ಫ಼ಾಂಡ್ಯೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ಼ಾಂಡ್ಯೂ ಮೇಣದ ಬತ್ತಿ ಅಥವಾ ಮದ್ಯಸಾರ ದೀಪದಿಂದ ಬಿಸಿಯಾಗಿಸಿದ ವರ್ಗಾಯಿಸಬಲ್ಲ ಒಲೆಯ ಮೇಲಿಡಲಾದ ಒಂದು ಸಾಮುದಾಯಿಕ ಮಡಕೆಯಲ್ಲಿ ಬಡಿಸಲಾದ ಕರಗಿಸಿದ ಗಿಣ್ಣಿನ ಒಂದು ಸ್ವಿಸ್, ಇಟ್ಯಾಲಿಯನ್ ಮತ್ತು ಫ಼್ರೆಂಚ್ ಭಕ್ಷ್ಯ ಮತ್ತು ಇದನ್ನು ಉದ್ದ ದಿಂಡಿನ ಮುಳ್ಳು ಚಮಚಗಳನ್ನು ಬಳಸಿ ಬ್ರೆಡ್ಅನ್ನು ಗಿಣ್ಣಿನಲ್ಲಿ ಅದ್ದಿ ತಿನ್ನಲಾಗುತ್ತದೆ. ಇದನ್ನು ಉತ್ತರ ಅಮೇರಿಕಾದಲ್ಲಿ ೧೯೬೦ರ ದಶಕದಲ್ಲಿ ಜನಪ್ರಿಯಗೊಳಿಸಲಾಯಿತು. ಚೀಸ್ ಫ಼ಾಂಡ್ಯೂ ಗಿಣ್ಣುಗಳು, ವೈನ್ ಮತ್ತು ಮಸಾಲೆಗಳ ಮಿಶ್ರಣವನ್ನು ಹೊಂದಿರುತ್ತದೆ.