ಫರೀದ್ಕೋಟ್
Faridkot ਫ਼ਰੀਦਕੋਟ | |
---|---|
![]() | |
Country | India |
State | Punjab |
District | Faridkot |
ಸಂಸ್ಥಾಪಕರು | Raja Mokalsi |
ಹೆಸರು ಬರಲು ಕಾರಣ | Baba Farid |
ಸರ್ಕಾರ | |
• ಪ್ರಕಾರಗಳು | Municipal Council |
• Deputy Commissioner | Malwinder Singh Jaggi , IAS |
ಕ್ಷೇತ್ರಫಲ | |
• ಒಟ್ಟು | ೧೮.೧೪ km೨ (೭�೦೦ sq mi) |
Elevation | ೧೯೬ m (೬೪೩ ft) |
ಜನಸಂಖ್ಯೆ (2011) | |
• ಒಟ್ಟು | ೮೭,೬೯೫ |
Demonym(s) | Faridkotian, Faridkotiya |
Languages | |
• Official | Punjabi |
ಸಮಯ ವಲಯ | ಯುಟಿಸಿ+5:30 (IST) |
PIN | 151203 |
Telephone code | +91-1639 |
ವಾಹನ ನೋಂದಣಿ | PB-04 |
Sex ratio | 1000/890 ♂/♀ |
Literacy | 72% |
ಜಾಲತಾಣ | www |
ಫರೀದ್ಕೋಟ್(ಪಂಜಾಬಿ:ਫ਼ਰੀਦਕੋਟ) ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ ಶೇಖ್ ಫರಿದುದ್ದೀನ್ ಗಂಜ್‍ಶಕರ್ ಅವರ ಹೆಸರನ್ನು ಇಡಲಾಗಿದೆ. ಸಿಖ್ಖರು ಮತ್ತು ಅವರ ಸುಂದರ ಗುರುದ್ವಾರಗಳು ಹಾಗು ಕೋಟೆಗಳಿಂದ ಕೂಡಿದ ಫರೀದ್ಕೋಟ್ ನೋಡುಗರಿಗೆ ರಾಜ ವೈಭವವದ ಸಿರಿಯನ್ನು ಉಣಿಸುತ್ತದೆ.[೧]
ಫರೀದ್ಕೋಟ್ ಸುತ್ತ- ಮುತ್ತ ಇರುವ ಆಕರ್ಷಣೆಗಳು[ಬದಲಾಯಿಸಿ]
ಫರೀದ್ಕೋಟ್ ಪ್ರವಾಸಿಗರ ವಲಯದಲ್ಲಿ ದೇಶದಲ್ಲಿಯೇ ಉತ್ತಮ ಹೆಸರು ಗಳಿಸಿದೆ. ಫರೀದ್ಕೋಟ್‍ನ ಮುಖ್ಯ ಆಕರ್ಷಣೆಗಳು ಗುರುದ್ವಾರದಿಂದ ಹಿಡಿದು ಕೋಟೆಗಳವರೆಗು ಇದೆ. ಗುರುದ್ವಾರಗಳು ಈ ಊರಿನ ಖ್ಯಾತಿಗೆ ಮತ್ತಷ್ಟು ಮೆರಗು ನೀಡಿವೆ. ರಾಜ್ ಮಹಲ್, ಫೈರಿ ಕಾಟೇಜ್, ಕಿಲಾ ಮುಬಾರಕ್ ಮತ್ತು ಗುರುದ್ವಾರ ಟಿಲ್ಲ ಬಾಬಾ ಫರಿದ್‍ಗಳು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಇತಿಹಾಸ ಪ್ರಿಯರು ಇಲ್ಲಿನ ಶ್ರೀಮಂತ ಪರಂಪರೆಯನ್ನು ತಿಳಿದುಕೊಳ್ಳಲು ಇಲ್ಲಿಗೆ ಆಗಮಿಸಬಹುದು. ಫರೀದ್ಕೋಟ್ ಜಿಲ್ಲಾ ಸಾಂಸ್ಕೃತಿಕ ಸಂಘವು ಇಲ್ಲಿ ಪ್ರತಿ ವರ್ಷ 15ನೇ ಸೆಪ್ಟೆಂಬರ್ ನಿಂದ 23 ಸೆಪ್ಟೆಂಬರ್ ವರೆಗೆ ಫರಿದ್ ಮೇಲ ಎಂಬ ವಾರ್ಷಿಕ ಉತ್ಸವವನ್ನು ನಡೆಸುತ್ತದೆ. ಈ ಉತ್ಸವವು ದೇಶದ ನಾನಾ ಮೂಲೆಗಳಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ.
ಫರೀದ್ಕೋಟ್‍ಗೆ ತಲುಪುವುದು ಹೇಗೆ[ಬದಲಾಯಿಸಿ]
ಅಮೃತ್‍ಸರ್ ವಿಮಾನ ನಿಲ್ದಾಣವು ಫರೀದ್ಕೋಟದಿಂದ 128 ಕಿ.ಮೀ ದೂರದಲ್ಲಿದೆ. ರೈಲುಗಳ ಮತ್ತು ಬಸ್ಸುಗಳ ಮೂಲಕ ಫರೀದ್ಕೋಟ್‍ಗೆ ತಲುಪಬಹುದು.
ಫರೀದ್ಕೋಟ್‍ಗೆ ಭೇಟಿ ನೀಡಲು ಅತ್ಯುತ್ತಮ ಅವಧಿ[ಬದಲಾಯಿಸಿ]
ಫರೀದ್ಕೋಟ್‍ನಲ್ಲಿ ಬೇಸಿಗೆ,ಮಳೆಗಾಲ ಮತ್ತು ಚಳಿಗಾಲಗಳು ಕಂಡು ಬರುತ್ತವೆ. ಆದರೆ ಫರೀದ್ಕೋಟ್‍ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ನಡುವಿನ ಕಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.
-
Entrance of Farmer's House Faridkot
-
Foundation Stone of Harindra - Civil Hospital Faridkot
-
Foundation Stone of Harindra - Civil Hospital Faridkot
-
Foundation stone of Govt. School of Bargari (Faridkot)
-
Entrance of District Court Faridkot
-
Foundation Stone of Davies Model Agricultural Farm and Farmers's House Faridkot
-
Govt. Brijindra College Faridkot
-
Govt.Brijindra College Faridkot
ಉಲ್ಲೇಖಗಳು[ಬದಲಾಯಿಸಿ]
- ↑ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.