ಪೊಖರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೊಖರಾ
पोखरा उपमहानगरपालिका
Pokhara from peace stupa.jpg
ದೇಶFlag of Nepal.svg ನೇಪಾಳ
ಜಿಲ್ಲೆಕಾಸ್ಕಿ
Population
 (2006)
 • Total೨,೦೦,೦೦೦+
 • Ethnicities
GurungNewarBrahmin
 • Religions
BuddhistHinduChristian
ಸಮಯ ವಲಯGMT +5:45

ಪೊಖರಾ ನೇಪಾಳದ ಒಂದು ಊರು. ಅಲ್ಲಿನ ಪ್ರಾಕೃತಿಕ ಸರೋವರದಲ್ಲಿ ಬೆಟ್ಟದ ತುದಿಯ ಪ್ರತಿಫಲನ ಮೀನ ಬಾಲದಂತೆ ಕಾಣುತ್ತದೆ. ಪೋಖರಾದಲ್ಲಿರುವ ಮಹೇಂದ್ರ ಗುಹೆಗಳು, ಕೊರಕಲುಗಳಲ್ಲಿ ಭೋರಿಡುತ್ತಾ ಪ್ರವಹಿಸುವ ನದಿಗಳು, ಡೇವಿಸ್ ಫಾಲ್ ಎಂಬ ಪ್ರಸಿದ್ಧ ಕೊರಕಲು, ದೇಶವಿದೇಶದ ಪ್ರಶಸ್ತ ಸಾಮಗ್ರಿಗಳ ಅಂಗಡಿಗಳು, ಹಿಮಾಲಯದ ಹತ್ತಿರದ ದರ್ಶನ, ಪರ್ವತದಿಂದ ಒಸರುವ ಪರಿಶುದ್ಧ ಜಲ, ಹಿತಕರ ಪ್ರಕೃತಿ ಇತ್ಯಾದಿಗಳು ಪ್ರವಾಸಿಗಳನ್ನು ಅಲ್ಲಿಯೇ ಬಂಧಿಸಿಡುತ್ತವೆ. ಸಂಜೆಯಾಗುತ್ತಿದ್ದಂತೆ ನೇಪಾಳೀ ಸಾಂಪ್ರದಾಯಿಕ ನೃತ್ಯ ಕಣ್ಮನ ಸೆಳೆಯುತ್ತದೆ. ಅದರ ಜೊತೆಗೇ ನಾದಸ್ವರದಲ್ಲಿ ಮೂಡುವ ನೇಪಾಳೀ ಜಾನಪದ ರಾಗಗಳು ಗಂಧರ್ವಲೋಕದಲ್ಲಿ ತೇಲಿಸುತ್ತವೆ.

"https://kn.wikipedia.org/w/index.php?title=ಪೊಖರಾ&oldid=318502" ಇಂದ ಪಡೆಯಲ್ಪಟ್ಟಿದೆ