ವಿಷಯಕ್ಕೆ ಹೋಗು

ಫ಼್ರೆಂಚ್ ಟೋಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ಼್ರೆಂಚ್ ಟೋಸ್ಟ್ ಬಿರುಸಾಗಿ ಕಲಕಿದ ಮೊಟ್ಟೆಗಳಲ್ಲಿ ನೆನೆಸಿದ ಬ್ರೆಡ್ಅನ್ನು ಕರಿದು ತಯಾರಿಸಲಾದ ಒಂದು ತಿನಿಸು. ಬ್ರೆಡ್‍ನ ಸ್ಲೈಸ್‍ಗಳನ್ನು ಬಿರುಸಾಗಿ ಕಲಕಿದ ಮೊಟ್ಟೆಗಳು, ಹಲವುವೇಳೆ ಹಾಲು ಅಥವಾ ಕೆನೆಯ ಜೊತೆಗಿನ ಮಿಶ್ರಣದಲ್ಲಿ ನೆನೆಸಲಾಗುತ್ತದೆ ಅಥವಾ ಅದ್ದಲಾಗುತ್ತದೆ. ಕೆಲವೊಮ್ಮೆ ಸಕ್ಕರೆ, ದಾಲ್ಚಿನ್ನಿ, ಜಾಯಿಕಾಯಿ, ಮತ್ತು ವನಿಲಾವನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಮೊಟ್ಟೆಯಿಂದ ಲೇಪಿತವಾದ ಬ್ರೆಡ್‍ನ ಸ್ಲೈಸ್‍ಗಳನ್ನು ನಂತರ ಎರಡೂ ಬದಿಗಳಲ್ಲಿ ಕಂದಾಗುವವರೆಗೆ ಮತ್ತು ಬೇಯುವವರೆಗೆ ಕರಿಯಲಾಗುತ್ತದೆ.