ಪ್ರಕಾಶ್ ಕಡಮೆ
ಗೋಚರ
ಪ್ರಕಾಶ ಕಡಮೆ [೧]ಕವಿ, ಬರಹಗಾರ. ವರ್ತಮಾನದ . ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವುದೇ ಇವರ ಕವನದ ಮೂಲ ಮಂತ್ರ. ಇವರ ಕೃತಿ ಜನಪರ ಕಾಳಜಿಯದ್ದಾಗಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಕಡಮೆಯವರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಕೃಷಿ ನಡೆಸಿದವರು. ನಾಗರಿಕ, ನುಡಿಜೇನು, ಜನಧ್ವನಿ, ಪ್ರಜಾವಾಣಿ, ಸಂಕ್ರಮಣ, ವಿಶ್ವವಾಣಿ, ನವೀನಚಂದ್ರ, ಸ್ನೇಹ ಸಂಬಂಧ, ಕರ್ನಾಟಕ ಮಲ್ಲ ಮೊದಲಾದ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ.
ಪರಿಚಯ
[ಬದಲಾಯಿಸಿ]- ಪತ್ನಿ ಸುನಂದಾ ಕಡಮೆ, ಮಕ್ಕಳು-ಕಾವ್ಯ ಕಡಮೆ, ನವ್ಯ ಕಡಮೆ, ಪ್ರಕಾಶ್ ಕಡಮೆ[೨][೩]ಯವರು ಕವಿಗಳಾಗಿ ಆಪ್ತವಲಯದಲ್ಲಿ ಜನಜನಿತರು. ಹೊಸ ಪ್ರತಿಭೆಗಳನ್ನು ಸದಾ ಬೆನ್ನು ತಟ್ಟುವ ತಮ್ಮ ಪರಿಯಿಂದಾಗಿ ಎಲ್ಲರಿಗೂ ಪರಿಚಿತರು. ಸಾಹಿತ್ಯದ ಓದುಗರೂ, ಪ್ರೋತ್ಸಾಹಕರೂ ಆಗಿರುವ ಕವಿಹೃದಯದ ಪ್ರಕಾಶ್ ಕಡಮೆಯವರು ತಮ್ಮ ಸುತ್ತಲಿನ ಜೀವನವನ್ನು ಸದಾ ಬೆರಗಿನಿಂದ ಅವಲೋಕಿಸಿದವರು.
- ಹುಟ್ಟೂರಿನ ಬಗ್ಗೆ ಒಂದು ಹಿಡಿ ಹೆಚ್ಚೇ ಪ್ರೀತಿ ಇಟ್ಟುಕೊಂಡವರು. ಹಲವು ಬಗೆಯ ಸಾಹಿತ್ಯಗೋಷ್ಠಿಗಳನ್ನು ತಮ್ಮ ಮನೆಯಂಗಳದಲ್ಲಿ ನಡೆಸಿಕೊಂಡು ಬರುತ್ತಾ "ನಾಗಸುಧೆ ಜಗಲಿ"ಯನ್ನು ಸಾಹಿತ್ಯದ ಅಂಗಳವನ್ನಾಗಿಸಿರುವ ಕಡಮೆ ದಂಪತಿಗಳು ಈ ಬಾರಿ ನಮ್ಮೊಡನೆ ಇರುವುದು ಇಲ್ಲಿನ ಸಾಹಿತ್ಯಾಸಕ್ತರಿಗೂ ಹೆಮ್ಮೆ ತಂದಿದೆ.
- 1958 ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದಲ್ಲಿ ಜನನ. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು.
- ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ.
ನಾಗಸುಧೆ ಜಗುಲಿ
[ಬದಲಾಯಿಸಿ]ಇದರ ಮೂಲಕ ಪುಸ್ತಕ ಓದು, ಚರ್ಚೆ, ಕವಿಗೋಷ್ಠಿ, ಸಂವಾದ, ಸಾಮಾಜಿಕ ಹೋರಾಟ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಈ ಜಗಲಿಯಲ್ಲಿ ಖ್ಯಾತ ಬರಹಗಾರರಾದ ಜಯಂತ ಕಾಯ್ಕಿಣಿ, ವಿವೇಕ ಶಾನುಭೋಗ, ಪ್ರಕಾಶ್ ರೈ, ವಸುಂಧರಾ ಭೂಪತಿ, ಬಸು ಬೇವಿನಗಿಡ ಮುಂತಾದವರು ಪಾಲ್ಗೊಂಡು ಮಾತನಾಡಿದ್ದಾರೆ.
ವಿವಿಧ ಸಂಘಗಳ ಸದಸ್ಯತ್ವ
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್
- ಕರ್ನಾಟಕ ವಿದ್ಯಾವರ್ಧಕ ಸಂಘ
- ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ
- ವಿಭಾ ಸಾಹಿತ್ಯ ಸ್ಪರ್ಧೆಯ ಸಂಚಾಲಕರು
ಕೃತಿಗಳು
[ಬದಲಾಯಿಸಿ]ಕವಿತೆಗಳು
[ಬದಲಾಯಿಸಿ]- ಗಾಣದೆತ್ತು ಮತ್ತು ತೆಂಗಿನಮರ
- ಆ ಹುಡುಗಿ
- ಅಮ್ಮನಿಗೊಂದು ಕವಿತೆ
ಅಭಿನಂದನಾ ಕೃತಿ
[ಬದಲಾಯಿಸಿ]ಪರಿಮಳದಂಗಳ( ವಿಷ್ಣುನಾಯ್ಕರ ಅರವತ್ತರ ಅಭಿನಂದನೆ)
ಸಂಪಾದಿತ ಕೃತಿ
[ಬದಲಾಯಿಸಿ]ದಾಂಪತ್ಯ ನಿಷ್ಠೆ
ಪುಸ್ತಕ ಪರಿಚಯ/ವಿಮರ್ಶೆ
[ಬದಲಾಯಿಸಿ]ಕಡಲಲಿ ಕಡಮೆ
ಗೌರವ/ಪುಸ್ಕಾರ/ಪ್ರಶಸ್ತಿಗಳು
[ಬದಲಾಯಿಸಿ]- ಸಖಿಗೀತೆ ಪುರಸ್ಕಾರ-ದ.ರಾ.ಬೇಂದ್ರೆ ಟ್ರಸ್ಟ್
- ನಾಗರಿಕ ಕಾವ್ಯ ಪ್ರಶಸ್ತಿ
- ಸಂಕ್ರಮಣ ಕಾವ್ಯ ಪ್ರಶಸ್ತಿ
- ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://vijaykarnataka.com/news/dharawada/stoma-storytelling/[ಶಾಶ್ವತವಾಗಿ ಮಡಿದ ಕೊಂಡಿ] articleshow/72318944.cms
- ↑ https://m.dailyhunt.in/news/india/kannada/avadi-epaper-avadi/bangude+khyaatigenu+kadame-newsid-97926691
- ↑ http://kannadasahithyaparishattu.in/wp-content/uploads/2018/12/84th-Sammelana_Ahvana_Pathrike_Final.pdf