ವಿಷಯಕ್ಕೆ ಹೋಗು

ಪ್ರಭಾ ಬೆಂಡಿಗೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಧಾರವಾಡ ಬಾನುಲಿ ಕೇಂದ್ರದ 'ಪ್ರಪ್ರಥಮ ಮಹಿಳಾ ಬಾನುಲಿ ಕಾರ್ಯಕ್ರಮ ನಿರೂಪಕಿ'ಯಾಗಿ ಆಯ್ಕೆಯಾದರು. ಮಧುರ ಕಂಠ, ಉತ್ತಮ ಶಾರೀರ, ಸ್ಪಷ್ಟ ಕನ್ನಡ ಭಾಷಾ ಉಚ್ಚಾರಣೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಅವರಿಗೆ ಈ ವಲಯದಲ್ಲಿ ಹೆಚ್ಚು ಸಾಧಿಸಲು ಅವಕಾಶವಾಯಿತು. ಅವರೊಬ್ಬ 'ಒಳ್ಳೆಯ ಹಾಸ್ಯ ಲೇಖಕಿ' ಸಹಿತ. ೪೦ ವರ್ಷಗಳ ಆಕಾಶವಾಣಿಯ ಅನೌಂಸರ್ ನೌಕರಿಯಲ್ಲಿ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಅದಲ್ಲದೆ ಹಲವಾರು ಮಾರ್ಪಾಟುಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಸಂಗ ಬಂತು.

ಜನನ, ಬಾಲ್ಯ, ವಿದ್ಯಾಭ್ಯಾಸ, ಹಾಗೂ ವೃತ್ತಿ ಜೀವನ

[ಬದಲಾಯಿಸಿ]

ಸನ್, ೧೯೪೮ ರಲ್ಲಿ ಇಂಟರ್ ಮೀಡಿಯೇಟ್ ಓದುತ್ತಿರುವಾಗಲೇ 'ಧಾರವಾಡ ಬಾನುಲಿಕೇಂದ್ರ' ರೂಪುಗೊಂಡಿತು. ಧಾರವಾಡ ಸಂಸ್ಕೃತಿ, ಸಂಗೀತ, ಭಾಷೆ, ಹಾಗೂ ಅಲ್ಲಿನ ಜನಜೀವನವನ್ನು ರೂಪಿಸುವಲ್ಲಿ 'ಆಕಾಶವಾಣಿ ಕೇಂದ್ರ'ದ ಕೊಡುಗೆ ಅಪಾರ. ತಾಯಿ ಯಮುನಾಬಾಯಿ ಒಬ್ಬ ಸಂಪ್ರದಾಯಸ್ಥ ಮನೆತನದವರು. ತಂದೆ, ಹನುಮಂತರಾವ್ ಬೆಂಡಿಗೇರಿ ಸಬ್ ರಿಜಿಸ್ಟ್ರಾರ್ ಆಗಿದ್ದರು. ಅಜ್ಜ,ಬಾಳಾಜಿರಾವ್ ಬೆಂಡಿಗೇರಿ 'ಸವಣೂರು ನವಾಬರ' ಹತ್ತಿರ 'ದಿವಾನ'ರಾಗಿ ಕೆಲಸಮಾಡುತ್ತಿದ್ದರು. ಅವರ ಇನ್ನೊಬ್ಬ ಅಜ್ಜ, ಕೃಷ್ಣರಾವ್ ಬೆಂಡಿಗೇರಿ, ಎಜುಕೇಶನ್ ಇನ್ಸ್ ಪೆಕ್ಟರ್ ಆಗಿದ್ದರು. ಇಂತಹ 'ಸುಶಿಕ್ಷಿತ ಸುಸಂಸ್ಕೃತ ಪರಿವಾರ'ದಲ್ಲಿ ಬೆಳೆದ 'ಪ್ರಭಾ' ತಮ್ಮ ಮನೆತನದಲ್ಲಿ ಮೊಟ್ಟಮೊದಲು ಪದವಿ ಗಳಿಸಿದ 'ಪೋರಿ'ಯಾಗಿದ್ದಳು. ಇನ್ನೂ ೮ ವರ್ಷದ ಪ್ರಾಯದಲ್ಲೇ ನಾಟಕ ಕಲೆಯಲ್ಲಿ ಪರಮಾಸಕ್ತಿ ಹೊಂದಿದ್ದರು. ಅನೇಕ ನಾಟಕಗಳಲ್ಲಿ ಅಭಿನಯಿದಮೇಲೆ ಸಹಜವಾಗಿಯೇ ಅಭಿನಯ ಕಲೆ ಅವರಿಗೆ ಕರಗತವಾಯಿತು. ಆಕಾಶವಾಣಿಯ ನೌಕರಿ, ಪೂರ್ಣಾವಧಿಯ ಕೆಲಸವಾಗಿರಲಿಲ್ಲ. ಕರೆದಾಗ ಹೋಗಿ ಕಾರ್ಯ ನಿರ್ವಹಿಸಿ ಬರುವ ಜವಾಬ್ದಾರಿ ಅವರಮೇಲಿತ್ತು.ಆದರೆ ಅದು ಸುಶುಪ್ತವಾಗಿದ ಕಲೆಯನ್ನು ಗುರುತಿಸಿ ಅತ್ಯುತ್ತಮ ವೇದಿಕೆಯನ್ನಿ ಕಲ್ಪಿಸಿಕೊಟ್ಟಿತು. ೧೯೫೧ ರಲ್ಲಿ 'ಬಿ.ಎ.ಪದವಿ' ಮುಗಿಸಿ ಸುಮಾರು ೨೪ ವರ್ಷಗಳ ತರುವಾಯ 'ಬಿ.ಎಡ್' ಮುಗಿಸಿದರು. ಅವರ ಪತಿ, ಡಾ. ಕೆ. ರಾಘವೇಂದ್ರ ರಾವ್ ನಾಟಕಗಳಲ್ಲಿ ಅಭಿನಯಿಸುವುದಕ್ಕಾಗಲೀ ನೌಕರಿಮಾಡುವುದಕ್ಕಾಗಲೀ ಅಡ್ಡಿಬರಲಿಲ್ಲ. ಈದಂಪತಿಗಳಿಗೆ, ಇಬ್ಬರು ಗಂಡು ಮಕ್ಕಳು, ಹಾಗೂ ಇಬ್ಬರು ಹೆಣ್ಣುಮಕ್ಕಳು.

ಪ್ರಭಾ ಬೆಂಡಿಗೇರಿಯವರ ವ್ಯಕ್ತಿತ್ವ

[ಬದಲಾಯಿಸಿ]

ಪ್ರಭಾರವರ, ಕಾರ್ಯಕ್ರಮ ನಿರೂಪಣಾ ವೈಖರಿ, ಮಧುರವಾದ ಕಂಠ, ಜನಪ್ರಿಯತೆ ಪಡೆಯಲು ಅವಕಾಶವಾಯಿತು. ಧಾರವಾಡ ಆಕಾಶವಾಣಿ ಕೆಂದ್ರದ ನಿರ್ವಾಹಕರಾಗಿದ್ದ ಡಾ.ಎಚ್. ಕೆ. ರಂಗನಾಥರ ನಿರ್ದೆಶದಲ್ಲಿ ಅನೇಕ ರೇಡಿಯೋ ನಾಟಗಳು ಬಹಳಷ್ಟು ಜನಪ್ರಿಯವಾದವು. ಕುವೆಂಪುರವರ ವಾಲ್ಮೀಕಿಯ ಭಾಗ್ಯ ಎಂಬ ನಾಟಕದಲ್ಲಿ ಸೀತೆಯ ಪಾತ್ರವನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿದ್ದಕ್ಕೆ ಶೋತೃಗಳಮೆಚ್ಚುಗೆಗೆ ಪಾತ್ರರಾದರು. ಅದರಲ್ಲಿ ನಿರ್ದೇಶನದ ಜೊತೆಗೆ 'ರಂಗನಾಥ'ರೂ ಕಂಠದಾನದಲ್ಲಿ ಪಾಲ್ಗೊಂಡಿದ್ದರು. ಸ್ತ್ರೀ-ಪುರುಷರು ಸೇರಿ ನಟಿಸುವ ಹೊಸಸಂಪ್ರದಾಯ ಆಕಾಲದಲ್ಲೆ ಆರಂಭವಾಯಿತು. 'ರೇಡಿಯೋನಾಟಕ', ಹಾಗೂ 'ಹವ್ಯಾಸೀ ರಂಗಭೂಮಿ'ಯಲ್ಲಿ 'ಮಿಕ್ಸ್ ಡ್ರಾಮ'ಗಳಲ್ಲಿ 'ಪ್ರಭಾ' ಚೆನ್ನಾಗಿ ಅಭಿನಯಿಸುತ್ತಾಬಂದರು. ನಾಟಕ, ಸಿನಿಮಾಗಳಲ್ಲಿ ಪಾತ್ರವಹಿಸಲು ಮಡಿವಂತ ಕುಟುಂಬಗಳು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಕೆಲವು ವರ್ಗ ಜನರು ಮಾತ್ರ ಅದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಪರಿಸ್ಥಿಯಲ್ಲಿ ಪ್ರಭಾರವರು ಆ ಒಂದು ಮಾನಸಿಕ ಸ್ಥಿತಿಯನ್ನು ಬದಲಾಯಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ ಬೇರೆಯವರಿಗೂ ದಾರಿದೀಪವಾದರು.

ನಾಟಕಗಳು

[ಬದಲಾಯಿಸಿ]
  • ಹೊಸ ಸಂಸಾರ’ ದ.ರಾ.ಬೆಂದ್ರೆಯವರ ರಚನೆ.
  • ಸಂಧ್ಯಾ ಕಾಲ’ ಶ್ರೀರಂಗ ವಿರಚಿತ.
  • ಭಾಗ್ಯಶ್ರೀ, ಎಲ್.ಜಿ.ಬೇಂದ್ರೆಯವರ ರಚನೆ.
  • ಬೊಂಬಾಯಿನ ಜೈಹಿಂದ್ ಕಾಲೇಜ್ ಆಯೋಜಿಸಿದ ನಾಟಕೋತ್ಸವ ಸ್ಪರ್ಧೆಯಲ್ಲಿ 'ಪರಿವರ್ತನೆ', ಎಂಬ ಹವ್ಯಾಸಿ ನಾಟಕದಲ್ಲಿ ನಾಟಕ ದ್ವಿತೀಯ ಸ್ಥಾನ ಪಡೆಯಿತು. ಪ್ರಭಾ ಬೆಂಡಿಗೇರಿಯವರ, ವೈಯಕ್ತಿಕ ಅಭಿನಯಕ್ಕೆ ಮೊದಲ ಪಾರಿತೋಷಕ, ದೊರೆಯಿತು.'ಕರ್ನಾಟಕ ಕಲಾವಿದೆ'ಯೆಂಬ ಗೌರವಕ್ಕೆ ಪಾತ್ರರಾದರು.

ಹಾಸ್ಯ ಪ್ರಬಂಧ

[ಬದಲಾಯಿಸಿ]

ಬಾಹ್ಯ ಸಂಪರ್ಕ

[ಬದಲಾಯಿಸಿ]