ಪರಿಚಯ (ಕಿರುತೆರೆ ಕಾರ್ಯಕ್ರಮ)

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ: ಬೆಂಗಳೂರು ದೂರದರ್ಶನ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾದ ವಿಶೇಷ ರೀತಿಯ ಸಂದರ್ಶನ ಕಾರ್ಯಕ್ರಮ ಸರಣಿ. ಸಮಾಜದ ವಿವಿದ ಹಂತಗಳಲ್ಲಿರುವ ಜನಸಾಮಾನ್ಯರನ್ನು ಅವರ ದಿನ ನಿತ್ಯದ ಕೆಲಸದಲ್ಲಿರುವಾಗ, ಅವರ ಬಳಿಯೇ ಹೋಗಿ ಸಂದರ್ಶಿಸುವ ಕಾರ್ಯಕ್ರಮವಾಗಿತ್ತು. ಇದನ್ನು ಕನ್ನಡ ಚಿತ್ರ ನಟ/ನಿರ್ದೇಶಕ ಶಂಕರ್ ನಾಗ್ ನಡೆಸಿಕೊಡುತ್ತಿದ್ದರು. ಅವರ ಅವಸಾನದ ನಂತರ ನಟ ರಮೇಶ್ ಇದನ್ನು ಮುಂದುವರೆಸಿದರು. ಗಾರೆ ಕೆಲಸ ಮಾಡುವವರು, ಗ್ಯಾರೇಜ್ ಮಾಲೀಕರು, ಆಟೋ ಡ್ರೈವರ್‌ ಹೀಗೆ ವಿವಿಧ ಉದ್ಯೋಗಗಳಲ್ಲಿ ನಿರತರಾದವರ ಪರಿಚಯ ಕ್ರಮ ಇದಾಗಿತ್ತು.