ಎಂ.ಬಿ.ಪಾಟೀಲ
ಗೋಚರ
(ಪಾಟೀಲ ಮಲ್ಲನಗೌಡ ಬಸನಗೌಡ ಇಂದ ಪುನರ್ನಿರ್ದೇಶಿತ)
ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ) | |
---|---|
ಜನನ | 7ನೇ ಅಕ್ಟೋಬರ 1964 ವಿಜಯಪುರ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ಸಂಸದರು, ಬಿ.ಎಲ್.ಡಿ.ಈ.ಸಂಸ್ಥೆಯ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.
ಜನನ
[ಬದಲಾಯಿಸಿ]ಎಂ.ಬಿ.ಪಾಟೀಲರು 7ನೇ ಅಕ್ಟೋಬರ 1964ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]- ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಜಯಪುರದ ದರಬಾರ ಪ್ರೌಢ ಶಾಲೆಯಲ್ಲಿ ಪಡೆದಿದ್ದಾರೆ.
- ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರದಲ್ಲಿ ಪಡೆದಿದ್ದಾರೆ.
ರಾಜಕೀಯ
[ಬದಲಾಯಿಸಿ]- 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ 27ನೇ ವಯಸ್ಸಿನಲ್ಲಿ ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಪ್ರಥಮ ಬಾರಿಗೆ ಬಾರಿಗೆ ವಿಧಾನಸಭೆ ಪ್ರವೇಶ.
- 1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಿವಾನಂದ ಪಾಟೀಲರ ವಿರುದ್ದ ಸೋಲು.
- ವಿಜಯಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಕಾಂಗ್ರೆಸ್ನಿಂದ ಲೋಕಸಭೆ ಆಯ್ಕೆಯಾಗಿದ್ದರು.
- 2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.
- 2008, 2013ಮತ್ತು 2018ರಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
- 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
- 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.
- ಎಐಸಿಸಿ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯರಾಗಿದ್ದರು.
- 1990ರಿಂದ 2005ರ ವರೆಗೆ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹುದ್ದೆ, 2005ರಿಂದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಚಿವರು
[ಬದಲಾಯಿಸಿ]- 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
- 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.[೧]
ವೈಯಕ್ತಿಕ ಜೀವನ
[ಬದಲಾಯಿಸಿ]ಶ್ರೀಯುತರು ಆಶಾ ಪಾಟೀಲಯವರನ್ನು ಮದುವೆಯಾಗಿದ್ದು, ಬಸನಗೌಡ ಹಾಗೂ ಧ್ರುವ ಎಂಬ ಇಬ್ಬರು ಮಕ್ಕಳಿದ್ದು ವಿಜಯಪುರದಲ್ಲಿ ವಾಸವಾಗಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-12-28. Retrieved 2018-12-27.