ಪರಿಮಾಣ ವಾಚಕಗಳು

ವಿಕಿಪೀಡಿಯ ಇಂದ
Jump to navigation Jump to search

ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣ ವಾಚಕಗಳು ಎಂಬ ಹೆಸರು.

  1. ಅಷ್ಟು ದೊಡ್ಡ ಕಲ್ಲು
  2. ಇಷ್ಟು ಜನರ ಗುಂಪು
  3. ಎಷ್ಟು ಕಾಸುಗಳು?

ಈ ವಾಕ್ಯಗಳಲ್ಲಿ ಅಷ್ಟು, ಇಷ್ಟು, ಎಷ್ಟು ಪದಗಳು ಒಂದು ಗೊತ್ತಾದ ಅಳತೆ ಅಥವಾ ಸಂಖ್ಯೆಯನ್ನು ಹೇಳುವುದಿಲ್ಲ. ಅಂದರೆ, ಇಲ್ಲಿ ನಿರ್ದಿಷ್ಟವಾದ ಅಳತೆ, ಸಂಖ್ಯೆ ಇಲ್ಲಿ ಇಲ್ಲ. ಈ ಪದಗಳು ಕೇವಲ ಪರಿಮಾಣವನ್ನು ಮಾತ್ರ ತಿಳಿಸುತ್ತದೆ. ಇಂಥ ಪದಗಳಿಗೆ, ಪರಿಮಾಣ ವಾಚಕಗಳು ಎಂದು ಕರೆಯುತ್ತೇವೆ.

ಉದಾ: ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಸ್ವಲ್ಪ ಇತ್ಯಾದಿ.

  • ಪರಿಮಾಣಕ್ಕೆ - ಹಲವು ದಿನಗಳು, ಕೆಲವು ಊರುಗಳು
  • ಗಾತ್ರಕ್ಕೆ - ಗುಡ್ಡದಷ್ಟು, ಬೆಟ್ಟದಷ್ಟು, ಆನೆಯಷ್ಟು, ಪಲ್ಲದನಿತು
  • ಅಳತೆಗೆ - ಅಷ್ಟು ದೂರ, ಇಷ್ಟು ಪುಸ್ತಕಗಳು

ನೋಡಿ[ಬದಲಾಯಿಸಿ]