮೆಚ್ಚಿ , ಜರ್ಮನ್ ವಿಮಾನ ಪಡೆ ಇವರ ನೆರವಾಯಿತು . ರೋಟರಿ ಪಿಸ್ಟನ್ ಯಂತ್ರ ಸಂಶೋಧನೆ ಫೆಲಿಕ್ಸ್ ವಾಂಕೇಲ್ ಅವರ ಮಹತ್ಸಾಧನೆ. ಹೀಗಾಗಿ ಇದನ್ನು ವಾಂಕೇಲ್ ಯಂತ್ರ ಎಂದೇ ಕರೆಯಲಾಗುತ್ತದೆ. [೨]

೧೯೫೧ ರಲ್ಲಿ ವಾಂಕೇಲ್ ತಮ್ಮದೇ ಸ್ವಂತ ಸಂಶೋಧನಾ ಸಂಸ್ಥೆ ಸ್ಥಾಪಿಸಿದರು. ಅವರದ್ದೇ ಸಂಸ್ಥೆಯಿಂದ ವಾಂಕೇಲ್ ಇಂಜಿನ್ಗಳ ಉತ್ಪಾದನೆ ಪ್ರಾರಂಭಿಸಿದರು. ರೋಟರಿ ಪಿಸ್ಟನ್ ಯಂತ್ರ ಆಕರದಲ್ಲಿ ಚಿಕ್ಕದು, ತೂಕ ಕಡಿಮೆ, ಹೆಚ್ಚು ಶಬ್ಧ ಉಂಟುಮಾಡುವುದಿಲ್ಲ, ಉತ್ಪಾದನ ವೆಚ್ಚವೂ ಕಡಿಮೆ. ಹೀಗಾಗಿ ಫೆಲಿಕ್ಸ್ ವಾಂಕೇಲ್ ರವರ ಈ ಸಂಶೋಧನೆ ಯಂತ್ರ ಹಡಗು ಮತ್ತು ವೈಮಾನಿಕ ರಂಗದಲ್ಲಿನ ಬಹುದೊಡ್ಡ ಸಂಶೋಧನೆಯಾಗಿ ಮಾರ್ಪಟ್ಟಿತು.

ಈ ಲೇಖನಗಳನ್ನೂ ನೋಡಿ[ಬದಲಾಯಿಸಿ]

ಭಾರತದ ವಿಜ್ಞಾನಿಗಳುಉಲ್ಲೇಖಗಳು[ಬದಲಾಯಿಸಿ]

  1. http://www.britannica.com/EBchecked/topic/635471/Felix-Wankel
  2. http://www.history.com/this-day-in-history/rotary-engine-inventor-felix-wankel-born