ವಿಷಯಕ್ಕೆ ಹೋಗು

ಪದಾತಿ (ಚದುರಂಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪದಾತಿ (ಚದುರ೦ಗ) ಇಂದ ಪುನರ್ನಿರ್ದೇಶಿತ)
ಚದುರಂಗದ ಪದಾತಿ
ಪದಾತಿಗಳ ಚಲನೆ

ಪದಾತಿ (ಕಾಲಾಳು, ಆಂಗ್ಲದಲ್ಲಿ 'ಪಾನ್') ಚದುರಂಗದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಮತ್ತು ಅತಿ ದುರ್ಬಲ ಕಾಯಿ. ಇದು ಹಿಂದಿನ ಕಾಲದ ಸೈನ್ಯಗಳ ಪದಾತಿ ದಳವನ್ನು ಪ್ರತಿನಿಧಿಸುತ್ತದೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ಎಂಟು ಪದಾತಿಗಳಿರುತ್ತವೆ.

ಇತರ ಕಾಯಿಗಳನ್ನು "ಹಿಡಿಯುವ" ಕ್ರಮ.

ಪದಾತಿಗಳ ಚಲನೆ ಬೇರೆಲ್ಲ ಕಾಯಿಗಳ ಚಲನೆಗೆ ಹೋಲಿಸಿದಂತೆ ಸ್ವಲ್ಪ ವಿಚಿತ್ರವಾದದ್ದು. ಪದಾತಿಗಳು ಮುಂದಕ್ಕೆ ಮಾತ್ರ ಚಲಿಸಬಲ್ಲವು. ಮೊದಲ ಬಾರಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸಬಲ್ಲ ಪದಾತಿಗಳು ಇದರ ನಂತರ ಒಂದೊಂದು ಚೌಕ ಮಾತ್ರ ಚಲಿಸಬಲ್ಲವು. ಬೇರೆ ಕಾಯಿಗಳನ್ನು ಹಿಡಿಯುವಾಗ ಮಾತ್ರ ಪದಾತಿಗಳು ತಮ್ಮ ಮೂಲೆಯ ಕಡೆಗಿರುವ ಒಂದು ಚೌಕ್ಕೆ ಹೋಗುತ್ತವೆ. ಕಾಣಿಸಿರುವ ಚಿತ್ರದಲ್ಲಿ ಇರುವ ಬಿಳಿ ಪದಾತಿ ಕಪ್ಪು ಆನೆ ಅಥವಾ ಕಪ್ಪು ಕುದುರೆಯನ್ನು ತಿನ್ನಬಲ್ಲದು.

ಆನ್ ಪಾಸಾನ್"

ಆನ ಪಾಸಾನ್ ಪದಾತಿಗಳ ಅತಿ ವಿಚಿತ್ರ ಚಲನೆ. ಒಂದು ಪದಾತಿ ಮೊದಲ ಬಾರಿ ಚಲಿಸುವಾಗ ಎರಡು ಚೌಕ ಕ್ರಮಿಸಿ ಎದುರಾಳಿಯ ಒಂದು ಪದಾತಿಯ ಪಕ್ಕಕ್ಕೆ ಬಂದು ನಿಂತರೆ, ಎದುರಾಳಿಯ ಪದಾತಿ ಮೊದಲನೆಯದನ್ನು "ಹಿಡಿದು" ಮೂಲೆಯ ಮೇಲೆ ಒಂದು ಚೌಕ ಕ್ರಮಿಸಬಲ್ಲದು (ಚಿತ್ರ ನೋಡಿ). ಬಿಳಿ ಪದಾತಿ ಕಪ್ಪು ಪದಾತಿಯನ್ನು "ತಿಂದು" ಗುರುತು ಹಾಕಿರುವ ಚೌಕಕ್ಕೆ ಚಲಿಸಬಲ್ಲುದು. ಈ ರೀತಿಯ ಚಲನೆ ೧೩ ನೆಯ ಶತಮಾನದಲ್ಲಿ ಪರಿಚಯಿಸಲ್ಪಟ್ಟಿದ್ದು.

ಒಂದು ಪದಾತಿ ಇಡೀ ಮಣೆಯನ್ನು ಕ್ರಮಿಸಿ ಇನ್ನೊಂದು ತುದಿಯನ್ನು ಮುಟ್ಟಿದರೆ ಅದು ಆಟಗಾರನ ಆಯ್ಕೆಯ ಬೇರೆ ಯಾವುದಾದರೂ ಕಾಯಿಯಾಗಿ ಪರಿವರ್ತನೆ ಹೊಂದುತ್ತದೆ.

ಉಕ್ತಿ

[ಬದಲಾಯಿಸಿ]
  • "ಪದಾತಿಗಳು ಚದುರಂಗದ ಹೃದಯ." - ಆಂಡ್ರೆ ಫಿಲಿಡಾರ್, ೧೮ ನೇ ಶತಮಾನದ ಫರೆಂಚ್ ಆಟಗಾರ, ಪದಾತಿಗಳನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸಿದವರು.

ಇವನ್ನೂ ನೋಡಿ

[ಬದಲಾಯಿಸಿ]

ಚದುರಂಗ

ಚದುರಂಗದ ಕಾಯಿಗಳು

ರಾಜ | ರಾಣಿ | ಆನೆ | ಒಂಟೆ | ಕುದುರೆ | ಪದಾತಿ