ವಿಷಯಕ್ಕೆ ಹೋಗು

ಪರ್ತಾಬ್ ರಾಮ್‌ಚಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರ್ತಾಬ್ ರಾಮ್‌ಚಂದ್ ಅವರು ಹಿರಿಯ ಭಾರತೀಯ ಕ್ರೀಡಾ ಪತ್ರಕರ್ತರಾಗಿದ್ದು, ಪತ್ರಿಕೋದ್ಯಮ ವೃತ್ತಿಯ ಎಲ್ಲಾ ವಿಧಾನಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಇದರಲ್ಲಿ ಮುದ್ರಣ, ವಿದ್ಯುನ್ಮಾನ (ಟಿವಿ ಮತ್ತು ರೇಡಿಯೋ ಎರಡೂ) ಮತ್ತು ಡಿಜಿಟಲ್ ಪತ್ರಿಕೋದ್ಯಮವೂ ಒಳಗೊಂಡಿದೆ. ಅವರು ೧೯೬೮ರ ಜೂನ್‌ನಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೯೮೨ ರಲ್ಲಿ ಹಿರಿಯ ಉಪ-ಸಂಪಾದಕರಾಗಿ ರಾಜೀನಾಮೆ ನೀಡಿದರು. ೧೯೮೨ ರಿಂದ ೧೯೯೪ ರವರೆಗೆ ಅವರು ಈಗ ನಿಷ್ಕ್ರಿಯವಾಗಿರುವ ಸಾಪ್ತಾಹಿಕ ನಿಯತಕಾಲಿಕೆ ಸ್ಪೋರ್ಟ್ಸ್ ವರ್ಲ್ಡ್ಗೆ ಮದ್ರಾಸ್ ವರದಿಗಾರರಾಗಿದ್ದರು ಮತ್ತು ಕೋಲ್ಕತ್ತಾದ ದಿ ಟೆಲಿಗ್ರಾಫ್‌ಗೆ ವ್ಯಾಪಕವಾಗಿ ಬರೆದರು. ೧೯೯೪ರಲ್ಲಿ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್ನಲ್ಲಿ ಉಪ ಸುದ್ದಿ ಸಂಪಾದಕರಾಗಿ (ಕ್ರೀಡೆ) ಮತ್ತೆ ಸೇರ್ಪಡೆಯಾದರು ಮತ್ತು ಮಾರ್ಚ್ ೧೯೯೯ ರಲ್ಲಿ ರಾಜೀನಾಮೆ ನೀಡುವವರೆಗೂ ವಿಭಾಗದ ಮುಖ್ಯಸ್ಥರಾಗಿದ್ದರು.[] ಅವರು ೧೯೯೯ ರಿಂದ ೨೦೦೧ರ ವರೆಗೆ ಕ್ರಿಕ್ಇನ್ಫೋದಲ್ಲಿ ಹಿರಿಯ ಸಂಪಾದಕರಾಗಿದ್ದರು.

ಅವರು ಸಿಫಿ ಮತ್ತು ಯಾಹೂ ನ ಕ್ರಿಕೆಟ್ ವಿಭಾಗಗಳಿಗೆ ಸಕ್ರಿಯ ಕೊಡುಗೆ ನೀಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "The Gentle Executioners: Story Of Indian Spinners by Partab Ramchand". HomeShop18.