ವಿಷಯಕ್ಕೆ ಹೋಗು

ಪಾಂಡಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಂಡಿತ್ಯ (ವಿದ್ವತ್ತು) ಒಬ್ಬ ವಿದ್ವಾಂಸನ ಗುಣ. ಶಿಕ್ಷಣ ಮತ್ತು ಓದುವಿಕೆ, ಇವುಗಳನ್ನು ಅನುಸರಿಸಿ ಮನನ ಮತ್ತು ಚಿಂತನೆಗಳು ಎಲ್ಲ ಅಸಭ್ಯತೆಯನ್ನು ತೊಡೆದುಹಾಕಿದಾಗ, ಅಂದರೆ ಎಲ್ಲ ಒರಟಾದ ಮತ್ತು ತರಪೇತಿಯಿಲ್ಲದ ಅನಮ್ರತೆಯನ್ನು ನಯಗೊಳಿಸಿದಾಗ ವಿದ್ವಾಂಸನು ಪಾಂಡಿತ್ಯ ಹೊಂದಿರುತ್ತಾನೆ ಎಂದು ಹೇಳಬಹುದು.

ಪಾಂಡಿತ್ಯವು ಶಿಕ್ಷಣದಿಂದ ಅನುಗ್ರಹಿತವಾಗುವ ಆಳ, ಮೆರುಗು ಮತ್ತು ವಿಸ್ತಾರ. ಒಬ್ಬ ಶಿಕ್ಷಿತ ವ್ಯಕ್ತಿಯು ವಿಮರ್ಶಾತ್ಮಕವಾಗಿ ಮತ್ತು ತಾರ್ಕಿಕವಾಗಿ ಯೋಚಿಸುವ ಹಂತ ತಲುಪಿರುತ್ತಾನೆ. ಪಾಂಡಿತ್ಯವುಳ್ಳ ವ್ಯಕ್ತಿಯು ಸಾಮಾನ್ಯ ವಿಷಯಗಳ ಬಗ್ಗೆ ಆಳ ಮತ್ತು ವಿಶಾಲ ಎರಡೂ ಬಗೆಯ ಪರಿಚಿತತೆಯನ್ನು ಹೊಂದಿರುತ್ತಾನೆ, ಮತ್ತು ಸಾಮಾನ್ಯವಾಗಿ ವಿಷಯದ ಸಾಹಿತ್ಯದ ಅಧ್ಯಯನ ಹಾಗೂ ವಿಸ್ತಾರವಾದ ಓದಿನ ಕಾರಣದಿಂದ ಒಂದು ನಿರ್ದಿಷ್ಟ ವಿಷಯದಲ್ಲಿ ಪ್ರಾಜ್ಞನಾಗಿರುತ್ತಾನೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]