ಪೂರ್ಣಿಮಾ ಸುಧಾಕರ ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search
ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ
ಜನ್ಮನಾಮ
ಪೂರ್ಣಿಮ

೩೦,ಏಪ್ರಿಲ್,೧೯೭೪ ರಲ್ಲಿ ಜನಿಸಿದರು.
ವೃತ್ತಿಪ್ರಾಧ್ಯಾಪಕಿ'
ಬಾಳ ಸಂಗಾತಿ(ಗಳು)ಸುಧಾಕರ ಶೆಟ್ಟಿ
ಪುರಸ್ಕಾರಗಳುಪಿ.ಎಚ್.ಡಿ.

ಡಾ. ಪೂರ್ಣಿಮಾ ಸುಧಾಕರ ಶೆಟ್ಟಿಯವರು,ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕಿಯಾಗಿ ಕೆಲಸಮಾಡುತ್ತಿದ್ದಾರೆ. ಬಹುಮುಖವ್ಯಕ್ತಿತ್ವದ ಪೂರ್ಣಿಮಾ ಅವರು, ನಗರದ ಕನ್ನಡ ಭಾಷೆಯ ಪ್ರಮುಖ ಬರಹಗಾರರಲ್ಲೊಬ್ಬರು. ಕಾರ್ಯಕರ್ತೆ, ಕಾರ್ಯಕ್ರಮ ನಿರೂಪಕಿ, ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ.'ಚಿಣ್ಣರ ಬಿಂಬ' ಸಂಸ್ಥೆಯ ಆಶ್ರಯದಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಯ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಮತ್ತು ನಗರದ ಕನ್ನಡ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸಮಾಡುತ್ತಿದ್ದಾರೆ.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಪೂರ್ಣಿಮಾ ಅವರು, ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ "ಕೌಡೂರಿನಲ್ಲಿ" ೩೦,ಏಪ್ರಿಲ್, ೧೯೭೪ ರಲ್ಲಿ ಜನಿಸಿದರು. [೧] ತಂದೆ ಗೋಪಾಲ ಶೆಟ್ಟಿ, ತಾಯಿ, ಸಂಪಾಶೆಟ್ಟಿ. ಪೂರ್ಣಿಮಾ ಅವರ ಪ್ರಾಥಮಿಕ ವಿದ್ಯಾಭ್ಯಾಸ 'ಮೈಕ್ ಶಾಲೆ'ಯಲ್ಲಿ ಜರುಗಿತು. ಪ್ರೌಢಶಾಲೆಯ ವಿದ್ಯಾಭ್ಯಾಸ ಸರ್ಕಾರೀ ಪದವಿಪೂರ್ವ ಕಾಲೇಜ್ ಬೈಲೂರಿನಲ್ಲಾಯಿತು. ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಈ ಸಂದರ್ಭದಲ್ಲಿ ಬೈಲೂರು ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸಮಾಡಿದರು. ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆಟೋಟಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. ಅಂತರ ಕಾಲೇಜ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. ಸತತವಾಗಿ ಮೂರುವರ್ಷ ಬಹುಮಾನ ಗಳಿಸಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.

ಬರವಣಿಗೆಯಲ್ಲಿ ಪರಮಾಸಕ್ತೆ[ಬದಲಾಯಿಸಿ]

ಶಾಲಾ ಕಾಲೇಜಿನ ದಿನಗಲ್ಲೇ ಕವನಗಳು ಮತ್ತು ಲೇಖನಗಳನ್ನು ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಹವ್ಯಾಸವಿತ್ತು. ಉದಯವಾಣಿ, ಕರ್ನಾಟಕಮಲ್ಲ, ಸ್ನೇಹ ಸಂಬಂಧ, ಬಂಟರವಾಣಿ ಅಕ್ಷಯ, ಕರವೇ, ಗಾಂಧಿಬಜಾರ್,ಸ್ಥಿತಿಗತಿ,ಮದಿಪು, ತುಳುವ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.

ವಿವಾಹ[ಬದಲಾಯಿಸಿ]

ಪೂರ್ಣಿಮಾ ಶೆಟ್ಟಿಯವರು ೩೦, ಏಪ್ರಿಲ್, ೧೯೯೮ ರಲ್ಲಿ ಗುಡ್ಡೆಯಂಗಡಿ ಪೆಲತ್ತೂರಿನ ಸುಧಾಕರ್ ಶೆಟ್ಟಿ ಯೆಂಬ ಬಿಸಿನೆಸ್ಮನ್ ಜೊತೆಗೆ ವಿವಾಹವಾದರು. ತ

ಕಾಲೇಜ್ ಶಿಕ್ಷಣ ಮುಂದುವರೆಸಿದರು[ಬದಲಾಯಿಸಿ]

 • ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ.ಎ ಪದವಿ.
 • ಸಾಹಿತಿ ಶಿಮುಂಜೆ ಪರಾರಿಯವರ ಬದುಕು ಬರಹ ಸಂಶೋಧನಾ ಲೇಖನ, ಡಾ.ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿ 'ಎಂ.ಫಿಲ್ ಪದವಿ' ಪಡೆದರು. [೨]
 •  'ಮುಂಬಯಿ ಕನ್ನಡಿಗರ ಸಾಧನೆಗಳು' ಎಂಬ ಸಂಶೋಧನೆಯ ಮಹಾಪ್ರಬಂಧ ಕೃತಿಗೆ ಪಿ.ಎಚ್.ಡಿ ಪದವಿ ದೊರೆಯಿತು.[೩]

ಮಹಾಕವಿ ಕುವೆಂಪು ದತ್ತಿನಿಧಿ ಸ್ಥಾಪನೆ[ಬದಲಾಯಿಸಿ]

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ದತ್ತಿನಿಧಿ ಆಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. [೪]

ಚಿಣ್ಣರ ಬಿಂಬ ಸಂಸ್ಥೆಯಲ್ಲಿ[ಬದಲಾಯಿಸಿ]

ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕನ್ನಡ ಕಲಿಸಲು ಹಿರಿಯ ಪೋಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ 'ಚಿಣ್ಣರ ಬಿಂಬ' [೫]ಎಂಬ ಸಂಸ್ಥೆಯಡಿಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಅಭಿಯಾನದಲ್ಲಿ ಮುಖ್ಯಸ್ಥೆಯಾಗಿ ಕಾರ್ಯನಿರತರಾಗಿದ್ದಾರೆ. ಅಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಸುಮಾರು ೫ ಸಾವಿರದಷ್ಟು.

ಕವಿಗೋಷ್ಠಿ ಮತ್ತು ವಿಚಾರಸಂಕಿರಣಗಳ ಆಯೋಜಕಿ[ಬದಲಾಯಿಸಿ]

ಕೇಂದ್ರ ಸಾಹಿತ್ಯ ಅಕಾಡೆಮಿಯವರು ಏರ್ಪಡಿಸಿದ 'ಆವಿಷ್ಕಾರ',ಯುವಕವಿಗೋಷ್ಟಿಗಳಲ್ಲದೆ,ಬೇರೆ ಬೇರೆ,ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಮುಂಬಯಿ ಆಕಾಶವಾಣಿ ನಡೆಸಿದ ಕನ್ನಡ ವಿಭಾಗ ಕವಿಸಮ್ಮೇಳನದ ನೇರಪ್ರಸಾರ ಕಾರ್ಯಕ್ರಮದಲ್ಲಿ ಮತ್ತು ತುಳು-ಕನ್ನಡ ಕವಿಗೋಷ್ಠಿಯಲ್ಲೂ ತಾವು ರಚಿಸಿದ ಕವನಗಳನ್ನು ವಾಚನಮಾಡಿದ್ದಾರೆ.

ಸಂಪಾದಿತ ಕೃತಿಗಳು[ಬದಲಾಯಿಸಿ]

 1. ಅರಬ್ಬೀ ಕಡಲತೀರದಲ್ಲಿ
 2. ಸಂಪ್ರೀತಿ,
 3. ಆಪ್ತಮಿತ್ರ.
 4. ಸಾಹಿತ್ಯ ಸಂಸ್ಕೃತಿ ಪರಿಚಾರಕ, ಎಸ್.ಕೆ.ಸುಂದರ್,
 5. ಕುರ್ಕಾಲರ ಕಾವ್ಯ, ಸಹೃದಯ,
 6. ಸ್ಪಂದನ,

ವಿಮರ್ಶಾ ಲೇಖನ[ಬದಲಾಯಿಸಿ]

 1. ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರ 'ಸ್ವೀಕೃತಿ' ಪುಸ್ತಕವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಹಾಗೂ ಕರ್ನಾಟಕ ಸಂಘ, ಮುಂಬಯಿ, ಜಂಟಿಯಾಗಿ ೩೦, ನವೆಂಬರ್, ೨೦೧೯ ರಂದು ಲೋಕಾರ್ಪಣೆ ಮಾಡಲಾಯಿತು. ಅದೇ ದಿನ ಇತರ ೩ ಲೇಖಕರ ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು : ಅನಿತ ಪಿ.ಟಾಕೋಡೆ, ಡಾ.ಜಿ.ಎನ್.ಉಪಾಧ್ಯ, ಎಚ್.ದೇವಾಡಿಗ. [೬]

ಪ್ರಶಸ್ತಿಗಳು[ಬದಲಾಯಿಸಿ]

 1. ಎನ್.ಎಸ್.ಎಸ್.ಕ್ಯಾಡೆಟ್ ಪ್ರಶಸ್ತಿ
 2. ಮುಂಬಯಿ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಫೆಲೋಶಿಪ್ ಗಳಿಸಿದ ಪ್ರಥಮ ಬಂಟ್ ಮಹಿಳೆ.

ಉಲ್ಲೇಖಗಳು[ಬದಲಾಯಿಸಿ]

 1. ಕೌಡೂರಿನವರು
 2. Mumbai university, kannada division
 3. Bantwal times.com, Mumbai News, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ದತ್ತಿನಿಧಿ ಸ್ಥಾಪನೆ, ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಮಹಾಪ್ರಬಂಧ ಕೃತಿ ಬಿಡುಗಡೆ-ಪದವಿ ಪ್ರದಾನ,೮,ಏಪ್ರಿಲ್,೨೦೧೮-ಚಿತ್ರ ವರದಿ-ರೋನ್ಸ್ ಬಂಟ್ವಾಳ್
 4. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಕುವೆಂಪು ದತ್ತಿನಿಧಿ ಸ್ಥಾಪನೆ april, 10, 2018, udayawani
 5. ಚಿಣ್ಣರ ಬಿಂಬ ಸಂಸ್ಥೆ,
 6. Mumbai university kannada department and Karnataka sangha Mumbai, jointly sponsered program, Dr. Poornima sudhakara shetty's book Swikruti was released, on 30th, Nov,2019, Daiji world.com, Dec.2, 2019-Rons Bantwal

ಬಾಹ್ಯಸಂಪರ್ಕಗಳು[ಬದಲಾಯಿಸಿ]

 1. The Mysore Association Golden jubilee lecture 2017, Feb, 28, 2017, former Justice B.N.Shrikrishna gave the guest lecture
 2. ಮುಂಬಯಿ ತುಳುಕನ್ನಡಿಗರ ರಾಯಭಾರಿ-ಎಂ.ಡಿ.ಶೆಟ್ಟಿ ಕೃತಿ ಬಿಡುಗಡೆ, Canara news .com-Rons Bantwaal,೧೯, ಮಾರ್ಚ್, ೨೦೧೯,
 3. ಮುಂಬೈ ಮಹಾನಗರದಲ್ಲಿ ಕನ್ನಡ ಬಲವರ್ಧನೆಗೆ ಶ್ರಮಿಸುತ್ತಿದೆ ವಿಶ್ವವಿದ್ಯಾಲಯದ ಕನ್ನಡ ವಿಭಾಗ: ಪ್ರೊ.ವಿವೇಕ್​ ರೈ, ವಿಜಯವಾಣಿ, ನೆಟ್/ಏಪ್ರಿಲ್, ೨, ೨೦೧೯
 4. Dr. Nagatihalli chandrashekhar was the chief speaker of the Annual Mysore association Golden jubilee Endowment lecture program, Mumbai,Feb,16,2019