ವಿಷಯಕ್ಕೆ ಹೋಗು

ಫೆರೋಮೋನುಗಳೆಂಬ ವಾಸನೆಯ ದ್ರವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಸನೆಯ ದ್ರವ್ಯಗಳಿಗೆ ಪ್ರಾಣಿಪ್ರಪಂಚದಲ್ಲಿ ಪ್ರಮುಖ ಸ್ಥಾನವಿದೆ.ಸಂಗಾತಿಯನ್ನು ಆಕರ್ಷಿಸುವುದಕ್ಕೆ,ವೈರಿಗಳನ್ನು ದೂರವಿಡುವುದಕ್ಕೆ,ತನ್ನ ಪರಿಸರದ ಗಡಿಕಾವಲಿಗೆ ಇತ್ಯಾದಿ ಹಲವು ಕಾರಣಗಳಿಗೆ ಪ್ರಾಣಿಗಳು ಗಂಧ ದ್ರವ್ಯಗಳನ್ನು ಬಳಸುತ್ತವೆ.ಇಂತಹ ದ್ರವ್ಯಗಳನ್ನು ಫೆರೋಮೋನುಗಳೆನ್ನುತ್ತಾರೆ.ಉದಾಹರಣೆಗೆ,ರಕ್ತ ಹೀರುವ ಸೊಳ್ಳೆ ತನ್ನ ಬಲಿಯನ್ನು ಹುಡುಕಿ, ನೇರವಾಗಿ ರಕ್ತನಾಳವಿರುವೆಡೆಯೇ ಬಂದು ಕುಟುಕುವುದಕ್ಕೆ ಪ್ರಾಣಿಗಳಿಂದ ಹೊರ ಸೂಸುವ ಗಂಧದ್ರವ್ಯವನ್ನು ಗುರಿಯಾಗಿಟ್ಟುಕೊಂಡಿರುತ್ತದೆ.ಇದೇ ರೀತಿಯಲ್ಲಿ ಇಲಿಗಳು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲೂ ಫೆರೋಮೋನುಗಳನ್ನು ಬಳಸುತ್ತದೆ.ಯಾವುದೆ ಜೀವಿಯಲ್ಲಿ ಹುಟ್ಟಿ ಬೇರಿನ್ನೊಂದು ಜೀವಿಯ ಚಟುವಟಿಕೆಗಳನ್ನು ಬಾಧಿಸುವ ರಾಸಾಯನಿಕಗಳನ್ನು ಫೆರೋಮೋನುಗಳೆನ್ನುತ್ತಾರೆ. ಉದಾಹರಣೆಗೆ,ನಾಯಿಯೊಂದು ಮೂತ್ರ ಸವರಿದ ಕಂಭದ ಬಳಿ ಮತ್ತೊಂದು ನಾಯಿ ಸುಳಿಯುವುದಿಲ್ಲ.ಆ ಕಂಭ ತನ್ನದಲ್ಲವೆನ್ನುವ ವಾಸನೆ ಅದಕ್ಕೆ ಮೊದಲೇ ಬಂದಿರುತ್ತದೆ. ಅದೇ ರೀತಿಯಲ್ಲಿ,ಕನ್ಯಾ ಮಾಸದಲ್ಲಿ ಯಾವ ಹೆಣ್ಣು ನಾಯಿ ಋತುವಿನಲ್ಲಿದೆ ಎನ್ನುವುದನ್ನು ಗಂಡು ನಾಯಿ ವಾಸನೆ ಹಿಡಿಯುತ್ತದೆ. ನೊಣ,ಸೊಳ್ಳೆ,ಫಸಲನ್ನು ಕಾಡುವ ಹಲವಾರು ಕೀಟಗಳು ಇವೆಲ್ಲದರಲ್ಲೂ ಫೆರೋಮೋನುಗಳ ಇರವನ್ನು ಕಂಡುಕೊಳ್ಳಲಾಗಿದೆ. ಆದರೆ ಮನುಷ್ಯರಲ್ಲೂ ಫೆರೋಮೋನುಗಳಿವೆಯೇ?ಒಬ್ಬ ವ್ಯಕ್ತಿ ಸ್ರವಿಸಿದ ಫರೋಮೋನು ಮತ್ತೊಬ್ಬನ ಚಟುವಟಿಕೆಯನ್ನು ಬಾಧಿಸುತ್ತದೆಯೇ?ಕೆಲವೊಂದು ವಿಷಯದಲ್ಲಿ ಇದನ್ನು ಗುರುತಿಸಲಾಗಿದೆ.ತಾಯಿಯ ಮೊಲೆಯನ್ನು ಕಣ್ಣಿಲ್ಲದ ಮಗುವೂ ನೇರವಾಗಿ ಹುಡುಕುವುದಕ್ಕೆ ಮೊಲೆತೊಟ್ಟಿನ ಬದಿಯಲ್ಲಿ ಸ್ರವಣವಾಗುವ ಫರೋಮೋನುಗಳು ಕಾರಣವಿರಬಹುದೆಂದು ಗುಮಾನಿ ಇದೆ. ಮಹಿಳೆಯರಷ್ಟೇ ಒಟ್ಟಾಗಿರುವೆಡೆ ಎಲ್ಲಾ ಮಹಿಳೆಯರೂ ಒಟ್ಟಿಗೇ ಮುಟ್ಟಾಗುವ ಸಂಗತಿಗಳೂ ನಡೆಯುತ್ತದೆ.ಇದಕ್ಕೂ ಫರೋಮೋನುಗಳು ಕಾರಣವಿರಬಹುದೆನ್ನಲಾಗಿದೆ. ಗಂಡು ಹೆಣ್ಣಿನ ನಡುವಿನ ಆಕರ್ಷಣೆಗೆ ಫರೋಮೋನುಗಳು ಕಾರಣವಿರಬಹುದು ಎಂದು ಊಹಿಸಲಾಗಿದೆ.ಫರೋಮೋನುಗಳು ದೇಹವು ಸ್ರವಿಸುವ ಹಾರ್ಮೋನುಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ವಿಜ್ಞಾನಿಗಳ ಅನಿಸಿಕೆ. ಇದು ನಿಜವಾದಲ್ಲಿ ಹಾರ್ಮೋನುಗಳಿಂದ ಬಾಧಿತವಾಗುವ ಚಟುವಟಿಕೆಗಳೆಲ್ಲದರಲ್ಲೂ ಫೆರೋಮೋನುಗಳ ಪ್ರಭಾವವು ಇರಬಹುದಲ್ಲವೇ? ಈ ತರ್ಕವೇ ಭೀತಿಯ ವಾಸನೆಯ ಜಾಡು ಹಿಡಿಯಲು ಪ್ರಚೋದನೆಯಾಯಿತು.ಉದಾಹರನೆಗೆ ಮಹಿಳೆಯರಲ್ಲಿ ಋತುಚಕ್ರದ ಕೆಲವು ದಿನಗಳಲ್ಲಿ ಭಯ ಹೆಚ್ಚಾಗುತ್ತದಮತೆ.ಈ ದಿನಗಳಲ್ಲಿ ಮಹಿಳೆಯರ ರಕ್ತದಲ್ಲಿ ಸಾಮಾನ್ಯಕಿಂತಲೂ ಹೆಚ್ಚಿನ ಪ್ರಮಾನದಲ್ಲಿ ಎಂಡೋಸ್ಟೆರಾನ್ ಎನ್ನುವ ಹಾರ್ಮೋನಿರುವುದು ಕಾರಣವಿರಬಹುದೆಂದು ವಿಜ್ಞಾನಿದಳು ಊಹಿಸಿದ್ದಾರೆ.ಭಯ ಎನ್ನುವಿದು ಹಾರ್ಮೋನಿನ ಪ್ರಭಾವಕ್ಕೊಳಗಾಗುವುದಾದರೆ ಫೆರೋಮೋನುಗಳೂ ಇದ್ದರೆ ಅಚ್ಚರಿಯೇನಲ್ಲವಷ್ಟೆ.ಈ ತರ್ಕ ವಿತರ್ಕವಲ್ಲ,ಸತ್ಯ ಎನ್ನುವುದು ಸಂಶೋಧನೆಯಿಂದ ಸಿದ್ಧವಾಗಿದೆ.