ಪ್ರೇಮವಿವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೇಮವಿವಾಹ ಪದವನ್ನು ಸಾಮಾನ್ಯವಾಗಿ ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ; ಮುಖ್ಯವಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಈಜಿಪ್ಟ್‌ನಲ್ಲಿ. ಈ ಪದವನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ದಂಪತಿಗಳಿಂದ ಚಾಲಿತವಾದ ವಿವಾಹವನ್ನು ವರ್ಣಿಸಲು ಬಳಸಲಾಗುತ್ತದೆ, ಮತ್ತು ವ್ಯವಸ್ಥೆಮಾಡಿದ ವಿವಾಹದಿಂದ (ಅರೇಂಜ್ಡ್ ಮ್ಯಾರೇಜ್) ಭಿನ್ನವಾಗಿದೆ.[೧] ಈ ಪದವನ್ನು ವ್ಯಕ್ತಿಗಳು ಒಬ್ಬರನ್ನೊಬ್ಬರು ಪ್ರೀತಿಸಿ ಅಥವಾ ಓಲೈಸಿ ತಮ್ಮ ಹೆತ್ತವರ ಒಪ್ಪಿಗೆಯಿಂದ ಅಥವಾ ಒಪ್ಪಿಗೆ ಇಲ್ಲದೆಯೇ ಆಗುವ ಮದುವೆಯನ್ನು ವರ್ಣಿಸಲು ಬಳಸಲಾಗುತ್ತದೆ.[೨][೩]

ಭಾರತದಲ್ಲಿ[ಬದಲಾಯಿಸಿ]

ಭಾರತದಲ್ಲಿ, ಪ್ರೇಮವಿವಾಹಗಳು ೧೯೭೦ರ ದಶಕದಲ್ಲಿ ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಲು ಆರಂಭವಾದವು. ಆರಂಭದಲ್ಲಿ, ಪ್ರೇಮವಿವಾಹಗಳು ಸ್ವೀಕಾರಾರ್ಹ ಸಮುದಾಯಗಳ ನಡುವೆ ಆಗುತ್ತಿದ್ದವು. ಈಗ ಪ್ರೇಮವಿವಾಹಗಳು ಜನಾಂಗೀಯ, ಸಮುದಾಯ ಮತ್ತು ಧರ್ಮದ ಅಡತಡೆಗಳನ್ನು ಮೀರುವುದು ಸಾಮಾನ್ಯವಾಗಿದೆ.

ಇಪ್ಸಾಸ್ ನಡೆಸಿದ ೨೦೧೨ರ ಒಂದು ಸಮೀಕ್ಷೆಯಲ್ಲಿ, ಶೇಕಡ ೭೪ರಷ್ಟು ಉತ್ತರಿಸುವವರು ತಾವು ವ್ಯವಸ್ಥೆಮಾಡಿದ ಮದುವೆಯನ್ನು ಇಷ್ಟಪಡುತ್ತೇವೆಂದು ಹೇಳಿದರು.[೪] ೨೦೧೦ರಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗವು ಕಳೆದ ವರ್ಷದಲ್ಲಿ ಮರ್ಯಾದೆ ಹತ್ಯೆಗಳ ೩೨೬ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ ಒಂದು ವರದಿಯನ್ನು ಬಿಡುಗಡೆ ಮಾಡಿತು. ಇವುಗಳಲ್ಲಿ ಬಹುಪಾಲು ಅಂತರ್ಜಾತೀಯ ವಿವಾಹಗಳ ಕಾರಣವಾಗಿದ್ದವು.[೫]

ಉಲ್ಲೇಖಗಳು[ಬದಲಾಯಿಸಿ]

  1. Mr Henrike Donner (28 December 2012). Domestic Goddesses: Maternity, Globalization and Middle-class Identity in Contemporary India. Ashgate Publishing, Ltd. pp. 80, 86. ISBN 978-1-4094-9145-3. Retrieved 31 January 2015.
  2. "Glitz and tradition at Sri Lanka society wedding". BBC News. 13 April 2011. Retrieved 31 January 2015. Society is becoming more Westernised, too: this is a love marriage, not one arranged by the family.
  3. "Pakistan police to protect Afghan runaway couple". BBC News. 23 July 2012. Retrieved 31 January 2015. The couple say that they entered Pakistan illegally about three weeks ago and had a secret love marriage.
  4. "NDTV mid-term poll: Does India still want arranged marriages?". NDTV. 5 September 2015. Retrieved 14 February 2015.
  5. "Inter-caste ties behind most honour crimes. Just 3% cases due to same gotra marriages, says new survey". The Tribune (India). 5 July 2010. Retrieved 14 February 2015.