ಪುಲ್ಕಿತ್ ಸಾಮ್ರಾಟ್

ವಿಕಿಪೀಡಿಯ ಇಂದ
Jump to navigation Jump to search
ಪುಲ್ಕಿತ್ ಸಾಮ್ರಾಟ್
Bornಡಿಸೆಂಬರ್ ೨೯, ೧೯೮೩
ದೆಹಲಿ, ಭಾರತ 
Occupationನಟ 
Years active೨೦೦೬ರಿಂದ 
Spouse(s)ಶ್ವೇತಾ ರೊಹೀರಾ (ವಿವಾಹ 2014; ವಿಚ್ಛೇದನ 2015)

ಪುಲ್ಕಿತ್ ಸಾಮ್ರಾಟ್ ಒಬ್ಬ ಭಾರತೀಯ ಚಲನಚಿತ್ರ ನಟ ಮತ್ತು ರೂಪದರ್ಶಿಯಾಗಿದ್ದಾರೆ. ಪುಲ್ಕಿತ್ ಬಾಲಿವುಡ್ಗೆ ಬಿಟ್ಟೂ ಬಾಸ್ (೨೦೧೨) ಚಿತ್ರದ ಮೂಲಕ ಪದಾರ್ಪಣೆ ಮಾಡಿದರು.

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಪುಲ್ಕಿತ್ ಸಾಮ್ರಾಟ್ ಹುಟ್ಟಿ ಬೆಳೆದದ್ದು ಶಾಲಿಮಾರ್ ಬಾಗ್, ದೆಹಲಿಯಲ್ಲಿನ ಪಂಜಾಬಿ ಅವಿಭಕ್ತ ಕುಟುಂಬವೊಂದರಲ್ಲಿ. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ದೆಹಲಿಯ ಮಾನವ್ ಸ್ಥಾಲಿ ಶಾಲೆ ಮಾಂಟ್‍ಫ಼ೋರ್ಟ್ ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ಮುಗಿಸಿದರು. ನಂತರ ದೆಹಲಿಯ ಅಪೀಜೆ ಇನ್‍ಸ್ಟಿಟ್ಯೂಟ್ ಆಫ಼್ ಡಿಸೈನ್‍ನಲ್ಲಿ ಜಾಹೀರಾತುಗಳ ಮೇಲೆ ತರಬೇತಿ ಹೊಂದುತ್ತಾರೆ. ಅಧ್ಯಯನದ ಮಧ್ಯದಲ್ಲಿಯೇ ಅವರು ಮಾಡೆಲಿಂಗ್ ಹುದ್ದೆಯೊಂದನ್ನು ಪಡೆಯುತ್ತಾರೆ. ತದನಂತರ ಅವರು  ತಮ್ಮ ಅಧ್ಯಯನವನ್ನು ತೊರೆದು, ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಕಿಶೋರ್ ನಮಿತ್ ಕಪೂರ್‍ರವರ ಮೂಲಕ ಅಭಿನಯ ತರಬೇತಿ ಪಡೆಯುತ್ತಾರೆ.

ವೃತ್ತಿ[ಬದಲಾಯಿಸಿ]

ಪುಲ್ಕಿತ್ ಮುಂಬೈಗೆ ೨೦೦೫ರಲ್ಲಿ ಸ್ಥಳಾಂತರಗೊಂಡು, ೨೦೦೬ರಲ್ಲಿ ದೂರದರ್ಶನದ ಪ್ರಸಿದ್ಧ ಧಾರಾವಾಹಿಗಳಲ್ಲೊಂದಾದ ಕ್ಯುಂಕಿ ಸಾಸ್ ಭೀ ಕಭೀ ಬಹೂ ಥಿ ಅಲ್ಲಿ ಲಕ್ಷ್ಯ ವೀರ್ವಾನಿ ಪಾತ್ರವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದು ಇವರಿಗೆ ಬಹಳ ಹೆಸರು ತಂದುಕೊಟ್ಟಿತ್ತಾದರೂ ೨೦೦೭ರಲ್ಲಿ ಧಾರಾವಾಹಿಯಿಂದ ಹೊರನಡೆಯುತ್ತಾರೆ.

೨೦೧೧ರಲ್ಲಿ ಪುಲ್ಕಿತ್‍ ಹೆಸರಾಂತ ನಾಟ್ಯರಚನೆಕಾರರಾದ ವೈಭವಿ ಮರ್ಛಂಟ್‍ರವರ ಸಂಗೀತಪ್ರಧಾನ ಕಾರ್ಯಕ್ರಮವಾದ ತಾಜ್ ಎಕ್ಸ್‍ಪ್ರೆಸ್‍ನಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಾರೆ.

ಚೊಚ್ಚಲ ಚಿತ್ರ[ಬದಲಾಯಿಸಿ]

ಪುಲ್ಕಿತ್ ನಾಯಕನಟರಾಗಿ ಕಾಣಿಸಿಕೊಂಡ ಚೊಚ್ಚಲ ಚಿತ್ರ ೨೦೧೨ರಲ್ಲಿ ಬಿಡುಗಡೆಯಾದ ಬಿಟ್ಟೂ ಬಾಸ್. ಇದರಲ್ಲಿ ಅವರು ಪಂಜಾಬ್ ಮೂಲದ ಒಬ್ಬ ಮದುವೆ ಛಾಯಾಗ್ರಾಹಕನ ಪಾತ್ರ ನಿಭಾಯಿಸಿದ್ದಾರೆ. ಚಿತ್ರ ಬಾಕ್ಸ್‍ಆಫಿಸ್‍ನಲ್ಲಿ ಸೋತರೂ, ಪುಲ್ಕಿತ್‍ ಅವರನ್ನು ಗುರುತಿಸುವಂತೆ ಮಾಡಿತು.

ವೈಯಕ್ತಿಕ ಜೀವನ[ಬದಲಾಯಿಸಿ]

ಪುಲ್ಕಿತ್‍ ತಮ್ಮ ದೀರ್ಘ ಕಾಲದ ಗೆಳತಿ ಹಾಗೂ ನಟ ಸಲ್ಮಾನ್ ಖಾನ್‍ರ ತಂಗಿ ಶ್ವೇತಾ ಅವರನ್ನು ನವೆಂಬರ್ ೩, ೨೦೧೪ರಂದು ವರಿಸಿದರು. ಪುಲ್ಕಿತ್‍ ಅವರ ಚೊಚ್ಚಲ ಚಿತ್ರದ ಪ್ರಚಾರದಲ್ಲಿ ಸಲ್ಮಾನ್ ಖಾನ್ ಸಹ ಭಾಗಿಯಾಗಿದ್ದರು. ಈ ಜೋಡಿ ನವೆಂಬರ್ ೨೦೧೫ರಂದು ಬೇರೆಯಾಯಿತು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ
೨೦೧೨ ಬಿಟ್ಟೂ ಬಾಸ್ ಬಿಟ್ಟೂ ಬಾಸ್
೨೦೧೩ ಫುಕ್ರೇ ವಿಕಾಸ್ ಗುಲಾಟಿ (ಹನ್ನಿ)
೨೦೧೪ ಜೈ ಹೋ ಇನ್ಸ್ಪೆಕ್ಟರ್ ಅಭಯ್ ರಜಪೂತ್
೨೦೧೪ ಓ ತೇರಿ ಪ್ರಣತಾಭ್ ಪ್ರತಾಪ್ (ಪಿಪಿ)
೨೦೧೫ ಡಾಲಿ ಕಿ ಡೋಲಿ ರಾಬಿನ್ ಸಿಂಗ್
೨೦೧೫ ಬ್ಯಾಂಗಿಸ್ತಾನ್ ಪ್ರವೀಣ್ ಚತುರ್ವೇದಿ / ಅಲ್ಲರಖ ಖಾನ್
೨೦೧೬ ಸನಮ್ ರೇ ಆಕಾಶ್
೨೦೧೬ ಜುನೂನಿಯತ್ ಜಹಾನ್ ಬಕ್ಷಿ

ದೂರದರ್ಶನ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ
೨೦೦೬ ಕ್ಯುಂಕಿ ಸಾಸ್ ಭಿ ಕಭೀ ಬಹೂ ಥಿ ಲಕ್ಷ್ಯ ವೀರ್ವಾನಿ
೨೦೦೮ ಕಹೋ ನಾ ಯಾರ್ ಹೈ (ಸಂಚಿಕೆ ೫) ರಿಯಾಲಿಟಿ ಸರಣಿ

ಉಲ್ಲೇಖಗಳು[ಬದಲಾಯಿಸಿ]