ವಿಷಯಕ್ಕೆ ಹೋಗು

ಪ್ರತಿನಿಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೀಠಿಕೆ

[ಬದಲಾಯಿಸಿ]

ಪ್ರತಿನಿಯೋಜನೆಯು ವ್ಯವಹಾರ ಸಂಸ್ಥೆಯ ಸುಸೂತ್ರ ಕಾರ್ಯಾಚರಣೆಗೆ ಅಗತ್ಯವಾಗಿದೆ.ಇದರ ಉದ್ದೇಶ ಯಾವುದೇ ನಿರ್ವಾಹಕನು ಎಷ್ಟೇ ಸಮರ್ಥನಾಗಿದ್ದರೂ,ಎಲ್ಲಾ ಕಾರ್ಯಗಳನ್ನು ಅವನೇ ನಿರ್ವಹಿಸಲು ಸಾಧ್ಯವಿಲ್ಲ.ಇದರಿಂದ ಅಧಿಕಾರವು ಮೇಲ್ಮಟ್ಟದಿಂದ ಕೆಳಗಿನ ಹಂತದವರೆಗೆ ಹರಿಯುವ ಕ್ರಿಯೆಯಾಗಿದೆ.ಇದರಿಂದ ಒಂದು ಸಂಸ್ಥೇಯಲ್ಲಿ ಅಧಿಕಾರವು ಮೇಲಾಧಿಕಾರಿ ಅಥವಾ ನೌಕರರ ಸಂಬಂಧಗಳನ್ನು ನಿರ್ಧರಿಸುತ್ತದೆ.ಇದರಲ್ಲಿ ಮೇಲಾಧಿಕಾರಿಯು ಕಾರ್ಯನಿರ್ವಹಿಸುವ ಸೂಚನೆಗಳನ್ನು ಅಧೀನ ಸಿಬ್ಬಂದಿಗೆ ನೀಡುತ್ತಾನೆ.ಇವರು ಸೂಚನೆಗಳಂತೆ ಕಾರ್ಯನಿರ್ವಹಿಸುವರು.ಇ ಅಧಿಕಾರ ವ್ಯಾಪ್ತಿಯಲ್ಲಿ ಅಧೀನ ಸಿಬ್ಬಂದಿಯ ಕಾರ್ಯಗಳಿಗೆ ಮೇಲಾಧಿಕಾರಿಯು ಸವಾಬ್ದಾರಿಯಾಗುತ್ತಾನೆ.

ನಿರ್ದಿಷ್ಟ ಕಾರ್ಯನಿರ್ವಹಿಸುವ ಅಧಿಕಾರವನ್ನು ಮೇಲಾಧಿಕಾರಿಯು ತನ್ನ ಅಧೀನ ನೌಕರರಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಪ್ರತಿನಿಯೋಜನೆ ಎನ್ನುವರು.

ವ್ಯಾಖ್ಯೆ

[ಬದಲಾಯಿಸಿ]

ಥಿಯೋ ಹೈಮನ್ರವರ ಪ್ರಕಾರ "ಅಧಿಕಾರ ಪ್ರತಿನಿಯೋಜನೆಯೆಂದರೆ ಅಧೀನ ಸಿಬ್ಬಂದಿಗೆ ಒಂದು ಮಿತಿಯ ಒಳಗೆ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡುವುದಾಗಿದೆ".

ಪ್ರತಿನಿಯೋಜನೆಯ ಅಂಶಗಳು

[ಬದಲಾಯಿಸಿ]

೧. ಅಧಿಕಾರ

[ಬದಲಾಯಿಸಿ]

ಅಧಿಕಾರವೆಂದರೆ ಅಧೀನ ಸಿಬ್ಬಂದಿಗೆ ಆಜ್ಞಾಪಿಸುವ,ಅವರು ನಿರ್ವಹಿಸುವ ಕಾರ್ಯಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದೆ.ಅಧಿಕಾರವು ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ನಡುವೆ ಸಂಬಂಧಗಳನ್ನು ನಿರ್ಧರಿಸುತ್ತದೆ.

೨. ಜವಾಬ್ದಾರಿ

[ಬದಲಾಯಿಸಿ]

ಅಧೀನ ಸಿಬ್ಬಂದಿಯು ತನಗೆ ನೀಡಿದ ಕಾರ್ಯವನ್ನು ನಿರ್ವಹಿಸುವುದಕ್ಕೆ ಜವಾಬ್ದಾರಿ ಎನ್ನುವರು.ಇದು ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ನಡುವೆ ಸಂಬಂಧಿಸಿದೆ,ಏಕೇಂದರೆ ಅಧೀಣ ಸಿಬ್ಬಂದಿಯು ತನಗೆ ನೀಡಿರುವ ಕಾರ್ಯವನ್ನು ನಿರ್ವಹಿಸುವ ಕರ್ತವ್ಯವಾಗಿದೆ.

೩ ಉತ್ತರದಾಯಿತ್ವ

[ಬದಲಾಯಿಸಿ]

ಅಂತಿಮ ಫಲಿತಾಂಶವನ್ನು ಉತ್ತರಿಸುವ ಜವಾಬ್ದಾರಿಯೇ ಉತ್ತರದಾಯಿತ್ವವಾಗಿದೆ.

ಪ್ರತಿನಿಯೋಜನೆಯ ಪ್ರಾಮುಖ್ಯತೆಗಳು

[ಬದಲಾಯಿಸಿ]

ಪರಿಣಾಮಕಾರಿ ನಿರ್ವಹಣೆ

ನೌಕರರ ಅಭಿವೃದ್ಧಿ

ಬೆಳೆವಣಿಗೆಗೆ ಸಹಕಾರಿ

ನಿರ್ವಹಣೆಯ ಅಧಿಕಾರ ಶ್ರೇಣಿಗೆ ಆಧಾರ

ಉತ್ತಮ ಹೊಂದಾಣಿಕೆ

ಶೀಘ್ರ ನಿರ್ಧಾರ ಸಾಧ್ಯ