ಪ್ರೊ. ಎಲ್. ಎಸ್. ಎಸ್. ರವರು ಸಂಪಾದಿಸಿದ ಕಿರುಹೊತ್ತಿಗೆಗಳು.
ಗೋಚರ
ಪ್ರೊ. ಎಲ್. ಎಸ್. ಶೇಷಗಿರಿರಾಯ ರ ಸಾಹಿತ್ಯದಕೊಡುಗೆ ಅಪಾರ. ಅವರನ್ನು ವಿದ್ವಾಂಸರು ಖ್ಯಾತ ವಿಮರ್ಶಕರೆಂದು ಪರಿಗಣಿಸಿದರೂ, ಸಾಹಿತ್ಯದ ಅನೇಕ ಪ್ರಾಕಾರಗಳಲ್ಲಿ ಸಾಕಷ್ಟು ಕೃಷಿಮಾಡಿದ್ದಾರೆ. ಕನ್ನಡ ನಾಡಿನ ಮಹನೀಯರುಗಳಲ್ಲಿ ಅನೇಕರನ್ನು, ಅವರು ತಮ್ಮ ಕಿರು-ಹೊತ್ತಿಗೆಗಳಮೂಲಕ ಕರ್ನಾಟಕದ ಜನತೆಗೆ ಪರಿಚಯಮಾಡಿಕೊಟ್ಟಿದಾರೆ. ಅವುಗಳ ಕ್ರಯ, ಕೇವಲ ೭೫ ಪೈಸೆ ಮಾತ್ರ. ರಾಷ್ಟ್ರೋತ್ಥಾನ ಪರಿಷತ್ತಿನ ವತಿಯಿಂದ ಪ್ರಕಾಶನಗೊಂಡು ಪ್ರಕಟಿಸಲ್ಪಟ್ಟ, ನೂರಾರು ಕಿರುಕೃತಿಗಳು ,ಸಮರ್ಪಕವಾಗಿ ಸಾಕಷ್ಟು ಮಾಹಿತಿಗಳನ್ನು ಒದಗಿಸುವಲ್ಲಿ ಸಹಾಯಕವಾಗಿವೆ. ಅವುಗಳನ್ನು ಅತ್ಯಂತ ರೋಚಕವಾಗಿಯೂ ಮತ್ತು ಮಾಹಿತಿಗಳನ್ನು ವ್ಯವಸ್ಥಿತವಾಗಿಯೂ ದಾಖಲಿಸಿರುವುದು ಇವುಗಳ ವಿಶೇಷತೆ.
ಇದರ ಜೊತೆಗೆ, ಅವರು ಭಾರತದ ಪ್ರಖ್ಯಾತ ಸಂಗೀತಕಾರರು, ನಟರು, ಕವಿಗಳು, ಬರಹಗಾರರು, ಶಿಲ್ಪಿಗಳು, ವಚನಕಾರರು, ನೃತ್ಯಪಟುಗಳು, ವಾಗ್ಮಿಗಳು, ದಿವಾನರುಗಳು, ಇಂಜಿನಿಯರ್ ಗಳು, ಮತ್ತು ಶ್ರೇಷ್ಠ ಉದ್ಯೋಗಪತಿಗಳನ್ನು ಮಕ್ಕಳಿಗೋಸ್ಕರವಾಗಿಯೇ ವಿಶೇಷ ಕಾಳಜಿವಹಿಸಿ, ತಯಾರುಮಾಡಿದ್ದಾರೆ.