ವಿಷಯಕ್ಕೆ ಹೋಗು

ಪ್ರನಾಳ ಶಿಶು ಸೃಷ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರನಾಳ ಶಿಶು ಸೃಷ್ಟಿ
Illustrated schematic of IVF with
single-sperm injection (ICSI )
Synonymsಐ. ವಿ. ಎಫ್.
ICD-10-PCS8E0ZXY1
MeSHD005307

ಪ್ರನಾಳ ಶಿಶು ಸೃಷ್ಟಿ ಎಂಬುದು ಲ್ಯಾಟಿನ್ ಭಾ‍‍‍ಷೆಯ ಇನ್ ವಿಟ್ರೊ ಫರ್ಟಿಲೈಸೇಷನ್ (in vitro fertilisation) ಎಂಬುದರ ಕನ್ನಡ ತರ್ಜುಮೆ. ಹಾಗೆಂದರೆ "ಗಾಜಿನಲ್ಲಾದದ್ದು". ಫಲೀಕರಣ ಪ್ರಕ್ರಿಯೆಯಲ್ಲಿ, ಅಂಡ ಹಾಗು ವೀರ್ಯವನ್ನು ದೇಹದ ಹೊರಗೆ ಸಂಯೋಜಿಸಲಾಗುತ್ತದೆ. ಮಹಿಳೆಯ ಅಂಡೋತ್ಪತ್ತಿ ಮತ್ತು ಬೆಳವಣಿಗೆಯ ಪ್ರಕ್ರಿಯೆಯನ್ನು ಉತ್ತೇಜಿಸಿದ ನಂತರ, ಮಹಿಳೆಯ ಅಂಡಾಶಯದಿಂದ ಅಂಡಾಣುವನ್ನು ತೆಗೆದು, ಗಂಡಿನ ವೀರ್ಯದ ಮೂಲಕ ಪ್ರಯೋಗಾಲಯದಲ್ಲಿ ದ್ರವ ಮಾಧ್ಯಮದಲ್ಲಿ ಫಲವತ್ತಾಗಿಸುತ್ತಾರೆ. ಫಲವತ್ತಾದ ಮೊಟ್ಟೆ (ಸೈಗೋಟ್) ೨ ರಿಂದ ೬ ದಿನಗಳಷ್ಟರಲ್ಲಿ ಭ್ರೂಣವಾಗುತ್ತದೆ. ನಂತರ ಯಶಸ್ವಿ ಗರ್ಭಧಾರಣೆಯನ್ನು ಮಾಡಿಸುವ ಉದ್ದೇಶದಿಂದ, ಅದೇ ಅಥವಾ ಇನ್ನೊಬ್ಬ ಮಹಿಳೆಯ ಗರ್ಭಾಶಯಕ್ಕೆ ಈ ದ್ರವವನ್ನು ವರ್ಗಾಯಿಸಲಾಗುತ್ತದೆ. ಐ. ವಿ. ಎಫ್. ಯು ಬಂಜೆತನಕ್ಕೆ ಪರಿಹಾರ ನೀಡುವ ಒಂದು ರೀತಿಯ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ.[೧]

ಇತಿಹಾಸ[ಬದಲಾಯಿಸಿ]

೧೯೭೮ರಲ್ಲಿ ಐವಿಎಫ್ ಚಿಕಿತ್ಸೆಯ ನಂತರ,ಲೂಯಿಸ್ ಬ್ರೌನ್ ಇವರದ್ದು ಮೊದಲ ಯಶಸ್ವಿ ಜನನ.[೨] ಈ ಪ್ರಕ್ರಿಯೆಯು ಇಂಗ್ಲೆಂಡಿನ ಓಲ್ಡ್‌ಹ್ಯಾಮ್‍ನಲ್ಲಿರುವ ರಾಯಟನ್ ಡಾ. ಕೆರ್ಶಾಸ್ ಕಾಟೇಜ್ ಹಾಸ್ಪಿಟಲ್‌ನಲ್ಲಿ (ಈಗಿನ ಡಾ. ಕೆರ್ಶಾ ಅವರ ಹಾಸ್ಪಿಟಲ್) ನಡೆಯಿತು. ೧೯೭೮ ರಲ್ಲಿ ರಾಬರ್ಟ್ ಜಿ. ಎಡ್ವರ್ಡ್ ಇವರಿಗೆ ಶರೀರವಿಜ್ಞಾನ ಅಥವಾ ಔಷಧಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಅಕ್ಟೋಬರ್ ೩, ೧೯೭೮ ರಲ್ಲಿ, ಲೂಯಿಸ್ ಬ್ರೌನ್ ಜನಿಸಿದ ೬೭ ದಿನಗಳ ನಂತರ ಭಾರತದಲ್ಲಿ ಎರಡನೆಯ ಟೆಸ್ಟ್ ಟ್ಯೂಬ್ ಮಗುವಿನ ಜನನ ಯಶಸ್ವಿಯಾಯಿತು.[೩] ಈ ಶಿಶು "ದುರ್ಗಾ" ಳ ಜನನಕ್ಕೆ ಕಾರಣೀಭೂತರಾದವರು ಡಾ. ಸುಭಾಶ್ ಮುಖ್ಯೋಪಾಧ್ಯಾಯ ಅವರು.

೨೦೧೨ರಲ್ಲಿ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಸುಮಾರು ಐವತ್ತು ಲಕ್ಷ ಮಕ್ಕಳು ಹುಟ್ಟಿದ್ದಾರೆ ಎಂದು ಹೇಳಲಾಗಿದೆ.[೪]

ಉಪಯೋಗ[ಬದಲಾಯಿಸಿ]

ಪ್ರನಾಳ ಶಿಶು ಸೃಷ್ಟಿಯು ಮಹಿಳೆಯರಲ್ಲಿಯ ಒಂದು ವಿಧದ ಬಂಜೆತನಕ್ಕೆ ಒಂದು ರೀತಿಯ ಪರಿಹಾರವಾಗಿರುತ್ತದೆ. ಕೆಲವು ಮಹಿಳೆಯರಲ್ಲಿ ಫಾಲೋಪಿಯನ್ ಟ್ಯೂಬ್‍ಗಳು ಸರಿಯಾಗಿರುವುದಿಲ್ಲ. ಇದರಿಂದಾಗಿ ಅಂಡಗಳು ಗರ್ಭಕೋಶವನ್ನು ಸೇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಈ ವಿಧಾನದ ಮೂಲಕ ಕೃತಕ ಗರ್ಭ ಧರಿಸುವ ಪ್ರಕ್ರಿಯೆಯನ್ನು ದೇಹದ ಹೊರಗೆ ಮಾಡಿ ನಂತರ ಹಾಗೆ ತಯಾರಿಸಲ್ಪಟ್ಟ ಭ್ರೂಣವನ್ನು ದೇಹದ ಒಳಕ್ಕೆ ಸೇರಿಸಿ ಶಿಶು ಸೃಷ್ಟಿ ಮಾಡಲಾಗುತ್ತದೆ.

ವಿಧಾನ[ಬದಲಾಯಿಸಿ]

  • ಅಂಡಾಣು ಆವರ್ತವನ್ನು ಪರಿಶೀಲಿಸಲಾಗುತ್ತದೆ.
  • ಅಂಡಾಣುಗಳನ್ನು ಅಂಡಾಶಯದಿಂದ ತೆಗೆಯಲಾಗುತ್ತದೆ.
  • ಪ್ರಯೋಗಾಲಯದಲ್ಲಿ ಸಂಸ್ಕರಿಸಿದ ದ್ರವ್ಯವನ್ನು ಫಲವತ್ತಾಗಲು ಅನುವು ಮಾಡಲಾಗುತ್ತದೆ.
  • ಭ್ರೂಣವನ್ನು ಗರ್ಭಾಶಯಕ್ಕೆ ರವಾನಿಸಲಾಗುತ್ತದೆ.

ಈ ಪ್ರಕ್ರಿಯೆಯು ಬಹಳ ಸೂಕ್ಷ್ಮವಾಗಿರುವುದರಿಂದ ಅನೇಕ ತಜ್ಞರು ಪ್ರಯೋಗಶಾಲೆಯಲ್ಲಿ ಭಾಗವಹಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ವೈದ್ಯ ವಿಶ್ವಕೋಶ, ನಾಡೋಜ ಡಾ, ಪಿ. ಎಸ್. ಶಂಕರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪ್ರಕಟಣೆ ೨೦೧೭, ಪುಟ- ೭೦
  2. https://www.independent.co.uk/life-style/health-and-families/health-news/worlds-first-test-tube-baby-louise-brown-has-a-child-of-her-own-432080.html
  3. "ಆರ್ಕೈವ್ ನಕಲು". Archived from the original on 2018-10-23. Retrieved 2018-10-15.
  4. https://www.fertstert.org/article/S0015-0282(13)02586-7/fulltext