ವಿಷಯಕ್ಕೆ ಹೋಗು

ಪುರಾತನ ಮುಂಬೈ ನಗರದ ಏಳು ದ್ವೀಪಗಳ ಭೂಭಾಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪುರಾತನ 'ಮುಂಬಯಿ ನಗರದ ಬಳಿಯ ಏಳು ದ್ವೀಪಗಳ ವರ್ಣನೆ' ಮುಂಬಯಿ ನಗರವು ಒಂದೇ ದ್ವೀಪವಾಗದೆ, ೭ ದ್ವೀಪಗಳ ಸಮುದಾಯವಾಗಿತ್ತು. ಕಾಲಕ್ರಮೇಣ ಅವನ್ನೆಲ್ಲಾ ಒಟ್ಟಾಗಿಸೇರಿಸಿ ಭೂಭಾಗವನ್ನು ರಚಿಸಲಾಯಿತು. ವಿಶ್ವದಲ್ಲಿ ವಿಜ್ಞಾನ, ತಂತ್ರಜ್ಞಾನಗಳು ಮುಂದುವರಿದಂತೆ, ಅವುಗಳು ಭಾರತವನ್ನೂ ಮುಟ್ಟಿದವು. ಕಲ್ಲು-ಮಣ್ಣೆತ್ತುವ ಯಂತ್ರಗಳು ಒಂದು ಕಡೆಯಿಂದ ಮತ್ತೊಂದುಕಡೆಗೆ ಲೀಲಾಜಾಲವಾಗಿ, ಭಾರಿಪ್ರಮಾಣದ ಕಲ್ಲುಮಣ್ಣುಗಳನ್ನು ಸಾಗಿಸಿ ಕಂದರಗಳನ್ನು ಮುಚ್ಚುವ ಕೆಲಸವನ್ನು ಪ್ರಾರಂಭಿಸಲಾಯಿತು. ಇದೇ ಕೆಲಸವನ್ನು ಸಾವಿರಾರು ಜನ ಕೂಲಿಯಾಳುಗಳು ಅಷ್ಟು ಸಮರ್ಪಕವಾಗಿ ಮಾಡಲಾರರು. ಸಂಶೋಧನೆಗಳು ಹೆಚ್ಚಿದಂತೆ, ಕಾಂಕ್ರೀಟ್, ಸಿಮೆಂಟ್, ಕಬ್ಬಿಣಗಳ ಬಳಕೆಯ ಹೆಚ್ಚುಹೆಚ್ಚು ಅರಿವಾದಂತೆಲ್ಲಾ ವಿಸ್ತರಣೆಯ ಕಾರ್ಯ ಬಿರುಸಾಗಿ ನಡೆಯಿತು. ಮುಂಬಯಿ ನಗರದ ದಕ್ಷಿಣದಿಂದ ಉತ್ತರಕ್ಕೆ ಧಾವಿಸಿದರೆ, ೭ ದ್ವೀಪಗಳ ಬಾಂಬೆಮಹಾದ್ವೀಪದ ಸ್ಥೂಲ ಪರಿಚಯವಾಗುತ್ತದೆ. ಪೋರ್ಚುಗೀಸರು, ಬ್ರಿಟನ್ ನ ರಾಜ ಚಾರ್ಲ್ಸ್ ನಿಗೆ ಬಳುವಳಿಯಾಗಿ ಮುಂಬಯಿ ನಗರವನ್ನು ಬಹಳಹಿಂದೆ ಕೊಟ್ಟಿದ್ದರು. ಯಾವಸುಧಾರಣೆಯನ್ನೂ ಮಾಡದ ಆಗಿನಕಾಲದ ಭೂಭಾಗಗಳ ವಿವರಣೆ ಹೀಗಿದೆ.

ಆಗಿನಕಾಲದಲ್ಲಿ, ದಕ್ಷಿಣ ಭೂಭಾಗದಿಂದ ಉತ್ತರ ಭೂಭಾಗದ ಮುಂಬಯಿಪ್ರಾಂತ್ಯಕ್ಕೆ ಹೋಗುವುದು ಅತಿ ಕಷ್ಟಸಾಧ್ಯವಾದ ಮಾತಾಗಿತ್ತು

[ಬದಲಾಯಿಸಿ]
ಮುಂಬಯಿಯ ಏಳು ದ್ವೀಪಗಳ ಉಗಮ ಮತ್ತು ಸ್ಥಿತ್ಯಂತರ
ಮೂಲ ಏಳು ದ್ವೀಪಗಳು
ಮೂಲ ಏಳು ದ್ವೀಪಗಳು 
೧೮೯೩ರ ಭೂಪಟ
೧೮೯೩ರ ಭೂಪಟ 
೧೯೨೪ರ ಭೂಪಟ
೧೯೨೪ರ ಭೂಪಟ 
೨೦೦೯ರ ಭೂಪಟ
೨೦೦೯ರ ಭೂಪಟ 

ಪ್ರದೇಶಗಳು ಜಲಾವೃತವಾಗಿರುತ್ತಿದ್ದವು. ನದಿ, ನಾಲೆ, ಸಮುದ್ರ, ಕಂದರ, ಬೆಟ್ಟ, ಗುಡ್ಡ, ಮೈದಾನ, ಕೊಚ್ಚೆಪ್ರದೇಶಗಳು, ನಾಲೆಗಳು, ಹಾಗೂ ಜನರು, ಸಾಕು-ಪ್ರಾಣಿಗಳು, ವಾಸಿಸದೆ ಇರುವ ಪ್ರದೇಶಗಳು ಇದ್ದವು. ಕ್ರಿಮಿ-ಕೀಟಗಳು, ಸೊಳ್ಳೆ ಇವುಗಳಿಂದಾಗಿ ಜನರು ಪ್ರಯಾಣಮಾಡಲು ಹೆದರುತ್ತಿದ್ದರು. ಮಾಟುಂಗ ಪ್ರದೇಶದಿಂದ ಮುಂದೆ ದೊಡ್ಡ ಕಾಡಿತ್ತು.

  • ೧. ಕೊಲಾಬಾ : ಅತ್ಯಂತ ದಕ್ಷಿಣದ ತುದಿಯಲ್ಲಿರುವ ಈ ಭೂಭಾಗವನ್ನು ಸ್ಥಳೀಯರಾದ ಕೋಳಿಗಳು,(ಮೀನು ಹಿಡಿಯುವವರು) ಕೊಲಾಬಾ ಎನ್ನುತ್ತಿದ್ದರು. ಇದು ಅವರ ಬಳಕೆಯ ಪದ, 'ಕೊಲ್ ಭಾತ್' ಎಂಬ ಮೂಲ ಪದದ 'ಅಪಭ್ರಂಷ,' ಎಂದು ತಿಳಿದವರ ಅಂಬೋಣ.
  • ೨. ಓಲ್ದ್ ವುಮನ್ಸ್ ಐಲೆಂಡ್ : ಎಂದು ಮತ್ತೆ ಕೆಲವೊಮ್ಮೆ 'ಓಲ್ಡ್ ಮ್ಯಾನ್ಸ್ ಐಲೆಂಡ್ ಎಂದು ಕರೆಯಲಾಗುತ್ತಿತ್ತು. ಕೊಲಾಬಾ ಹಾಗೂ ಮುಂಬಯಿನ ಬಳಿಯಿದ್ದ ಒಂದು ಚಿಕ್ಕ ಕಲ್ಲುಬಂಡೆಗಳ ರಾಶಿಯನ್ನು ಅರಬ್ಬಿ ಹೆಸರಿನಲ್ಲಿ, ಆಲ್-ಓಮನಿ, ಜನ ಅನ್ನುತ್ತಿದ್ದರು. ಬೆಸ್ತರು, ಗಲ್ಫ್ ಆಫ್ ಒಮಾನ್ ವರೆಗೆ ಮೀನು ಹಿಡಿಯಲು ಹೊಗುತ್ತಿದ್ದರು.
  • ೩. ಬಾಂಬೆ, ಅಥವಾ ಮುಂಬಯಿ : ಬ್ರಿಟಿಷ್ ಜನರ ಅತಿ ಮೆಚ್ಚಿನ, ಬಂದರಾಗಿದ್ದ ಬಾಂಬೆ, ಪ್ರಮುಖವಾದ ದ್ವೀಪಗಳಲ್ಲಿ ಒಂದು. ಇದು, ಬ್ರಿಟಿಷ್ ಜನರು ಕಟ್ಟಿದ ಕೋಟೆ ಪ್ರದೇಶದ ಕೇಂದ್ರ ಬಿಂದು. ಇಲ್ಲಿಂದಲೇ ಆಧುನಿಕನಗರ ಉತ್ತರದಿಕ್ಕಿಗೆ ಬೆಳೆಯುತ್ತಾ ಹೋಯಿತು. ಪೂರ್ವಕ್ಕೆ ಡೊಂಗ್ರಿ ಮತ್ತು ಮಲಬಾರ್ ಹಿಲ್ಸ್ ಪಶ್ಚಿಮಕ್ಕೆ.
  • ೪. ಮಝ್ ಗಾವ್ : ಕೋಳಿ ಜನರು ವಾಸವಾಗಿದ್ದ (ಬೆಸ್ತರು) ಮಝಗಾವ್, ಮುಂಬಯಿನ ಪೂರ್ವಭಾಗದಲ್ಲಿದ್ದು, ಉಮರ್ಖಾಡಿ, ಮತ್ತು ಪಾಯ್ ಧೊನೆ ಯಿಂದ ಬೇರ್ಪಟ್ಟಿತ್ತು.
  • ೫. ವರ್ಲಿ : ಉತ್ತರ ಬಾಂಬೆಯು ಇದರಿಂದ ಒಂದು ದೊಡ್ಡಬ್ರೀಚ್ ನಿಂದ ಬೇರ್ಪಟ್ಟಿತ್ತು. ಈ ಬ್ರೀಚ್ ವಿಸ್ತರಿಸಿ ಡೊಂಗ್ರಿಕೋಟೆಯ ವರೆಗೆ ಹಬ್ಬಿತ್ತು.
  • ೬. ಪರೆಲ್ : ಉತ್ತರಕ್ಕೆ ಮಝಗಾಂ ಮತ್ತು ಮಾಟುಂಗಾ, ಧಾರಾವಿ ಮತ್ತು ಸಾಯನ್, ಮೊದಲಿನಿಂದಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಿದ್ದವರು ದೇಸಿ ಮೀನುಗಾರ ಸಮುದಾಯ. ಅವರನ್ನು ಕೋಳಿಗಳೆಂದು ಕರೆಯುತ್ತಾರೆ.
  • ೭. ಮಾಹಿಮ್ : ಪರೇಲ್ ನ ಪಶ್ಚಿಮಕ್ಕೆ, ಹಾಗೂ ವರಳಿಯ ಉತ್ತರಕ್ಕೆ, ಇರುವ ಸ್ಥಳವನ್ನು 'ಮಾಹಿಮ್ ' ಎನ್ನುತ್ತಾರೆ. ಈ ಜಾಗದಲ್ಲಿ ಹಿಂದೆ, ಮಾಹೀಮ್ ನದಿ ಯಿತ್ತು. ಅದೂಅಲ್ಲದೆ ಇದು ೧೩ ನೆಯ ಶತಮಾನದ 'ರಾಜಾ ಭೀಮ್ ದೇವ್,' ಸ್ಥಾಪಿಸಿದ ರಾಜ್ಯದ ರಾಜಧಾನಿಯಾಗಿತ್ತು. ಈ ಪಟ್ಟಿಯಲ್ಲಿರುವ ಎಲ್ಲಾ ಮೂಲದ್ವೀಪಗಳು ಕಾಲಾನಂತರದಲ್ಲಿ ನವ-ಮುಂಬಯಿನ ದ್ವೀಪಗಳಲ್ಲಿ ಲೀನವಾದವು. ೧೭೩೯ ರವರೆಗೂ ಉತ್ತರ ವಿಶಾಲ ಮುಂಬಯಿ ದ್ವೀಪದ Salsette ಎಂದು ಕರೆಯಲಾದ ಬಹುಭಾಗ, ಪೋರ್ಚುಗೀಸ್ ರ ಸುಪರ್ದಿನಲ್ಲಿತ್ತು. ೭ ದ್ವೀಪಗಳ ಜೊತೆ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]