ಪವಿತ್ರ ಶಿಲುಬೆ ಚರ್ಚ್ ಕೊರ್ಡೆಲ್
ಪವಿತ್ರ ಶಿಲುಬೆ ಚರ್ಚ್ ಕೊರ್ಡೆಲ್ ರೋಮನ್ ಕಥೋಲಿಕ ಚರ್ಚ್ ಭಾಗವಾಗಿದ್ದು ಮಂಗಳೂರು ನಗರದ ಕುಲಶೇಖರಪ್ರದೇಶದ ಕೊರ್ಡೆಲ್-ನಲ್ಲಿದೆ. ಇಲ್ಲಿ ೬,೫೦೦ಕುಟುಂಬಗಳು ನೆಲೆಸಿದ್ದು, ಇವುಗಳನ್ನು ೩೨ "ನಿಕಾಯ"ಗಳಲ್ಲಿ ಹಂಚಲಾಗಿದೆ. (ಕೊಂಕಣಿ: ನಿಕಾಯ). ೧೮೭೩ರಿಂದ ಇಲ್ಲಿ ಚರ್ಚ್ ನಿರ್ಮಾಣಗೊಂಡಿಲ್ಲದಿದ್ದರೂ ಫ್ರೆಂಚ್ ಮಿಶನರಿ ವಂ. ಜೇನ್ ಆಂಟೊನಿಯೆ ಡುಬಾಯಿಸ್ ಅವರು ಪ್ರಥಮ ಧರ್ಮಗುರುಗಳಾಗಿ ೧೨ ಡಿಸೆಂಬರ್ ೧೮೭೩ರಲ್ಲಿ ಅಸುನೀಗುವವರೆಗೂ ಸೇವೆ ಸಲ್ಲಿದರು .[೧] ಇವರು ಭಕ್ತಾದಿಗಳಿಗೆ ಸಲ್ಲಿಸಿದ ಸೇವೆಗಾಗಿ ಅವರನ್ನು "ಕೊರ್ಡೆಲ್ಲಿನ ಫ‍್ರಾದ್ ಸಾಯ್ಬ್" ಎಂದು ಪ್ರೀತಿಯಿಂದ ಕರೆಯಲ್ಪಟ್ಟರು".[೨]
ಪ್ರಸ್ತುತ ಕೊರ್ಡೆಲ್ ಚರ್ಚ್ ಇರುವ ಸ್ಥಳದಲ್ಲಿ ಶ್ರೀರಂಗಪಟ್ಟಣ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದ ಕಥೊಲಿಕರು ವಂ ಡುಬಾಯಿಸ್ ಅವರು ಪ್ರತಿಷ್ಠಾಪಿಸಿದ ಶಿಲುಬೆಯ ಮುಕಾಂತರ ಪೂಜೆ ಸಲ್ಲಿಸುತ್ತಿದ್ದರು. ಮಿಲಾಗ್ರೀಸ್ ಪ್ರದೇಶದಲ್ಲಿ ಚರ್ಚ್ ಸ್ಥಾಪಿಸುವ ಇವರ ಆಶಯ ಯಶಸ್ಸು ಕಾಣದೇ ಇದ್ದುದರಿಂದ, ತಮ್ಮ ನಿವಾಸವನ್ನು ಕೊರ್ಡೆಲ್ ಪ್ರದೇಶಕ್ಕೆ ಸ್ಥಳಾಂತರಿಸಿದರು. ಇವರು ೩೦,೦೦೦ ಫ್ರಾಂಕ್ಸ್ ಹಣವನ್ನು ತಮ್ಮ ಕುಟುಂಬದಿಂದಲೂ, ೩೦,೦೦೦ ಫ್ರಾಂಕ್ಸ್ ಹಣವನ್ನು ತಮ್ಮ ಅಜ್ಜ—ನಿಂದ ಪಡೆದು ಇಲ್ಲಿ ಚರ್ಚ್ ಕಟ್ಟಿದರು. ಹೀಗೆ ಮಾಡದೇ ಇದ್ದರೆ ಸಂಪೂರ್ಣ ಹಣವು ಮಿಲಾಗ್ರೀಸ್ ಚರ್ಚ್ ಕಟ್ಟಡ ನಿರ್ಮಾಣಕ್ಕೆ ವ್ಯಯವಾಗುತ್ತಿತ್ತು.[೩] ಅವರು ೧೪ ಸೆಪ್ಟೆಂಬರ್ ೧೮೭೩ರಲ್ಲಿ ಚರ್ಚ್ ಕಟ್ಟಡಕ್ಕೆ ಅಡಿಪಾಯದ ಮುಖ್ಯ ಕಲ್ಲನ್ನು ಹಾಕಿ ಆಶೀರ್ವದಿಸಿದರು. ಚರ್ಚ್ ಕಟ್ಟಡ ೧೯೦೪ರಲ್ಲಿ ಅಸ್ಥಿತ್ವಕ್ಕೆ ಬಂದಿತು.[೧]
ಸೈಟೇಶನ್ಸ್
[ಬದಲಾಯಿಸಿ]- ↑ ೧.೦ ೧.೧ "Mangalore: 'Frad Saib' of Cordel Church Remembered by All". Daijiworld Media. 2007-02-11. Archived from the original on 2012-10-12. Retrieved 2008-01-15.
- ↑ D'Souza 2004, p. 60
- ↑ Monteiro, John B. (2010-01-10). "Mangalore : Milagres Church Set For Century". Daijiworld Media. Archived from the original on 2012-10-12. Retrieved 2010-01-01.
ಉಲ್ಲೇಖಗಳು
[ಬದಲಾಯಿಸಿ]- D'Souza, Edwin J. F. (2004), V.J.P. Saldanha (Makers of Indian literature), Sahitya Akademi, ISBN 978-81-260-2028-7.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Holy Cross Church, Cordel, Kulshekar Archived 2010-12-10 ವೇಬ್ಯಾಕ್ ಮೆಷಿನ್ ನಲ್ಲಿ. - Official website