ವಿಷಯಕ್ಕೆ ಹೋಗು

ಫಿ ಫಿ ದ್ವೀಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ್ವೀಪ

ಫಿ ಫಿ ದ್ವೀಪಗಳು ಥೈಲ್ಯಾಂಡ್ ದೇಶದಲ್ಲಿ ದೊಡ್ಡ ದ್ವೀಪವಾದ ಫುಕೆಟ್ ಮತ್ತು ಪಶ್ಚಿಮ ಅಂಡಮಾನ್ ಸಮುದ್ರದ ನಡುವೆ ಇದ್ದು, ಒಂದು ದ್ವೀಪದಲ್ಲಿ ಮಾತ್ರ ಶಾಶ್ವತ ಜನವಸತಿ ಇದೆ. ಇನ್ನೊಂದು ದ್ವೀಪವನ್ನೂ ಪ್ರವಾಸಿಗಳು ಸಂದರ್ಶಿಸುವರು. ಈ ದ್ವೀಪಗಳು ತುಂಬ ರಮಣೀಯವಾಗಿದ್ದು, 'ದಿ ಬೀಚ್' ಎಂಬ ಇಂಗ್ಲೀಷ್ ಚಲನಚಿತ್ರದಿಂದಾಗಿ ಇಲ್ಲಿ ಪ್ರವಾಸಿಗಳ ಬರವು ಬಹಳಷ್ಟು ಹೆಚ್ಚಾಗಿದೆ. ೨೦೦೪ ರಲ್ಲಿ ತ್ಸುನಾಮಿಯಿಂದಾಗಿ ಈ ದ್ವೀಪದಲ್ಲಿ ಬಹಳಷ್ಟು ಹಾನಿ ಸಂಭವಿಸಿದ್ದು ಈಗ ಬಹಳಷ್ಟನ್ನು ಸುಸ್ಥಿತಿಗೆ ತರಲಾಗಿದೆ.ಮೊದಲ್ಲೆಲ್ಲ ಅಂದರೆ ೧೯೪೦ರ ಸಮಯದಲ್ಲಿ ಈ ದ್ವೀಪದಲ್ಲಿ ಮುಸ್ಲಿಮ ಮೀನುಗಾರರು ಇದ್ದರು,ನಂತರ ಈ ದ್ವೀಪವು ತೆಂಗಿನ ತೋಟ ಆಯಿತು.ಫಿ ಫಿ ಡಾನ್ ಥಾಯ್ ಜನಸಂಖ್ಯೆಯಲ್ಲಿ 80% ಮುಸ್ಲಿಂರೇ ಇದ್ದರು.ಇಲ್ಲಿ ಸುಮಾರು ೨೦೦೦ ದಿಂದ ೩೦೦೦ ಮಂದಿ ಜನರಿದ್ದಾರೆ.

ಚಿತ್ರಗಳು

[ಬದಲಾಯಿಸಿ]
ದ್ವೀಪದ ಪ್ರವಾಸ