ಪೀಟರ್ ಸಿಡೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೀಟರ್ ಸಿಡೆಲ್

ಪೀಟರ್ ಸಿಡೆಲ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ವಿಕ್ಟೋರಿಯಾ ತಂಡಗಳಿಗೆ ಆಡುತ್ತಾರೆ.[೧]


ಆರಂಭಿಕ ಜೀವನ[ಬದಲಾಯಿಸಿ]

ಸಿಡೆಲ್ ರವರು ನವಂಬರ್ ೨೫, ೧೯೮೪ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಜನಿಸಿದರು. ಇವರು ಬೆಳೆದಿದ್ದು ಹತ್ರದ ಗಿಪ್ಸ್ಲ್ಯಾಂಡ್ನಲ್ಲಿ. ಇವರು ಮೂಲತಃ ತಂದೆಯ ವೃತ್ತಿಯಾದ ಮರ ಕಡಿಯುವುದನ್ನೇ ಅಭ್ಯಾಸ ಮಾಡಿದ್ದರು. ಆದರೆ ಕ್ರೀಡೆಯಲ್ಲಿ ಆಸಕ್ತಿ ಇದ್ದ ಕಾರಣ, ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಇವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ೧೭ರ ವಯೋಮಿತಿ ತಂಡದಲ್ಲಿ ಇವರು ಕೇವಲ ೫೪ ರನ್ ನೀಡಿ ೧೧ ವಿಕೆಟ್ ಪಡೆಯುವ ಮೂಲಕ ವಿಕ್ಟೋರಿಯಾ ರಾಜ್ಯದ ಕ್ರಿಕೆಟ್ ಬಾಲಿಂಗ್ ನ ಹೊಸ ದಾಖಲೆ ಸೃಷ್ಟಿಸಿದರು.[೨]

ವೃತ್ತಿ ಜೀವನ[ಬದಲಾಯಿಸಿ]

ಸಿಡೆಲ್ ನವಂಬರ್ ೧೧, ೨೦೦೫ರಲ್ಲಿ ಮೆಲ್ಬೋರ್ನ್ ನಲ್ಲಿ ವಿಕ್ಟೋರಿಯಾ ಹಾಗೂ ವೆಸ್ಟ್ ಇಂಡಿಯನ್ಸ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಸಸಿಡೆಲ್ ರವರು ಅಕ್ತೋಬರ್ ೧೭, ೨೦೦೮ ರಂದು ಮೊಹಾಲಿಯಲ್ಲಿ ಭಾರತದ ವಿರುಧ್ಧ ನಡೆದ ೨ನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪] ಫೆಬ್ರವರಿ ೧೩, ೨೦೦೯ ರಂದು ಬ್ರಿಸ್ಬೇನ್ ನಲ್ಲಿ ನ್ಯೂ ಜೀಲ್ಯಾಂಡ್ ವಿರುಧ್ಧ ನಡೆದ ಐದನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫] ಫೆಬ್ರವರಿ ೧೫, ೨೦೦೯ ರಂದು ಸಿಡ್ನಿಯಲ್ಲಿ ನ್ಯೂ ಜೀಲ್ಯಾಂಡ್ ವಿರುಧ್ಧ ನಡೆದ ಏಕೈಕ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು[೬]

ಪಂದ್ಯಗಳು[ಬದಲಾಯಿಸಿ]

  • ಟೆಸ್ಟ್ ಕ್ರಿಕೆಟ್ : ೪೧ ಪಂದ್ಯಗಳು[೭]
  • ಏಕದಿನ ಕ್ರಿಕೆಟ್ : ೪೧ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೯ ಪಂದ್ಯಗಳು

ಅರ್ಧ ಶತಕಗಳು[ಬದಲಾಯಿಸಿ]

  1. ಟೆಸ್ಟ್ ಪಂದ್ಯಗಳಲ್ಲಿ : ೦೨

ವಿಕೆಟ್ಗಳು[ಬದಲಾಯಿಸಿ]

  1. ಟೆಸ್ಟ್ ಪಂದ್ಯಗಳಲ್ಲಿ: ೨೨೧
  2. ಏಕದಿನ ಪಂದ್ಯಗಳಲ್ಲಿ: ೧೭
  3. ಟಿ-೨೦ ಪಂದ್ಯಗಳಲ್ಲಿ: ೦೩

ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/1444/peter-siddle
  2. https://www.smh.com.au/sport/crunch-time-as-axeman-cometh-20081217-gdt6v1.html
  3. https://www.espncricinfo.com/series/14740/scorecard/224892/victoria-vs-west-indians-tour-match-west-indies-tour-of-australia-2005-06
  4. https://www.espncricinfo.com/series/13874/scorecard/345670/india-vs-australia-2nd-test-australia-tour-of-india-2008-09
  5. https://www.espncricinfo.com/series/13817/scorecard/351693/australia-vs-new-zealand-5th-odi-new-zealand-tour-of-australia-2008-09
  6. https://www.espncricinfo.com/series/13817/scorecard/351696/australia-vs-new-zealand-only-t20i-new-zealand-tour-of-australia-2008-09
  7. http://www.espncricinfo.com/australia/content/player/7898.html