ಪರಿವಿಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಿವಿಡಿಯ ಒಂದು ಉದಾಹರಣೆ

ಪರಿವಿಡಿ ಸಾಮಾನ್ಯವಾಗಿ ಒಂದು ಲಿಖಿತ ಕೃತಿಯ ಆರಂಭದ ಮೊದಲು ಒಂದು ಪುಟದಲ್ಲಿ ಕಂಡುಬರುವ ಒಂದು ಪಟ್ಟಿ ಮತ್ತು ಇದು ಅವುಗಳ ಆರಂಭದ ಪುಟ ಸಂಖ್ಯೆಗಳೊಂದಿಗೆ ಅಧ್ಯಾಯ ಅಥವಾ ವಿಭಾಗ ಶೀರ್ಷಿಕೆಗಳು ಅಥವಾ ಸಂಕ್ಷಿಪ್ತ ವಿವರಣೆಗಳನ್ನು ಹೊಂದಿರುತ್ತದೆ.

ಕ್ವಿಂಟಸ್ ವಲೇರಿಯಸ್ ಸೊರಾನಸ್ ಒಂದು ಉದ್ದವಾದ ಕೃತಿಯಲ್ಲಿ ಸಂಚರಿಸಲು ಓದುಗರಿಗೆ ಸಹಾಯಮಾಡಲು ಪರಿವಿಡಿಯನ್ನು ಒದಗಿಸಿದ ಮೊದಲ ಲೇಖಕ ಎಂದು ಹಿರಿಯ ಪ್ಲಿನಿ ಹೊಣೆಮಾಡುತ್ತಾನೆ.[೧]

ಪರಿವಿಡಿಯು ಸಾಮಾನ್ಯವಾಗಿ ಉದ್ದ ಕೃತಿಗಳಲ್ಲಿ ಅಧ್ಯಾಯ ಶೀರ್ಷಿಕೆಗಳಂತಹ ಮೊದಲ ಮಟ್ಟದ ಶಿರೋನಾಮೆಗಳ ಶೀರ್ಷಿಕೆಗಳು ಅಥವಾ ವಿವರಣೆಗಳನ್ನು, ಮತ್ತು ಹಲವುವೇಳೆ ಅಧ್ಯಾಯಗಳೊಳಗಿನ ಎರಡನೇ ಮಟ್ಟದ ಅಥವಾ ವಿಭಾಗ ಶೀರ್ಷಿಕೆಗಳನ್ನೂ, ಮತ್ತು ಕೆಲವೊಮ್ಮೆ ಮೂರನೇ ಮಟ್ಟದ ಶೀರ್ಷಿಕೆಗಳನ್ನು ಸಹ ಒಳಗೊಳ್ಳುತ್ತದೆ. ಪರಿವಿಡಿಯಲ್ಲಿನ ವಿವರಣೆಯ ಆಳ ಕೃತಿಯ ಉದ್ದವನ್ನು ಆಧರಿಸಿರುತ್ತದೆ. ಹೆಚ್ಚು ಉದ್ದ ಕೃತಿಗಳು ಕಡಿಮೆ ವಿವರಣೆ ಹೊಂದಿರುತ್ತವೆ. ವಿಧ್ಯುಕ್ತ ವರದಿಗಳು (ಹತ್ತು ಅಥವಾ ಹೆಚ್ಚು ಪುಟಗಳಿರುವ ಮತ್ತು ಮೆಮೊ ಅಥವಾ ಪತ್ರದಲ್ಲಿ ಹಾಕಲು ಬಹಳ ಉದ್ದವಿರುವ) ಕೂಡ ಪರಿವಿಡಿಯನ್ನು ಹೊಂದಿರುತ್ತವೆ. ಆಂಗ್ಲ ಭಾಷೆಯ ಪುಸ್ತಕದಲ್ಲಿ, ಪರಿವಿಡಿಯು ಸಾಮಾನ್ಯವಾಗಿ ಶೀರ್ಷಿಕೆ ಪುಟ, ಹಕ್ಕುಸ್ವಾಮ್ಯ ಸೂಚನೆಗಳ ನಂತರ, ಮತ್ತು ತಾಂತ್ರಿಕ ಪತ್ರಿಕೆಗಳಲ್ಲಿ ಸಾರಾಂಶದ ನಂತರ ಮತ್ತು ಯಾವುದೇ ಕೋಷ್ಟಕಗಳು ಅಥವಾ ಚಿತ್ರಗಳ ಪಟ್ಟಿಗಳು, ಮುನ್ನುಡಿ ಮತ್ತು ಪೀಠಿಕೆಯ ಮೊದಲು ಕಾಣಬರುತ್ತದೆ.

ಮುದ್ರಿತ ಪರಿವಿಡಿಗಳು ಪ್ರತಿ ಭಾಗ ಆರಂಭವಾಗುವ ಪುಟ ಸಂಖ್ಯೆಗಳನ್ನು ಸೂಚಿಸುತ್ತವೆ, ಅದೇ ಅಂಕೀಯ ಪರಿವಿಡಿಗಳು ಪ್ರತಿ ಭಾಗಕ್ಕೆ ಹೋಗಲು ಕೂಡುಕೊಂಡಿಗಳನ್ನು ಕೊಡುತ್ತವೆ. ಪುಟ ಸಂಖ್ಯೆಗಳ ವಿನ್ಯಾಸ ಮತ್ತು ಸ್ಥಳ ಪ್ರಕಾಶಕನಿಗೆ ಶೈಲಿಯ ವಿಷಯವಾಗಿರುತ್ತದೆ. ಪುಟ ಸಂಖ್ಯೆಗಳು ತಲೆಬರಹ ಪಠ್ಯದ ನಂತರ ಕಾಣಿಸಿದರೆ, ಅವುಗಳ ಮೊದಲು ಚಿಹ್ನಾಸರಣಿಗಳು ಎಂದು ಕರೆಯಲಾದ ಚಿಹ್ನೆಗಳು ಬರಬಹುದು. ಚಿಹ್ನಾಸರಣಿಗಳು ಸಾಮಾನ್ಯವಾಗಿ ಪುಟದ ಎದುರು ಭಾಗದ ಅಧ್ಯಾಯ ಅಥವಾ ವಿಭಾಗ ಶೀರ್ಷಿಕೆಗಳಿಂದ ಸಾಗುವ ಚುಕ್ಕೆಗಳು ಅಥವಾ ಪೂರ್ಣವಿರಾಮಗಳಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಪುಟ ಸಂಖ್ಯೆ ಪಠ್ಯದ ಮೊದಲು ಕಾಣಬರುತ್ತದೆ.

ಒಂದು ಪುಸ್ತಕ ಅಥವಾ ದಸ್ತಾವೇಜು ವಿಭಿನ್ನ ಲೇಖಕರ ಅಧ್ಯಾಯಗಳು, ಲೇಖನಗಳು, ಅಥವಾ ಕಥೆಗಳನ್ನು ಹೊಂದಿದ್ದರೆ, ಅವರ ಹೆಸರುಗಳು ಸಾಮಾನ್ಯವಾಗಿ ಪರಿವಿಡಿಯಲ್ಲಿ ಕಾಣಬರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Pliny the Elder, preface 33, Historia naturalis; John Henderson, “Knowing Someone Through Their Books: Pliny on Uncle Pliny (Epistles 3.5),” Classical Philology 97 (2002), p. 275.
"https://kn.wikipedia.org/w/index.php?title=ಪರಿವಿಡಿ&oldid=757998" ಇಂದ ಪಡೆಯಲ್ಪಟ್ಟಿದೆ