ಪೆನ್ನಿನ ಮಹತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಆಧುನಿಕ ಯುಗ ವೈಜ್ನಾವಿಕ ಯುಗವಾಗಿರುವುದರಿಂದ ನಾವು ಕಷ್ಱ ಪಡದೆ ನಮ್ಮ ಕೆಲಸಗಳನ್ನು ಮಾಡುತ್ತೇವೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕಬ್ಬಿಣದ ಕಂೞದ ಮೂಲಕ ಅಥವಾ ಹಕ್ಕಿಯ ಗರಿಯ ಮೂಲಕ ಅಕ್ಷರಗಳನ್ನು ಬರೆಯುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ ನಾವು ಪೆನ್ನನ್ನು ಬಳಸಿ ಬರೆಯುತ್ತೇವೆ. ಪೆನ್ನಿನ ಹೊಱ್ಱೆಗೆ ಶಾಯಿ ತುಂಬಿ ಕಾಗದಗಳಲ್ಲಿ ಅಕ್ಷರಗಳನ್ನು ಮೂಡಿಸುತ್ತೇವೆ. ಚಿತ್ರಗಳನ್ನು ಬಿಡಿಸುತ್ತೇವೆ. ಪೆನ್ನುಗಳಲ್ಲಿ ಎಷ್ೞೊಂದು ಬಗೆಯ ಪೆನ್ನುಗಳು! ಶಾಯಿ ಪೆನ್ನು, ಬಾಲ್ ಪೆನ್ನು, ಜೆಲ್ ಪೆನ್ನುಗಳು, ಗುಂಡಿ ಅದುಮಿದರೆ ನಿಬ್ಬು ಹೊರ ಬರುವ ಪೆನ್ನುಗಳು ಅದರೊಳಗೆ ಬಗೆ ಬಗೆಯ ಶಾಯಿಗಳು, ಕೆಂಪು, ನೀಲಿ, ಕಪ್ಪು, ಹಸಿರು ಹೀಗೆ ಎಷ್ಱೊಂದು ವಿಧಗಳು! ಈಗಂತೂ ಬಗೆಬಗೆಯ ಶೈನಿಂಗ್ ಪೆನ್ನುಗಳು, ಮಾರ್ಕರ್ ಪೆನ್ನುಗಳು, ಪೆನ್ಸಿಲ್ ಪೆನ್ನುಗಳು, ಸ್ಕೆಚ್ ಪೆನ್ನುಗಳು ಅಂಗಡಿಯಲ್ಲಿ ಸಿಗುತ್ತದೆ. ಒಂದು ರೂಪಾಯಿಯಿಂದ ಸಾವಿರಕ್ಕೂ ಹೆಚ್ಚು ಬೆಲೆಯ ಪೆನ್ನುಗಳಿವೆ ಎಂದರೆ ಏನಾಶ್ಚರ್ಯ! ಅಬ್ಬಬ್ಬಾ ಅಕ್ಷರ ಕೊರೆಯುವ ಪೆನ್ನುಗಳಿಗೂ ಇಷ್ಹೊಂದು ಬೆಲೆಯೇ? ವಿಧ್ಯಾರ್ಥಿಗಳ ಚೀಲದಲ್ಲಿ, ದೊಡ್ಡವರ ಜೀಬುಗಳಲ್ಲಿ, ಹೆಂಗಸರ ಪರ್ಸುಗಳಲ್ಲಿ ಸಾಮಾನ್ಯವಾಗಿ ಪೆನ್ನು ಕುಳಿತಿರುತದೆ. ಶಾಯಿ ಪೆನ್ನಿನ ಬಾಯಿ ಸರಿಯಾಗಿ ಮುಚ್ಚದಿದ್ದರೆ ಕಿಸೆ, ಚೀಲ, ಡ್ರೆಸ್ಸು ಎಲ್ಲಂದರಲ್ಲಿ ವಾಂತಿ ಮಾಡಿ ಬಿಡುತ್ತದೆ. ಇಂದು ನಮ್ಮಲ್ಲಿ ಅನಕ್ಷರಸ್ಛರು ಪೆನ್ನಿನ ಬದಲಾಗಿ ಕಂಪ್ಯೂವಱರ್ ಸ್ಚ್ರೀನ್ ಗಳಲ್ಲಿ ಅಕ್ಷರಗಳನ್ನು ಮೂಡಿಸುತ್ತಾರೆ. ಏನೇ ಆದರೂ ಪೆನ್ನನ್ನು ತಮ್ಮ ಸಹಿ ಹಾಕಲಿಕ್ಕಾದರೂ ಬಳಸಲೇಬೆಕಲ್ಲವೇ? ಆಧುನಿಕ ಸಮಾಜದಲ್ಲಿ ಪೆನ್ನನ್ನು ಬಳಸದ ವ್ಯಕ್ತಿ ಒಬ್ಬನೂ ಇರಲಾರ ಏಕೆಂದರೆ ಪೆನ್ನು ನಮಗೆ ಅಷ್ಱೊಂದು ಸಹಕಾರಿಯಾಗಿದೆ. ಪೆನ್ನು ನಮ್ಮ ಸ್ನೆಹಿತರಂತೆ. ಅದನ್ನೂ ಯಾವತ್ತೂ ಕಳೆದುಕೊಳ್ಳಬಾರದು. ಅಷ್ಱೊಂದು ಜಾಗರೂಕತೆಯಿಂದ ಬಳಸಿದರೆ ಅದು ನಮಗೆ ಯಾವತ್ತೂ ಸಹಕಾರಿಯಾಗುತ್ತದೆ.