ವಿಷಯಕ್ಕೆ ಹೋಗು

ಪೂರಕ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರಕ ಭಾಷೆಯು ದ್ವಿತೀಯಕ ಸಂವಹನದ ಘಟಕವಾಗಿದೆ. ಇದು ಅರ್ಥವನ್ನು ಬದಲಾಯಿಸಬಹುದು, ಸೂಕ್ಷ್ಮ ವ್ಯತ್ಯಾಸದ ಅರ್ಥ ನೀಡಬಹುದು, ಅಥವಾ ಛಂದಸ್ಸು, ಸ್ವರಮಟ್ಟ, ಧ್ವನಿಶಕ್ತಿ, ಸ್ವರಭೇದ, ಇತ್ಯಾದಿಗಳಂತಹ ತಂತ್ರಗಳನ್ನು ಬಳಸಿ ಭಾವನೆಯನ್ನು ತಿಳಿಸಬಹುದು.

ನಿಟ್ಟುಸಿರು

[ಬದಲಾಯಿಸಿ]

ನಿಟ್ಟುಸಿರು ಒಂದು ಬಗೆಯ ಪೂರಕ ಭಾಷಾ ಉದ್ದೇಶದ ಉಸಿರಾಟ. ಇದು ಆಳವಾದ ಮತ್ತು ವಿಶೇಷವಾಗಿ ಕೇಳಿಸುವಂಥ, ಬಾಯಿ ಅಥವಾ ಮೂಗಿನಿಂದ ಗಾಳಿಯ ಏಕ ನಿಶ್ವಾಸದ ರೂಪದಲ್ಲಿರುತ್ತದೆ. ಇದನ್ನು ಮಾನವರು ಭಾವನೆಯನ್ನು ಶ್ರುತಪಡಿಸಲು ಬಳಸುತ್ತಾರೆ. ಇದು ಹಲವುವೇಳೆ ನಿರಾಶೆ, ಅಸಮಾಧಾನ, ಬೇಸರ, ಅಥವಾ ನಿಷ್ಫಲತೆಯಂತಹ ನಕಾರಾತ್ಮಕ ಭಾವನೆಯಿಂದ ಉಂಟಾಗುತ್ತದೆ.[] ನಿಟ್ಟುಸಿರು ನೆಮ್ಮದಿಯಂತಹ ಧನಾತ್ಮಕ ಭಾವನೆಗಳಿಂದಲೂ ಉಂಟಾಗಬಹುದು, ವಿಶೇಷವಾಗಿ ಯಾವುದೋ ಋಣಾತ್ಮಕ ಸಂದರ್ಭ ಅಂತ್ಯವಾದದ್ದಕ್ಕೆ ಅಥವಾ ತಪ್ಪಿದ್ದಕ್ಕೆ ಪ್ರತಿಕ್ರಿಯೆಯಾಗಿ.

ಉಲ್ಲೇಖಗಳು

[ಬದಲಾಯಿಸಿ]
  1. Rachel Broncher, A labor of love: a complete guide to childbirth for the mind, body, and soul (2004), p. 145.