ಪಲ್ಸ್ ಪೋಲಿಯೋ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೊಲೀಯೊಮ್ಯೇಲಿಟೆಸ್
Classification and external resources
ಬಲಗಾಲಿನ ಪೊಲೀಯೊ ಫೀದಿತ ವ್ಯಕ್ತಿ.
ICD-10 A80., B91.
ICD-9 045, 138
DiseasesDB 10209
MedlinePlus 001402
eMedicine ped/1843 pmr/6
MeSH C02.182.600.700

ಪೊಲೀಯೊಮ್ಯೇಲಿಟೆಸ್, ಇದನ್ನು ಪೊಲೀಯೊ ಕರೆಯುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ. ಈ ರೋಗವು ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ.


ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ೧೯೯೪ ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿದ ಉಂಟಾಗುವ ಅಂಗವಿಕಲತೆಯೊಂದಿಗೆ ಬೀಕರಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು.

ಪರಿವಿಡಿ

ಪೊಲೀಯೊದ ಲಕ್ಷಣಗಳು[ಬದಲಾಯಿಸಿ]

  • ಅಂಗವಿಕಲತೆ

ಅಂಗವಿಕಲತೆಯೊಂದಿಗೆ ಬೀಕರಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕಾಗಿದೆ.

ವರ್ಗೀಕರಣ[ಬದಲಾಯಿಸಿ]

  • ಬೆನ್ನುಮೂಳೆಯ ಪೋಲಿಯೋ
  • ಬುಲ್ಬೋ ಬೆನ್ನುಮೂಳೆಯ ಪೋಲಿಯೋ
  • ಬುಲ್ ಬಾರ್ ಪೋಲಿಯೋ
Outcomes of poliovirus infection
ಪರಿಣಾಮ Proportion of cases[೧]
ರೋಗಲಕ್ಷಣವಿಲ್ಲದ ೯೦–೯೫%
Minor illness ೪-೮%
ಪಾರ್ಶ್ವವಾಯು ಇಲ್ಲದ ಅಸೆಪ್ಟಿಕ್ ಮೆನಿಂಜೈಟಿಸ್ ೧-೨%
ಪ್ಯಾರಾಲಿಟಿಕ್ ಪೋಲಿಯೊಮೈಲಿಟಿಸ್ ೦.೧-೦.೫%
— ಬೆನ್ನುಮೂಳೆಯ ಪೋಲಿಯೋ (Spinal polio) ೭೯% of paralytic cases
— ಬುಲ್ಬೋ ಬೆನ್ನುಮೂಳೆಯ ಪೋಲಿಯೋ (Bulbospinal polio) ೧೯% of paralytic cases
— ಬುಲ್ ಬಾರ್ ಪೋಲಿಯೋ(Bulbar polio) ೨% of paralytic cases

ಮೂಲ[ಬದಲಾಯಿಸಿ]

ಪೋಲಿಯೋ ವೈರಸ್ ನ TEM ಚಿತ್ರ.

ಸಾಂಕ್ರಮಣ[ಬದಲಾಯಿಸಿ]

ಇದು ಸಾಂಕ್ರಾಮಿಕ ರೋಗ.

ಆರೋಗ್ಯವನ್ನು ಪುನಃ ಹೊಂದುವುದು[ಬದಲಾಯಿಸಿ]

ಕುರುಹುಕಂತೆ[ಬದಲಾಯಿಸಿ]

ಪೋಲಿಯೋ ನಿರ್ಮೂಲಗೊಳಿಸುದು[ಬದಲಾಯಿಸಿ]

Disability-adjusted life year for poliomyelitis per 100,000 inhabitants.
  no data
  ≤ 0.35
  0.35-0.7
  0.7-1.05
  1.05-1.4
  1.4-1.75
  1.75-2.1
  2.1-2.45
  2.45-2.8
  2.8-3.15
  3.15-3.5
  3.5-3.85
  ≥ 3.85

WHO 2002

ಇತಿಹಾಸ[ಬದಲಾಯಿಸಿ]

An ಈಜಿಪ್ತಿನ ಪೋಲಿಯೋ ರೋಗಿಯ ಶಿಲಾ ಚಿತ್ರ೧೮ನೇ ರಾಜವಂಶ (೧೪೦೩-೧೩೬೫BC)

ಪೊಲೀಯೊ ತಡೆಗಟ್ಟುವ ವಿಧಾನ[ಬದಲಾಯಿಸಿ]

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ[ಬದಲಾಯಿಸಿ]

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಈ ಪಲ್ಸ್ ಪೊಲೀಯೊ ಕಾರ್ಯಕ್ರಮದ ಎರಡು ಹಂತದ್ದಾಗಿದ್ದು. ಇದನ್ನು ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಹಾಕಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಅನ್ವಯ ಪಲ್ಸ್ ಪೊಲೀಯೊ ಕಾರ್ಯಕ್ರಮ ಭಾನುವಾರ ದೇಶದಾದ್ಯಂತ ಜಾರಿಗೊಂಡಿತು.ಐದು ವರ್ಷ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ. ಪೋಷಕರು ತಮ್ಮ ೫ ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿಕೊಳ್ಳ ಬೇಕು. ದೇಶದಾದ್ಯಂತ ಪಲ್ಸ್ ಲಸಿಕೆ ಹಾಕಲಾಗುತ್ತಿದೆ.

ವಿಶೇಷ ರಾಷ್ಟ್ರೀಯ ಪಲ್ಸ್ ಫೋಲಿಯೋ ಲಸಿಕೆ ಕಾರ್ಯಕ್ರಮ[ಬದಲಾಯಿಸಿ]

ರಾಜ್ಯದ ಬೀದರ್, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಾಪುರ, ಬಾಗಲಕೋಟೆ, ಹಾವೇರಿ, ಗದಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ವಿಶೇಷ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ಸುಮಾರು ದಶಸಾವಿರ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು ಲಕ್ಷದಷ್ಟು ಡೋಸ್ ಗಳನ್ನು ಜಿಲ್ಲೆಗಳಿಗೆ ನೀಡಲಾಗಿದೆ [೨].

ಪೊಲೀಯೊ ಅಭಿಯಾನ[ಬದಲಾಯಿಸಿ]

ಈ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗಿದ್ದು, ಈ ಜಿಲ್ಲೆಯಲ್ಲಿನ/ತಾಲ್ಲೂಕ/ಗ್ರಾಮದ ಮನೆ ಮನೆಗೆ ಹೋಗಿ ಮಕ್ಕಳನ್ನು ಪೊಲಿಯೋದಿಂದ ರಕ್ಷಿಸುವುದಕ್ಕಾಗಿ ನಿರ್ಮಿಸಲಾದ ಸಾವಿರಾರು ಬೂತುಗಳಲ್ಲಿ ದಶಸಾವಿರ ತಂಡಗಳನ್ನು ನಿಯೋಜಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಾರ್ಯಕರ್ತರು ಮನೆಮನೆಗೆ ತೆರಳಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಹನಿ ಹಾಕಲಿದ್ದಾರೆ.

ಪ್ರತಿ ಕೇಂದ್ರಕ್ಕೆ ವೈದ್ಯ, ಅರೆವೈದ್ಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಸಾವಿರಾರು ಮಂದಿ ಲಸಿಕೆ ನೀಡುವವರು, ನೂರಾರು ಮೇಲ್ವಿಚಾರಕರು ಕಾರ್ಯ ನಿರ್ವಹಿಸಿದರು. ಇದಲ್ಲದೇ ಮೂರು ದಿನದ ಈ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು, ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಹನಿ ಹಾಕಲಿದ್ದಾರೆ. ಈ ಬಾರಿ ಲಸಿಕಾ ಕಾರ್ಯಕ್ರಮಕ್ಕೆ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಲಸಿಕಾ ಕೇಂದ್ರ[ಬದಲಾಯಿಸಿ]

ಶಾಲಾ, ಕಾಲೇಜು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲದೇ ಬಸ್ ನಿಲ್ದಾಣ, ಮೃಗಾಲಯ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿಯೂ ಸ್ವಯಂ ಸೇವಕರು ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡಿದರು. ಎರಡು ಸಂಚಾರಿ ಲಸಿಕಾ ಕೇಂದ್ರಗಳೂ ಕಾರ್ಯನಿರ್ವಹಿಸಿದ್ದವು.

ಪಲ್ಸ್ ಪೊಲಿಯೋ ಅಭಿಯಾನದ ಗುಣಮಟ್ಟ[ಬದಲಾಯಿಸಿ]

ಅಭಿಯಾನದ ವೇಳೆಯಲ್ಲಿ ಈ ತಂಡಗಳ ಕಾರ್ಯಚಟುವಟಿಕೆಯನ್ನು ಸುಮಾರು ಸಾವಿರಾರು ಮೇಲ್ವಿಚಾರಕರು ಪರಿವೀಕ್ಷಿಸುತ್ತಾರೆ. ಇವರು ಗುಣಮಟ್ಟದ ಪರಾಮರ್ಶೆಯನ್ನೂ ನಡೆಸುವರು ಎಂದು ಹೇಳಿದ್ದಾರೆ.

ತೀವ್ರತರದ ಪಲ್ಸ್ ಪೊಲಿಯೋ ರಕ್ಷಣೆ (ಐಪಿಪಿಐ) ಅಭಿಯಾನ[ಬದಲಾಯಿಸಿ]

ಮಾಹಿತಿಯನ್ನು ಕಂಟ್ರೋಲ್ ರೂಂ[ಬದಲಾಯಿಸಿ]

ಯಾವುದೇ ಮಾಹಿತಿಯನ್ನು ಕಂಟ್ರೋಲ್ ರೂಂ ಮೂಲಕ ಜಿಲ್ಲಾ ಕೇಂದ್ರಕ್ಕೆ ತಲುಪಿಸಲಾಗುತ್ತದೆ. ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಇಲ್ಲಿಂದಲೇ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕರಪತ್ರ ಮುದ್ರಣ[ಬದಲಾಯಿಸಿ]

ನಗರ ಹಾಗೂ ಗ್ರಾಮಗಳಲ್ಲಿ ಎಲ್ಲ ಭಾಷಿಕರು ವಾಸ ಮಾಡುತ್ತಿರುವುದರಿಂದ ಈ ಬಾರಿ ಕನ್ನಡ, ಉರ್ದು ಹಾಗೂ ಇತರೆ ಭಾಶೆಗಳ( ತಮಿಳಿನಲ್ಲಿ )ಕರಪತ್ರಗಳನ್ನು ಮುದ್ರಿಸಲಾಗಿದೆ. ಭಿತ್ತಿಪತ್ರ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಮತ್ತು ಧ್ವನಿವರ್ಧಕಗಳ ಮೂಲಕವೂ ಸಹ ಪ್ರಚಾರ ಕೈಗೊಳ್ಳಲಾಗುತ್ತದೆ.

ಸಾರ್ವಜನಿಕರು ತಮ್ಮ ಮಕ್ಕಳನ್ನು ಪೊಲಿಯೋ ಮುಕ್ತರನ್ನಾಗಿಸಲು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ವಿನಂತಿಸಲಾಗಿದೆ.

ಪೋಲಿಯೋ ವದಂತಿ[ಬದಲಾಯಿಸಿ]

[೩] ಡಿಸೆಂಬರ್ ೨೦೦೮ ಪೋಲಿಯೋ ವದಂತಿ ಹರಡುವಲ್ಲಿ ಖಾಸಗಿ ಚಾನೆಲ್ ಒಂದರ ಬೇಜವಾಬ್ದಾರಿಯುತ ಬ್ರೇಕಿಂಗ್ ನ್ಯೂಸ್ ವರದಿ ಬಿತ್ತರಿಸಿತ್ತು.

ಲಸಿಕೆಯಿಂದ ಅಸ್ವಸ್ಥರಾದರೆ ಏನೂ ಏನು ಮಾಡಬೇಕು?[ಬದಲಾಯಿಸಿ]

ಪೋಲಿಯೋ ಲಸಿಕೆಯಿಂದ ಮಕ್ಕಳು ಅಸ್ವಸ್ಥರಾಗುವುದಾದರೆ ಐದು ನಿಮಿಷದೊಳಗೆ ಹಾಗಾಗಬೇಕು. ಬದಲಿಗೆ ಲಸಿಕೆ ಹಾಕಿ ಗಂಟೆಗಳ ನಂತರ ವಾಂತಿ, ಭೇದಿ, ತಲೆಸುತ್ತುವಿಕೆ, ಜ್ವರ ಅಥವಾ ಇನ್ಯಾವುದೇ ಸಮಸ್ಯೆ ಕಂಡು ಬಂದರೆ ಅದಕ್ಕೆ ಲಸಿಕೆ ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ [೪]. ಪೋಲಿಯೋ ಹನಿ ಕಾರ್ಯಕ್ರಮ ೧೩ ವರ್ಷದಿಂದ ಚಾಲ್ತಿಯಲ್ಲಿದೆ. ಇದುವರೆಗೆ ಹನಿ ಹಾಕಿಸಿದ್ದರಿಂದ ಯಾವುದೇ ಸಾವಾಗಿಲ್ಲ. ಅಡ್ಡ ಪರಿಣಾಮವೂ ಅತಿ ಕಡಿಮೆ ಸಮಯದ್ದು. ಯಾವುದೇ ಔಷಧ ತೆಗೆದುಕೊಂಡರೂ ಅಡ್ಡ ಪರಿಣಾಮ ಆಗುವುದು ಸಾಮಾನ್ಯ. ಪೋಲಿಯೋ ಹನಿ ಹಾಕಿಸಿದಾಗ ಒಂದೆರಡು ನಿಮಿಷ ಹೊಟ್ಟೆನೋವಾಗಿ ಮಗು ಅಳುವುದು ಸಹಜವಾದರೂ ಸಾವು ಸಂಭವಿಸಿರುವ ಉದಾಹರಣೆಯೇ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಆದರೆ, ಪೊಲಿಯೋ ಇಂಜೆಕ್ಷನ್ ನೋವು ತರುವ ವಿಧಾನವಾಗಿದ್ದು, ದುಬಾರಿಯೂ ಹೌದು. ಇದು ಪೋಲಿಯೋ ಔಷಧ ಹನಿಗಿಂತ ನೋವುಕಾರಕ ಮತ್ತು ದುಬಾರಿ. ಈ ಕಂಪನಿಗಳು ದುಬಾರಿ ಔಷಧಿ ಮಾರಾಟದ ಲಾಭಕ್ಕಾಗಿ ಇಂತಹ ಪುಕಾರು ಹುಟ್ಟುಹಾಕಿರಬಹುದೆಂದು ಕೆಲವು ವೈದ್ಯರು ಅನುಮಾನಪಟ್ಟಿದ್ದಾರೆ.

ಲಸಿಕಾ ವಿಧಾನ[ಬದಲಾಯಿಸಿ]

ಎರಡು ವಿಧ ಪೊಲಿಯೋ ಇಂಜೆಕ್ಷನ್ ಹಾಗೂ ಪೊಲಿಯೋ ಔಷಧ ಹನಿ.

ಪೊಲಿಯೋ ಇಂಜೆಕ್ಷನ್[ಬದಲಾಯಿಸಿ]

ಪೊಲಿಯೋ ಇಂಜೆಕ್ಷನ್ ನೋವು ತರುವ ವಿಧಾನವಾಗಿದ್ದು, ದುಬಾರಿಯೂ ಹೌದು. ಇದು ಪೋಲಿಯೋ ಔಷಧ ಹನಿಗಿಂತ ನೋವುಕಾರಕ ಮತ್ತು ದುಬಾರಿ.

ಪೊಲಿಯೋ ಔಷಧ ಹನಿ[ಬದಲಾಯಿಸಿ]

ಪೊಲಿಯೋ ಔಷಧ ಹನಿಯನ್ನು ಮಗುವಿನ ಬಾಯಲ್ಲಿ ಹಾಕಲಾಗುವದು.

ಪೊಲಿಯೋ ಔಷಧ ಹನಿಯನ್ನು ಮಗುವಿನ ಬಾಯಲ್ಲಿ ಹಾಕುತ್ತಿರುವದು.

ಮಗುವಿನ ಬಾಯಿಗೆ ಎರಡು ಹನಿ ಪೋಲಿಯೋ ಹನಿಗಳನ್ನು ಹಾಕಿ ಅದರ ಎಳೆಚಿಗುರು ಎಡ ಕಿರುಬೆರಳಿಗೆ ನೇರಳೆ ಬಣ್ಣದ ಗುರುತನ್ನು ಹಾಕಲಾಗುತ್ತದೆ. ಐದು ವರುಷದ ಒಳಗಿನ ಮಗುವಾಗಿದ್ದರೆ ಹಿಂದಿನ ಬಾರಿ ಹಾಕಿಸಿದ್ದರೂ ಮತ್ತೆ ತಪ್ಪದೆ ಹಾಕಿಸಿ. ಐದು ವರ್ಷ ದಾಟಿದ್ದರೂ ಎರಡು ಹನಿ ಪೋಲಿಯೋ ಹನಿಗಳನ್ನು ಹಾಕಿಸಿ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಈ ಹಿಂದೆ ಎಷ್ಟೇಬಾರಿ ಪೋಲಿಯೊ ಲಸಿಕೆ ಹಾಕಿಸಿದ್ದರೂ ಮತ್ತೊಮ್ಮೆ ಪೋಲಿಯೊ ಹನಿ ಹಾಕಿಸುವ ಮೂಲಕ ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿಸುವಲ್ಲಿ ಸಹಕರಿಸಬೇಕು.

ಸಂಸ್ಥೆಗಳ ಸೇವೆ[ಬದಲಾಯಿಸಿ]

ಪೊಲೀಯೊಮುಕ್ತ ಭಾರತಕ್ಕಾಗಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಶ್ರಮಿಸುತ್ತಿದೆ.

ಪೊಲಿಯೋ ಕರ್ನಾಟಕ ರಾಜ್ಯದಲ್ಲಿ[ಬದಲಾಯಿಸಿ]

ಕರ್ನಾಟಕ ರಾಜ್ಯದಲ್ಲಿ ೨೦೦೮-೦೯ ನೇ ಸಾಲಿನಲ್ಲಿ ಪಲ್ಸ್ ಪೊಲಿಯೋ ರೋಗದ ಬಗ್ಗೆ ಯಾವುದೇ ಪ್ರಕರ ಣಗಳು ಕಂಡು ಬಂದಿಲ್ಲ. ಆದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಬರುವ ಜನೇವರಿ ೧೦ ರಂದು ಮೊದಲನೇ ಸುತ್ತಿನ ಹಾಗೂ ಫೆಬ್ರು ವರಿ ೭ ರಂದು ಎರಡನೇ ಸುತ್ತಿನ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದೆ.

ಪೋಲಿಯೊ ಹನಿ ಎಷ್ಟು ಸುರಕ್ಷಿತ[ಬದಲಾಯಿಸಿ]

ಈ ಪೋಲಿಯೊ ಹನಿ ಎಷ್ಟು ಸುರಕ್ಷಿತ. ಪೋಲಿಯೊ ಹನಿ ತುಂಬಿರುವ ‘ವೈಲ್’ ಸಂಪೂರ್ಣ ಸುರಕ್ಷಿತವಾಗಿದೆಯೇ? ಈ ವಿಷಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ.

ಜಾಗೃತಿ ವಿಚಾರ ಏನು[ಬದಲಾಯಿಸಿ]

ಸಾಮಾನ್ಯವಾಗಿ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಚುಚ್ಚುಮದ್ದುಗಳನ್ನು ೨ರಿಂದ ೮ ಡಿಗ್ರಿಸೆಲ್ಸಿಯಸ್ಟ್‌ನಲ್ಲಿ ಇಡಲಾಗುತ್ತದೆ. ಆದರೆ, ಪೋಲಿಯೊ ಹನಿ ತುಂಬಿರುವ ‘ವೈಲ್’(ಚಿಕ್ಕ ಡಬ್ಬಿ)ನ್ನು ಕಡ್ಡಾಯವಾಗಿ ೨೦ ಡಿಗ್ರಿ ಸೆಲ್ಸಿಯಸ್ಟ್‌ನಲ್ಲಿ ಇಡಬೇಕು. ಹೆಚ್ಚಿನ ತಾಪಮಾನದಲ್ಲಿ ಇಟ್ಟರೆ ಪೋಲಿಯೊ ಹನಿಯ ಶಕ್ತಿ ಇಲ್ಲವಾಗುತ್ತದೆ.

ಆರೋಗ್ಯ ಇಲಾಖೆ ಕಾರ್ಯಕರ್ತರು ಐಸ್ ಡಬ್ಬಿಗಳಲ್ಲಿ ತಂದಿರುತ್ತಾರೆ. ಆ ಡಬ್ಬಿಯಿಂದ ತೆರೆದು ೧೫-೨೦ ಮಕ್ಕಳಿಗೆ ಹಾಕುವಷ್ಟರಲ್ಲಿ ಬಿಸಿಲಿನ ತಾಪಮಾನದಿಂದ ಅಥವಾ ಆ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸಹಜವಾಗಿ ತಾಪಮಾನ ಹೆಚ್ಚಾಗಿರುತ್ತದೆ. ಹೀಗಾಗಿ ಪೋಲಿಯೊ ಹನಿ ಶಕ್ತಿ ಕುಗ್ಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ.

ಸಾರ್ವಜನಿಕರು ಅರಿಯುವುದು ಹೇಗೆ[ಬದಲಾಯಿಸಿ]

ಮೊದಲನೆಯದಾಗಿ ಪೋಲಿಯೊ ಹನಿ ತುಂಬಿರುವ ವೈಲ್( ಚಿಕ್ಕ ಡಬ್ಬಿ)ಯ ಮೇಲಿನ ಚಿತ್ರ ಗಮನಿಸಬೇಕು. ಎರಡನೆಯದಾಗಿ ವೈಲ್‌ನ ಹೊರಗಿನ ಭಾಗ ಒಳಗಿನ ಚೌಕಾಕಾರಕ್ಕಿಂತ ದಟ್ಟ ಬಣ್ಣ ಹೊಂದಿದ್ದರೆ ಅದನ್ನು ಉಪಯೋಗಕ್ಕೆ ಉತ್ತಮವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಮೂರನೆಯದಾಗಿ ವೈಲ್‌ನ ಹೊರಗಿನ ಭಾಗ ಒಳಗಿನ ಚೌಕಾಕಾರಕ್ಕಿಂತ ಸ್ವಲ್ಪ ಮಟ್ಟಿಗೆ ಮಂದ ಬಣ್ಣಕ್ಕೆ ತಿರುಗಿದ್ದರೆ ಆಗಲೂ ಬಳಸಲು ಅಡ್ಡಿ ಇಲ್ಲ. ನಾಲ್ಕನೆಯದಾಗಿ ವೈಲ್‌ನ ಹೊರಗೂ ಮತ್ತು ಒಳಗಿನ ಚೌಕಾಕಾರದಲ್ಲಿ ಒಂದೇ ರೀತಿಯ ಬಣ್ಣವಿದ್ದರೆ ಬಳಸಬಾರದು. ಐದನೆಯದಾಗಿ ವೈಲ್‌ನ ಹೊರಗಿನ ಭಾಗಕ್ಕಿಂತ ಒಳಗಿನ ಭಾಗ ಹೆಚ್ಚು ದಟ್ಟ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಬಳಸಲೇ ಬಾರದು ಎಂಬ ನಿಯಮವಿದೆ.

ಆದರೆ, ಈ ಬಗ್ಗೆ ಸಾರ್ವಜನಿಕರು ಎಷ್ಟು ಗಮನಹರಿಸುತ್ತಾರೆ. ಆರೋಗ್ಯ ಇಲಾಖೆಯೇ ಹೆಚ್ಚಿನ ನಿಗಾವಹಿಸಬೇಕು. ನಿರ್ದಿಷ್ಟ ತಾಪಮಾನದಲ್ಲಿ ಇಟ್ಟಿರುವ ವೈಲ್, ಐಸ್ ಡಬ್ಬಿಗಳ ಸಮರ್ಪಕ ಪೂರೈಕೆ ಮಾಡಬೇಕು. ಅಲ್ಲದೇ ಮೇಲಿನ ನಾಲ್ಕೂ ಅಂಶಗಳ ಬಗ್ಗೆ ಚಿಹ್ನೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಪೋಲಿಯೊ ಹನಿ ಹಾಕಿಸಿ ಎಂಬ ಸಂದೇಶ ಹೊತ್ತ ಬೃಹತ್ ಭಿತ್ತಿಪತ್ರಗಳಲ್ಲಿ ಈ ನಾಲ್ಕು ಅಂಶಗಳ ಚಿಹ್ನೆ ಹಾಕಬೇಕು. ಇದರಿಂದ ಸಾರ್ವಜನಿಕರ ಗಮನ ಸೆಳೆದು ಜಾಗೃತಿಗೆ ಸಾಧ್ಯವಾಗುತ್ತದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. name = PinkBook
  2. [೧]
  3. [೨]
  4. [೩]
  5. [೪]