ಪೊರಕೆ
Jump to navigation
Jump to search
ಪೊರಕೆಯು (ಕಸಬರಿಗೆ) ಸಾಮಾನ್ಯವಾಗಿ ಸ್ಥೂಲವಾಗಿ ಉರುಳೆಯಾಕಾರದ ಹಿಡಿಗೆ ಜೋಡಣೆಗೊಂಡ ಬಿರುಸಾದ ನಾರುಗಳನ್ನು (ಇವನ್ನು ಹಲವುವೇಳೆ ಪ್ಲಾಸ್ಟಿಕ್, ಕೂದಲು, ಅಥವಾ ಮೆಕ್ಕೆಜೋಳದ ಹೊಟ್ಟಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ) ಹೊಂದಿರುವ ಒಂದು ಸ್ವಚ್ಛಗೊಳಿಸುವ ಸಾಧನ. ಹಾಗಾಗಿ ಇದು ಉದ್ದ ಹಿಡಿಯಿರುವ ಕುಂಚದ ಒಂದು ವೈವಿಧ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಮೊರದ ಸಂಯೋಜನೆಯಲ್ಲಿ ಬಳಸಲಾಗುತ್ತದೆ.
"ಗಟ್ಟಿ ಪೊರಕೆ" ಮತ್ತು "ಮೃದು ಪೊರಕೆ" ನಡುವೆ ವ್ಯತ್ಯಾಸ ಮಾಡಲಾಗುತ್ತದೆ. ಮೃದು ಪೊರಕೆಗಳನ್ನು ಗೋಡೆಗಳಿಂದ ಜೇಡರ ಬಲೆಗಳು ಹಾಗೂ ಜೇಡಗಳನ್ನು ಗುಡಿಸಲು ಬಳಸಲಾಗುತ್ತದೆ. ಗಟ್ಟಿ ಪೊರಕೆಗಳನ್ನು ಕಾಲುದಾರಿಗಳ ಮೇಲಿನ ಕಸ ಗುಡಿಸಲು ಬಳಸಲಾಗುತ್ತದೆ.