ಪ್ರಾರ್ಥನಾ ಸಮಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾರ್ಥನಾ ಸಮಾಜವನ್ನು ಆತ್ಮಾರಾಂ ಪಾಂಡುರಂಗರವರು ಮುಂಬೈನಲ್ಲಿ ಸ್ಥಾಪಿಸಿದರು. ಈ ಸಮಾಜವು ಶಿಕ್ಷಣ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನಿಡುವ ಸಮಾಜವಗಿತ್ತು.ಮಾನವನ ಸೇವೆಯೇ ಪರಮಾತ್ಮನ ಸೇವೆ ಎಂಬುದು ಇದರ ನೆಲೆಗಟ್ಟಾಗಿತ್ತು. ಡೆಕ್ಕನ್ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿತು.[೧]

ಕಾರ್ಯಕ್ರಮಗಳು[ಬದಲಾಯಿಸಿ]

ವಿಧವಾ ವಿವಾಹ, ಸ್ತ್ರೀ ಶಿಕ್ಷಣ, ಅಂತರ್ಜಾತಿ ವಿವಾಹ, ಸಹಭೋಜನ ಕಾರ್ಯಕ್ರಮಗಳನ್ನು ಪ್ರೊರ್ತ್ಸಾಹಿಸಿತು ಬಾಲ್ಯವಿವಾಹ, ಜಾತಿಪದ್ಧತಿ, ವಿಗ್ರಹಾರಾಧನೆ ಪರ್ಧಾಪದ್ಧತಿಯನ್ನು ವಿರೋಧಿಸಿತು. ಸರ್ವಧರ್ಮಗಳು ಸತ್ಯದ ಪ್ರತೀಕವಾಗಿದ್ದು ಅವುಗಳನ್ನು ಗೌರವಿಸಬೇಕೆಂದರು. ಭಾರತದ ಪುನರುಜ್ಜೀವನ ಚಳುವಳಿಯ ಕಾಲದಲ್ಲಿ ಅನಾಥಾಲಯಗಳು, ರಾಷ್ಟ್ರೀಯ ಶಾಲೆಗಳು ಮತ್ತು ವಿಧವಾಶ್ರಮಗಳನ್ನು ಸ್ಥಾಪಿಸಲಾಯಿತು.[೨]

ಎಂ.ಜಿ. ರಾನಡೆ[ಬದಲಾಯಿಸಿ]

ಎಂ.ಜಿ. ರಾನಡೆಯವರು ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದರು. ಸಮಾಜವನ್ನು ಸುಧಾರಿಸದೆ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವುದು ಅಸಾಧ್ಯವೆಂದರು. ಹಿಂದೂ, ಮುಸ್ಲಿಂ ಏಕತೆಯ ಪ್ರತಿಪಾದಕರಾಗಿದ್ದರು. ರಾನಡೆಯವರು ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿದ್ದರು. ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1884 ರಲ್ಲಿ ಪ್ರೌಢಶಾಲೆಯನ್ನು ಶಾಲೆಯನ್ನು ಆರಂಭಿಸಿದರು. [೩][೪]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಸಾಹಿತ್ಯ[ಬದಲಾಯಿಸಿ]

  • Suresh K. Sharma and Usha Sharma, Cultural and Religious Heritage of India, vol. VIII: Cultural and Religious Reform Movements, New Delhi, Mittal, (2004) ISBN 81-7099-955-3.