ಪ್ರವೀಣ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್ ೨ ಅಕ್ಟೋಬರ್ ರಂದು ೧೯೮೬ರಲ್ಲಿ ಜನಿಸಿದರು.ಪ್ರವೀಣ್ ಕುಮಾರ್ ರವರು ತಮ್ಮ ಬಾಲ್ಯದ ಗೆಳತಿ ಸಪ್ನ ರವರನ್ನು ನವೆ೦ಬರ್ ೧೮ ೨೦೧೨ ರಲ್ಲಿ ವಿವಾಹರಾದರು.ಇವರು ಭಾರತ ಕ್ರಿಕೆಟ್ ತ೦ಡದ ಬಲಗೈನ ವೇಗದ ಬೌಲರ್. ಇವರು ಮೊದಲ ದರ್ಜೆಯ ಕ್ರಿಕೆಟ್ ಆನ್ನು ಉತ್ತರ ಪ್ರದೇಶಕಾಗಿ ಆಡಿದ್ದಾರೆ. ಪ್ರವೀಣ್ ಕುಮಾರ್ ರವರು ಮೊದಲ ಆಟವನ್ನು ಪಾಕಿಸ್ತಾನದ ವಿರುದ್ದ ಜೈಪುರ್ ನಲ್ಲಿ ನವ೦ಬರ್ ೨೦೦೭ ರಲ್ಲಿ ಆಡಿದ್ದರು. ಇವರು ಮೊದಲ ಟೆಸ್ಟ್ ಪ೦ದ್ಯ ವನ್ನು ಕಿ೦ಸ್ಟನ್ ನಲ್ಲಿ ಜೂನ್ ೨೦೧೧ರಲ್ಲಿ ವೆಸ್ಟ್ ಇ೦ಡೀಸ್ ವಿರುದ್ದ ಆಡಿದ್ದರು.

ಪ್ರವೀಣ್ ಕುಮಾರ್ ರವರ ವ್ರುತ್ತಿಅ೦ಕಿಅ೦ಶಗಳು[ಬದಲಾಯಿಸಿ]

ಹಿಂದಿನ ಟೆಸ್ಟ್ ಭಾರತ ವಿರುದ್ಧ ಇಂಗ್ಲೆಂಡ್, ಬಿರ್ಮಿಂಗ್‌ಹ್ಯಾಂ , ೦೧ ಆಗಸ್ಟ್ ೨೦೧೧ ಸ್ಕೋರ್ಕಾರ್ಡ್ ಮೊದಲ ODI ಭಾರತ ವಿರುದ್ಧ ಪಾಕಿಸ್ತಾನ, ಜೈಪುರ , ೧೮ ನವೆಂಬರ್ ೨೦೦೭ ಸ್ಕೋರ್ಕಾರ್ಡ್ ಹಿಂದಿನ ಏಕದಿನ ಬಾಂಗ್ಲಾದೇಶ ವಿರುದ್ಧ ಭಾರತ, ಮಿರ್‌ಪುರ್ , ೧೬ ಮಾರ್ಚ್ ೨೦೧೨ ಸ್ಕೋರ್ಕಾರ್ಡ್ ಮೊದಲ ಟಿ-೨೦ ಆಸ್ಟ್ರೇಲಿಯಾ ವಿರುದ್ಧ ಭಾರತ, 0೧ ಫೆಬ್ರವರಿ ೨೦೦೮ ಸ್ಕೋರ್ಕಾರ್ಡ್ ಹಿಂದಿನ ಟಿ-20 ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್, ೩೦ ಮಾರ್ಚ್ ೨೦೧೨ ಸ್ಕೋರ್ಕಾರ್ಡ್ ಮೊದಲ ಐಪಿಎಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್, ಬೆಂಗಳೂರು , ೧೮ ಎಪ್ರಿಲ್ ೨೦೦೮ ಸ್ಕೋರ್ಕಾರ್ಡ್ ಹಿಂದಿನ ಐಪಿಎಲ್ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಪಂಜಾಬ್ ಕಿಂಗ್ಸ್‌, ೧೯ ಮೇ ೨೦೧೨ ಸ್ಕೋರ್ಕಾರ್ಡ್
ಪ್ರವೀಣ್ ಕುಮಾರ್ ರವರ ಕ್ರಿಕೆಟ್ ಜೀವನದ ಬಗ್ಗೆ ೧.ಡಿಸ೦ಬರ್ ೧: ಸೆಹವಾಗ್, ಜಹೀರ್ ಖಾನ್ ಗಾಯಕ್ಕೆ ಸಂಬಂಧಿಸಿದಂತೆ ಹಿಂದೆ ನಡೆದ ವಿವಾದ ತಣ್ಣಗಾಗುವ ಮೊದಲೇ, ವೇಗಿ ಪ್ರವೀಣ್ ಕುಮಾರ್ ಅನಾರೋಗ್ಯದ ಸುತ್ತಮುತ್ತ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಪ್ರವೀಣ್ ಫಿಟ್ನೆಸ್ ಬಗ್ಗೆ ಸರಿಯಾದ ಮಾಹಿತಿ ಬಿಸಿಸಿಐ ಆಯ್ಕೆ ಸಮಿತಿಗೆ ನೀಡದೇ ಇರುವುದು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ.ಪ್ರವೀಣ್ ಫಿಟ್ನೆಸ್ ಸಂಬಂಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬಿಸಿಸಿಐ, ಮೊದಲು ಮೊಣಕೈ ನೋವಿನ ಸಮಸ್ಯೆ, ನಂತರ ಎದೆಯ ಎಡಭಾಗದಲ್ಲಿ ನೋವು, ಈಗ ಪಕ್ಕೆಲುಬಿನಲ್ಲಿ ಬಿರುಕು ಸಮಸ್ಯೆ ಎಂದು ಹೇಳಿಕೆ ನೀಡುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದನ್ನು ಆಯ್ಕೆ ಸಮಿತಿಯ ಗಮನಕ್ಕೆ ಯಾಕೆ ತಂದಿಲ್ಲ ಎನ್ನುವುದೇ ಪ್ರಶ್ತ್ನೆ? ಆಯ್ಕೆ ಸಮಿತಿ ಪ್ರವೀಣ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಆಯ್ಕೆ ಮಾಡಿತ್ತು. ಆದರೆ ತಂಡದ ಜೊತೆ ಕಟಕ್ ಗೆ ಪ್ರಯಾಣಿಸದ ಪ್ರವೀಣ್ ಫಿಟ್ನೆಸ್ ಬಗ್ಗೆ ನಾಯಕ ಸೆಹವಾಗ್ ಅವರಿಗೂ ತಿಳಿದಿರಲಿಲ್ಲ. ವಿಶಾಖಪಟ್ಟಣದಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಅವರು ಲಭ್ಯವೆಂದು ಹೇಳಿಕೆ ನೀಡಿದ್ದರು. ಆದರೆ ಅಂದು 'ಪ್ರವೀಣ್ ಎದೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಮೊದಲ ಮೂರು ಪಂದ್ಯಗಳಿಗೆ ಅವರು ಲಭ್ಯವಿಲ್ಲ' ಎಂದು ಬಿಸಿಸಿಐ ಹೇಳಿಕೆ ನೀಡಿ ಕರ್ನಾಟಕದ ಅಭಿಮನ್ಯು ಮಿಥುನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಇದಾದ ನಂತರ ಮತ್ತೆ ಬಿಸಿಸಿಐ ಹೇಳಿಕೆ ನೀಡಿ, ಪ್ರವೀಣ್ ಅವರ ಸ್ಕ್ಯಾನಿಂಗ್ ಪರೀಕ್ಷೆಯ ನಂತರ ಅವರಿಗೆ ಪೆಕ್ಕೆಲುಬಿನಲ್ಲಿ ಸಮಸ್ಯೆ ಇರುವುದು ಗೊತ್ತಾಗಿದೆ. ಇದರಿಂದ ಅವರು ಪೂರ್ಣ ಚೇತರಿಸಲು ೫-೬ ವಾರ ಬೇಕಾಗಬಹುದು. ಹಾಗಾಗಿ ಪ್ರವೀಣ್ ಪ್ರಸಕ್ತ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಪ್ರವಾಸಕ್ಕೆ ಲಭ್ಯರಗುವುದಿಲ್ಲ ಎಂದು ತಿಳಿಸಿದೆ. ೨. ಬೆಂಗಳೂರು, ಫೆ.೭: ಟೀಂ ಇಂಡಿಯಾದ ವೇಗಿ ಪ್ರವೀಣ್ ಕುಮಾರ್ ಮತ್ತೆ ತಂಡ ಸೇರುವುದು ಸಕತ್ ಕಷ್ಟವಾಗಲಿದೆ. ಗಾಯಾಳುವಾಗಿರುವ ಪ್ರವೀಣ್ ಅವರು ಮೈದಾನದಲ್ಲಿ ಆಡಲು 'ಮಾನಸಿಕ ಸಾಮರ್ಥ್ಯ' ಹೊಂದಿಲ್ಲ ಎಂದು ಮ್ಯಾಚ್ ರೆಫ್ರಿಯೊಬ್ಬರು ಸರ್ಟಿಫಿಕೇಟ್ ನೀಡಿದ್ದಾರೆ. ಎದುರಾಳಿ ತಂಡದ ಆಟಗಾರರ ಜೊತೆ ಪ್ರವೀಣ್ ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಪ್ರವೀಣ್ ನಡವಳಿಕೆ ಗಮನಿಸಿದರೆ ಮೈದಾನದಲ್ಲಿ ಆಡಲು ಬೇಕಾದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರುವುದು ಕಂಡುಬರುತ್ತದೆ ಎಂದು ರೆಫ್ರಿ ಹೇಳಿದ್ದಾರೆ. ಪ್ರವೀಣ್ ಕುಮಾರ್ ಸ್ಥಿತಿ ಗತಿ ಬಗ್ಗೆ ವಿವರವಾಗಿ ಬರೆದಿರುವ ಡಿಎನ್ ಎ ಪತ್ರಿಕೆ, ಬಿಸಿಸಿಐನ ಕಾರ್ಪೋರೇಟ್ ಟ್ರೋಫಿ ಟೂರ್ನಮೆಂಟ್ ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದೆ. ಫೆ.4 ರಂದು ಒಎನ್ ಜಿಸಿ ಹಾಗೂ ಆದಾಯ ತೆರಿಗೆ ಇಲಾಖೆ ತಂಡಗಳ ನಡುವೆ ರಾಯ್ ಪುರ್ ನಲ್ಲಿ ಪಂದ್ಯ ನಡೆದಿತ್ತು. 26 ವರ್ಷದ ಪ್ರವೀಣ್ ಕುಮಾರ್ ಅವರು ಒಎನ್ ಜಿಸಿ ಪರ ಆಡುತ್ತಿದ್ದರು. ಒಂದು ಹಂತದಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಅಜಿತೇಶ್ ಅರ್ಗಲ್ ಅವರನ್ನು ನಿಂದಿಸಿದ್ದಲ್ಲದೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾದರು. ಮೈದಾನದಲ್ಲಿದ್ದ ಅಂಪೈರುಗಳಾದ ಅಜಿತ್ ಎಸ್ ದಾತಾರ್ ಹಾಗೂ ಕಮಲೇಶ್ ಶರ್ಮ ಅವರು ನಿಯಮ ೨.೨.೮ ಅಡಿಯಲ್ಲಿ ಪ್ರವೀಣ್ ನಡವಳಿಕೆ ಶಿಕ್ಷಾರ್ಹ ಎಂದು ವರದಿ ನೀಡಿದ್ದಾರೆ. ಎಲ್ಲಾ ವರದಿ ನೋಡಿದ ಮೇಲೆ ಮ್ಯಾಚ್ ರೆಫ್ರಿ ಧನಂಜಯ್ ಸಿಂಗ್ ಅವರು ಪ್ರವೀಣ್ ಅವರು 'mentally unfit' ಎಂದು ಪ್ರಮಾಣ ಪತ್ರ ನೀಡಿದ್ದಾರೆ.ಇಲ್ಲಿಗೆ ಈ ಗಲಾಟೆ ನಿಲ್ಲದೆ,ಬ್ಯಾಟ್ಸ್ ಮನ್ ಗೆ ತಲೆಯಲ್ಲಿ ಗುದ್ದುತ್ತಾ, ಎದೆಗೆ ಹೊಡೆಯಲು ಪ್ರವೀಣ್ ಕುಮಾರ್ ಮುಂದಾಗಿದ್ದಾರೆ. ಪ್ರವೀಣ್ ಕುಮಾರ್ ಈ ರೀತಿ ಜಗಳವಾಡುವುದು ಹೊಸದೇನಲ್ಲ. ಆದರೆ, ಯಾರೂ ಪ್ರವೀಣ್ 'ಮೆಂಟಲ್' ಎಂದು ಹೇಳಿರಲಿಲ್ಲ. ಮೀರತ್ ನಲ್ಲಿ ಡಾಕ್ಟರ್ ರೊಬ್ಬರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದ ಪ್ರವೀಣ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ ಪ್ರೇಕ್ಷಕರ ಜೊತೆ ಕಿತ್ತಾಟವಾಡಿದ್ದರು.ಗಾಯಾಳುವಾಗಿದ್ದ ಪ್ರವೀಣ್ ಕುಮಾರ್ ಅವರು ಟೀಂ ಇಂಡಿಯ ಸೇರುವ ತವಕದಲ್ಲಿದ್ದಾರೆ. ಇದಕ್ಕೂ ಮುನ್ನ ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡಲಿದ್ದು, ಏಪ್ರಿಲ್3ಕ್ಕೆ ಪಂದ್ಯವಾಡಬೇಕಿದೆ. 2011ರ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಪ್ರವೀಣ್ ಕಾಣಿಸಿಕೊಂಡಿದ್ದರು. ಒಟ್ಟು ೬ ಟೆಸ್ಟ್ ಪಂದ್ಯ, ೬೮ ಏಕದಿನ ಪಂದ್ಯ ಹಾಗೂ ೧೦ ಟಿ೨೦ ಪಂದ್ಯಗಳನ್ನು ಆಡಿದ್ದಾರೆ. ೩.ನವದೆಹಲಿ, ನ.೩೦: ವಿಂಡೀಸ್ ವಿರುದ್ಧದ ಪಂದ್ಯಗಳಿಂದ ಹೊರಬಿದ್ದಿದ್ದ ವೇಗಿ ಪ್ರವೀಣ್‌ ಕುಮಾರ್‌ ಅವರು ಆಸ್ಟ್ರೇಲಿಯಾ ಸರಣಿಗೂ ಅಲಭ್ಯರಾಗಿದ್ದಾರೆ. ಪಕ್ಕೆಲುಬು ಮುರಿತಕ್ಕೊಳಗಾಗಿರುವ ಪ್ರವೀಣ್ ವಿಂಡೀಸ್‌ ವಿರುದ್ಧದ ಮೊದಲ ೩ ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು. ಸ್ಕ್ಯಾನಿಂಗ್‌ ವರದಿ ನಂತರ ಅವರಿಗಿರುವ ಸಮಸ್ಯೆಯ ಗಂಭೀರತೆಯ ಅರಿವಾಗಿದೆ. ಹೀಗಾಗಿ ಅವರಿಗೆ ಐದಾರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಪ್ರವೀಣ್ ಬದಲಿಗೆ ಮಿಥುನ್: ಡಿ. ೫ರಂದು ಅಹಮದಾಬಾದ್‌ನಲ್ಲಿ ವಿಂಡೀಸ್‌ ವಿರುದ್ಧದ ಏಕದಿನ ಸರಣಿಯ ಉಳಿದೆರಡು ಪಂದ್ಯಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗುವುದು ಜೊತೆಗೆ ಪ್ರವೀಣ್ ಬದಲಿ ಆಯ್ಕೆಯೂ ನಡೆಯಲಿದೆ. ವಿಂಡೀಸ್‌ ವಿರುದ್ಧದ ಏಕದಿನ ಸರಣಿಗೆ ಪ್ರವೀಣ್‌ ಕುಮಾರ್‌ಗೆ ಬದಲಿಯಾಗಿ ಕರ್ನಾಟಕದ ಅಭಿಮನ್ಯು ಮಿಥುನ್‌ ಸ್ಥಾನ ಪಡೆದಿದ್ದಾರೆ. ಇವರ ಸಹಿತ ಎಸ್‌. ಶ್ರೀಶಾಂತ್‌, ವಿನಯ್‌ ಕುಮಾರ್‌ ಆಸ್ಟ್ರೇಲಿಯ ವಿಮಾನವೇರುವ ಸ್ಪರ್ಧೆಯಲ್ಲಿದ್ದಾರೆ. ಆಸೀಸ್‌ ಪ್ರವಾಸಕ್ಕೆ ಆಯ್ಕೆಯಾಗಿರುವ ವೇಗಿಗಳಾದ ಜಹೀರ್‌ ಖಾನ್‌, ಇಶಾಂತ್‌ ಶರ್ಮ, ಉಮೇಶ್‌ ಯಾದವ್‌ ಮತ್ತು ವರುಣ್‌ ಆರೋನ್‌ ಜೊತೆ ಸೇರಲು ಶ್ರೀಶಾಂತ್, ವಿನಯ್ ಕುಮಾರ್ ಹಾಗೂ ಮಿಥುನ್ ನಡುವೆ ಪೈಪೋಟಿ ನಡೆದಿದೆ. ೪.ಬೆಂಗಳೂರು, ಫೆ. ೮: ಭಾರತ ತಂಡದ ಪ್ರಮುಖ ವೇಗದ ಬೌಲರ್ ಪ್ರವೀಣ್ ಕುಮಾರ್ ಅವರ ಬದಲಿಗೆ ಕೇರಳ ವೇಗಿ ಶ್ರೀಶಾಂತ್ ಅವರು ವಿಶ್ವಕಪ್ ಕ್ರಿಕೆಟ್ ೨೦೧೧ರಲ್ಲಿ ಆಡಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರವೀಣ್ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅವರು ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಗುಳಿವುದು ಅನಿವಾರ್ಯವಾಗಿದೆ. ಪ್ರವೀಣ್ ಬದಲಿಗೆ ಸ್ಥಾನ ಪಡೆಯಲುಕರ್ನಾಟಕದ ವೇಗಿ ಹಾಗೂ ಕೇರಳದ ವೇಗಿ ಶ್ರೀಶಾಂತ್‌ ನಡುವೆ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಶ್ರೀಶಾಂತ್ ಗೆ ಅದೃಷ್ಟ ಒಲಿದಿದೆ.