ಫೀಲ್ಡ್ಸ್ ಪದಕ
ಫೀಲ್ಡ್ಸ್ ಪದಕ | |
---|---|
ಕೊಡಲ್ಪಡುವ ವಿಷಯ | ಯುವ ವಿಜ್ಞಾನಿಗಳಿಗೆ ನೀಡುವ ಗಣಿತದಲ್ಲಿನ ಮಹೋನ್ನತ ಕೊಡುಗೆಗಳಿಗಾಗಿ |
ದೇಶ | ಬದಲಾಗುತ್ತದೆ |
ಕೊಡಿಸಲ್ಪಡು | ಅಂತರರಾಷ್ಟ್ರೀಯ ಗಣಿತ ಒಕ್ಕೂಟ (ಐಎಂಯು) |
ಸಂಭಾವನೆ | ಕೆನೇಡಿಯನ್ $5,000 |
ಪ್ರಧಮವಾಗಿ ಕೊಡಲ್ಪಟ್ಟದ್ದು | 1936 |
ಕೊನೆಯದಾಗಿ ಕೊಡಲ್ಪಟ್ಟದ್ದು | 2018 |
ಅಧಿಕೃತ ಜಾಲತಾಣ | Mathunion.org |
ಫೀಲ್ಡ್ಸ್ ಪದಕವು ಅಂತರರಾಷ್ಟ್ರೀಯ ಗಣಿತ ಒಕ್ಕೂಟದ (ಐಎಂಯು) ಅಂತರರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು, ಮೂವರು ಅಥವಾ ನಾಲ್ಕು ಗಣಿತಜ್ಞರಿಗೆ ನೀಡಲಾಗುವ ಪ್ರಶಸ್ತಿ. ಈ ಸಭೆಯು (ಕಾಂಗ್ರೆಸ್) ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ.
ಫೀಲ್ಡ್ಸ್ ಪದಕವು ಒಬ್ಬ ಗಣಿತಜ್ಞನು ಪಡೆಯಬಹುದಾದ ಅತ್ಯಂತ ಉನ್ನತ ಗೌರವಗಳಲ್ಲಿ ಒಂದಾಗಿದೆ ಎಂದು ಪರಿಗಣಿತವಾಗಿದೆ, ಮತ್ತು ಇದನ್ನು ಗಣಿತಜ್ಞನ ನೊಬೆಲ್ ಪ್ರಶಸ್ತಿ ಎಂದು ವರ್ಣಿಸಲಾಗಿದೆ,[೧][೨][೩] ಆದರೆ ಪ್ರಶಸ್ತಿಯನ್ನು ಕೊಡುವ ಪ್ರಮಾಣ ದರ, ಪ್ರಶಸ್ತಿಗಳ ಸಂಖ್ಯೆ ಮತ್ತು ವಯೋಮಿತಿಗಳು ಸೇರಿದಂತೆ, ಹಲವು ಪ್ರಮುಖ ವ್ಯತ್ಯಾಸಗಳಿವೆ. ಎಆರ್‌ಡಬ್ಲ್ಯುಯು ನಡೆಸುವ ವಾರ್ಷಿಕ ಶೈಕ್ಷಣಿಕ ಶ್ರೇಷ್ಠತಾ ಸಮೀಕ್ಷೆಯ ಪ್ರಕಾರ, ಫೀಲ್ಡ್ಸ್ ಪದಕವನ್ನು ವಿಶ್ವಾದ್ಯಂತ ಗಣಿತದ ಕ್ಷೇತ್ರದಲ್ಲಿನ ಅತ್ಯುನ್ನತ ಪ್ರಶಸ್ತಿಯೆಂದು ಸ್ಥಿರವಾಗಿ ಪರಿಗಣಿಸಲಾಗಿದೆ,[೪] ಮತ್ತು ಇನ್ನೊಂದು ಪ್ರಸಿದ್ಧಿಯ ಸಮೀಕ್ಷೆಯಲ್ಲಿ, ಫೀಲ್ಡ್ಸ್ ಪದಕವು ಗಣಿತದಲ್ಲಿ ಎರಡನೇ ಅತಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿ ಆಬೆಲ್ ಪ್ರಶಸ್ತಿಯ ನಿಕಟ ಉತ್ತರಾಧಿಕಾರಿ ಎನಿಸಿಕೊಂಡಿತು.[೫][೬]
ಉಲ್ಲೇಖಗಳು
[ಬದಲಾಯಿಸಿ]- ↑ Ball, Philip (2014). "Iranian is first woman to nab highest prize in maths". Nature (in ಇಂಗ್ಲಿಷ್). doi:10.1038/nature.2014.15686.
- ↑ "Fields Medal". www-history.mcs.st-andrews.ac.uk. Retrieved 2018-03-29.
- ↑ "Fields Medal". The University of Chicago (in ಇಂಗ್ಲಿಷ್). Retrieved 2018-03-29.
- ↑ "Top Award, ShanghaiRanking Academic Excellence Survey 2017 | Shanghai Ranking – 2017". Shanghairanking.com. Archived from the original on 2020-10-17. Retrieved 2018-03-29.
- ↑ IREG Observatory on Academic Ranking and Excellence. IREG List of International Academic Awards (PDF). Brussels: IREG Observatory on Academic Ranking and Excellence. Archived from the original (PDF) on 12 ಮಾರ್ಚ್ 2019. Retrieved 3 March 2018.
- ↑ Zheng, Juntao; Liu, Niancai (2015). "Mapping of important international academic awards". Scientometrics. 104 (3): 763–791. doi:10.1007/s11192-015-1613-7.