ಪುಷ್ಪಗುಚ್ಛ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಷ್ಪಗುಚ್ಛವು ಸೃಜನಾತ್ಮಕ ವಿನ್ಯಾಸದಲ್ಲಿರುವ ಹೂವುಗಳ ಸಂಗ್ರಹ. ಪುಷ್ಪಗುಚ್ಛಗಳನ್ನು ಮನೆಗಳು ಅಥವಾ ಸಾರ್ವಜನಿಕ ಕಟ್ಟಡಗಳ ಅಲಂಕಾರಕ್ಕಾಗಿ ಜೋಡಿಸಬಹುದು ಅಥವಾ ಕೈಯಲ್ಲಿ ಹಿಡಿದಿರಬಹುದು. ಕೈಯಲ್ಲಿ ಹಿಡಿಯುವ ಪುಷ್ಪಗುಚ್ಛಗಳನ್ನು ನೋಸ್‍ಗೇ, ಕ್ರೆಸೆಂಟ್ ಹಾಗೂ ತೆರೆತೆರೆಯಾಕಾರದ ಪುಷ್ಪಗುಚ್ಛಗಳು ಸೇರಿದಂತೆ ಹಲವಾರು ವಿಭಿನ್ನ ಆಕಾರಗಳು ಮತ್ತು ಶೈಲಿಗಳ ಪ್ರಕಾರ ವರ್ಗೀಕರಿಸಲಾಗುತ್ತದೆ. ಜನ್ಮದಿನಗಳು ಅಥವಾ ವಾರ್ಷಿಕೋತ್ಸವಗಳಂತಹ ವಿಶೇಷ ಸಂದರ್ಭಗಳಲ್ಲಿ ಹಲವುವೇಳೆ ಪುಷ್ಪಗುಚ್ಛಗಳನ್ನು ನೀಡಲಾಗುತ್ತದೆ. ಅವುಗಳನ್ನು ವಿವಾಹಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಗೃಹಾಲಂಕಾರಕ್ಕಾಗಿ ಹೂದಾನಿಗಳು ಅಥವಾ ಅಲಂಕೃತ ಸಸ್ಯಕುಂಡಗಳಲ್ಲಿ ಹೊಂದಿಸಲಾದ ಪುಷ್ಪಗುಚ್ಛಗಳನ್ನು ಸಾಂಪ್ರದಾಯಿಕ ಅಥವಾ ಆಧುನಿಕ ಶೈಲಿಗಳಲ್ಲಿ ಹೊಂದಿಸಲಾಗಿರಬಹುದು. ಸಂಸ್ಕೃತಿಯನ್ನು ಅವಲಂಬಿಸಿ ಬಳಸಲಾದ ಹೂವುಗಳ ಬಗೆಗಳಿಗೆ ಸಂಕೇತಗಳನ್ನು ಅನ್ವಯಿಸಲಾಗಿರಬಹುದು.

ಗೃಹ ಅಥವಾ ಕಟ್ಟಡಗಳ ಅಲಂಕಾರಕ್ಕಾಗಿ ಹೂವುಗಳ ವಿನ್ಯಾಸವು ವಿಶ್ವದಾದ್ಯಂತ ದೀರ್ಘ ಇತಿಹಾಸವನ್ನು ಹೊಂದಿದೆ. ಹೂದಾನಿಗಳಲ್ಲಿ ಪುಷ್ಪಗುಚ್ಛಗಳ ವಿಧ್ಯುಕ್ತ ವಿನ್ಯಾಸದ ಅತ್ಯಂತ ಹಳೆಯ ಸಾಕ್ಷ್ಯಾಧಾರವು ಪ್ರಾಚೀನ ಈಜಿಪ್ಟ್‌ನಿಂದ‌ ಬರುತ್ತದೆ ಮತ್ತು ಪುಷ್ಪವಿನ್ಯಾಸಗಳ ಚಿತ್ರಣಗಳು ಈಜಿಪ್ಟ್‌ನ ಹಳೆ ರಾಜ್ಯದ ಕಾಲಮಾನದ್ದೆಂದು ನಿರ್ಧಾರಿತವಾಗಿವೆ (ಕ್ರಿ.ಪೂ. ~೨೫೦೦). ಪವಿತ್ರ ಕಮಲವನ್ನು ಹಲವುವೇಳೆ ಬಳಸಲಾಗುತ್ತಿತ್ತು. ಜೊತೆಗೆ ಮೂಲಿಕೆಗಳು, ತಾಳೆ, ಪದ್ಮಪುಷ್ಕರಗಳು, ಅನಿಮನಿಗಳು ಮತ್ತು ನಾರ್ಸಿಸಸ್ ಕೂಡ.[೧]

ಉಲ್ಲೇಖಗಳು[ಬದಲಾಯಿಸಿ]

  1. Belcher, Betty (1993). Creative flower arranging: floral design for home and flower show. Timber Press. pp. 16–17. ISBN 978-0-88192-247-9.