ಪರಾಗ ಮತ್ತು ಪರಾಗಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹೂವಿನ ಗಂಡು ಭಾಗಗಳಾದ ಕೇಸರಗಳ ತುದಿಯಲ್ಲಿರುವ ಪರಾಗಕೋಶಗಳಿಂದ ಉತ್ಪತ್ತಿಯಾಗುವ ದೂಳಿನಂತಹ ಭಾಗಗಳು ಪರಾಗಗಳು. ಮೈಕ್ರೋಸ್ಪೋರ್ ಇದರ ವೈಜ್ಞಾನಿಕ ನಾಮ.ಸೂಕ್ಷ್ಮ ದರ್ಶಕದಲ್ಲಷ್ಟೇ ಪರಾಗದ ರಚನೆಯ ವಿವರಗಳನ್ನು ಕಾಣಬಹುದಾಗಿದೆ.ಸಸ್ಯ ಗುಂಪುಗಳ ಪೈಕಿ ನಗ್ನ ಬೀಜ ಸಸ್ಯಗಳಲ್ಲಿ ಹಾಗೂ ಆವೃತ ಬೀಜ ಸಸ್ಯಗಳಲ್ಲಿ ಮಾತ್ರ ಪರಾಗವನ್ನು ಕಾಣಬಹುದು.ಪರಾಗವು ಬೆಳೆದು ಪುರುಷ ಲಿಂಗಾಣುಗಳನ್ನು ಉಂಟುಮಾಡಿ ಅಂಡಾಶಯದ ಅಂಡಗಳನ್ನು ಕೂಡಿದಾಗಷ್ಟೇ ಸಸ್ಯದ ಮುಂದಿನ ಪೀಳಿಗೆಯ ಉದಯವಾಗುವುದು.ಎಕಕೋಶ ಜೀವಿಗಳಾದ ಪರಾಗಗಳಿಗೆ ಎಕ್ಲ್ಯೆನ್ ಮತ್ತು ಇಂಟೈನ್ ಎಂಬ ಎರಡು ಭಿತ್ತಿಗಳಿವೆ.ಒಳಗಿನ ಜೀವ ದ್ರವ್ಯದಲ್ಲಿ ಸಂಸತಿ ನ್ಯೂಕ್ಲಿಯನ್ ಮತ್ತು ಕಾಯಕ ನ್ಯೂಕ್ಲಿಯನ್ ಇರುತ್ತದೆ.ಶಲಾಕಾಗ್ರವನ್ನು ಸೇರಿದ ಪರಾಗಗಳು ಮೊಳಕೆಯೊಡೆಯುತ್ತದೆ.ಭಿತ್ತಿಯಲ್ಲಿರುವ ಮೊಳಕೆ ತೂತುಗಳ ಮೂಲಕ ಪರಾಗನಾಳದೊಳಗೆ ಸಂಸತಿ ನ್ಯೂಕ್ಲಿಯನ್ ಒಡೆದು ಎರಡು ಪುರುಷ ಲಿಂಗಾಣುಗಳನ್ನು ಉತ್ಪತ್ತಿ ಮೂಡುತ್ತದೆ.ಇವು ಮುಂದೆ ಅಂದಕವನ್ನು ತಲುಪಿ ಗರ್ಭದಧಾರಣಿಯಲ್ಲಿ ಭಾಗ ವಹಿಸುತ್ತದೆ.ಗಂಡು ಭಾಗಗಳಾದ ಪರಾಗಕೋಶಗಳಿಂದ ಹೆಣ್ಣು ಭಾಗವಾದ ಓವ್ಯೂಲ್ ಗಳಿರುವ ಅಂಗಗಳಿಗೆ ಪರಾಗಗಳು ಸಾಗಿಸಲ್ಪಡುವ ಕ್ರಿಯೆಗೆ ಪರಾಗಣ ಎಂದು ಹೆಸರು.ಅನಾವೃತ ಬೀಜ ಸಸ್ಯಗಳಲ್ಲಿ ಇದು ಹೆಚ್ಚಾಗಿ ಗಾಳಿಯ ಮೂಲಕ ನಡೆಯುವುದು.ಆವೃತ ಬೀಜ ಸಸ್ಯಗಳ ಅಂಡಗಳು ಅಂಡಾಶಯ ಒಳಗೆ ವ್ಯವಸ್ಧಿತವಾಗಿದ್ದು,ಪರಾಗಗಳು ನೇರ ಅಂಡಗಳ ಸಂಪರ್ಕಕ್ಕೆ ಬಾರದೆ,ಶಲಾಕಾಗ್ರವ ತುದಿಗೆ ವರ್ಗಾವಣಿ ಆಗುವುವು.ಈ ಸಸ್ಯ ಗುಂಪಿನಲ್ಲಿ, ಪರಾಗಗಳು ಹೂವಿನ ಶಲಾಕಾಗ್ರ ತಲುಪಲು ಗಾಳಿ,ನೀರು,ಕೀಟ, ಹಕ್ಕಿ ಕೆಲವೊಮ್ಮೆ ಬಾವಲಿ,ಒಸವನ ಹುಳುಗಳೂ ಮಧ್ಯವರ್ತಿಯಾಗುತ್ತದೆ.ಆಯಾಯ ಮಧ್ಯವರ್ತಿಗಳ ಪರಾಗಣಕ್ಕೆ ಹೊಂದುವಂತೆ ಸಸ್ಯಗಳಿಗೆ ವಿಶೇಷ ರಚನಾ ಕೌಶಲ್ಯವಿದೆ.