ವಿಷಯಕ್ಕೆ ಹೋಗು

ಪಥ್ಯಮಾಡುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಥ್ಯಮಾಡುವುದು ದೇಹದ ತೂಕವನ್ನು ಇಳಿಸಲು, ಕಾಪಾಡಿಕೊಳ್ಳಲು, ಅಥವಾ ಹೆಚ್ಚಿಸಲು ಆಹಾರವನ್ನು ನಿಯಂತ್ರಿತವಾಗಿ ಮತ್ತು ಮೇಲ್ವಿಚಾರಣೆಯಲ್ಲಿ ತಿನ್ನುವ ಅಭ್ಯಾಸ. ಬೇರೆ ಪದಗಳಲ್ಲಿ, ಅದು ಆಹಾರದ ಜಾಗೃತ ನಿಯಂತ್ರಣ ಅಥವಾ ನಿರ್ಬಂಧ. ನಿರ್ಬಂಧಿತ ಆಹಾರಕ್ರಮವನ್ನು ಹಲವುವೇಳೆ ಅಧಿಕ ತೂಕದವರು ಅಥವಾ ಬೊಜ್ಜಿರುವವರು, ಕೆಲವೊಮ್ಮೆ ದೈಹಿಕ ವ್ಯಾಯಾಮದ ಸಂಯೋಜನೆಯಲ್ಲಿ, ದೇಹದ ತೂಕವನ್ನು ಇಳಿಸಲು ಬಳಸುತ್ತಾರೆ. ಕೆಲವು ಜನರು ತೂಕ ಹೆಚ್ಚಿಸಲು ಒಂದು ಆಹಾರಕ್ರಮವನ್ನು ಅನುಸರಿಸುತ್ತಾರೆ. ಆಹಾರಕ್ರಮಗಳನ್ನು ಸ್ಥಿರ ದೈಹಿಕ ತೂಕ ಕಾಪಾಡಿಕೊಳ್ಳಲು ಮತ್ತು ಆರೋಗ್ಯ ಸುಧಾರಿಸಲೂ ಬಳಸಬಹುದು. ನಿರ್ದಿಷ್ಟವಾಗಿ, ಮಧುಮೇಹವನ್ನು ತಡೆಗಟ್ಟಲು ಅಥವಾ ಇಲಾಜು ಮಾಡಲು ಆಹಾರಕ್ರಮಗಳನ್ನು ವಿನ್ಯಾಸಗೊಳಿಸಬಹುದು.

ತೂಕ ಇಳಿತವನ್ನು ಪ್ರೋತ್ಸಾಹಿಸುವ ಆಹಾರಕ್ರಮಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು: ಕಡಿಮೆ ಕೊಬ್ಬಿನ ಆಹಾರಕ್ರಮ, ಕಡಿಮೆ ಕಾರ್ಬೊಹೈಡ್ರೇಟಿನ ಆಹಾರಕ್ರಮ, ಕಡಿಮೆ ಕ್ಯಾಲೊರಿಯ ಆಹಾರಕ್ರಮ, ಬಹಳ ಕಡಿಮೆ ಕ್ಯಾಲೊರಿಯ ಆಹಾರಕ್ರಮ ಮತ್ತು ಬಹಳ ಇತ್ತೀಚೆಗೆ ಹೊಂದಿಕೊಳ್ಳುವ ಆಹಾರಕ್ರಮ.[] ಆರು ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳ ಹೆಚ್ಚಿನ ವಿಶ್ಲೇಷಣೆಯಲ್ಲಿ ಕಡಿಮೆ ಕ್ಯಾಲೊರಿ, ಕಡಿಮೆ ಕಾರ್ಬೊಹೈಡ್ರೇಟ್, ಮತ್ತು ಕಡಿಮೆ ಕೊಬ್ಬಿನ ಆಹಾರಕ್ರಮಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ, ಮತ್ತು ಎಲ್ಲ ಅಧ್ಯಯನಗಳಲ್ಲಿ ೧೨-೧೮ ತಿಂಗಳ ಅವಧಿಯಲ್ಲಿ ೨-೪ ಕಿಲೊ ತೂಕ ಇಳಿತವಾಗಿತ್ತು. ಸಾಮಾನ್ಯವಾಗಿ, ಕ್ಯಾಲೊರಿ ಸೇವನೆಯನ್ನು ಕಡಿಮೆಗೊಳಿಸುವ ಯಾವುದೇ ಆಹಾರಕ್ರಮ ಅತ್ಯಂತ ಪರಿಣಾಮಕಾರಿ ಆಹಾರಕ್ರಮವಾಗಿರುತ್ತದೆ.

ಪಥ್ಯಮಾಡಿ ತೂಕ ಇಳಿಸಿಕೊಳ್ಳುವುದು, ಅನಾರೋಗ್ಯದವರಿಗೆ ಪ್ರಯೋಜನಕಾರಿಯಾದರೂ, ಸ್ವಲ್ಪಮಟ್ಟಿಗೆ ಆರೋಗ್ಯಕರ ವ್ಯಕ್ತಿಗಳಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸಬಹುದು.

ಮೊದಲ ಜನಪ್ರಿಯ ಆಹಾರಕ್ರಮಕ್ಕೆ "ಬ್ಯಾಂಟಿಂಗ್" ಎಂಬ ಹೆಸರು, ಇದಕ್ಕೆ ವಿಲಿಯಮ್ ಬ್ಯಾಂಟಿಂಗ್‍ರ ಹೆಸರಿಡಲಾಗಿದೆ. ೧೮೬೩ರಲ್ಲಿ ಇವರು, ನಿರ್ದಿಷ್ಟ ಕಡಿಮೆ ಕಾರ್ಬೊಹೈಡ್ರೇಟ್, ಕಡಿಮೆ ಕ್ಯಾಲೊರಿ ಆಹಾರಕ್ರಮದ ವಿವರಗಳನ್ನು ನೀಡಿದರು. ಇದು ಅವರ ಸ್ವಂತದ ಗಣನೀಯ ತೂಕ ಇಳಿಕೆಗೆ ಕಾರಣವಾಗಿತ್ತು.

ದೀರ್ಘಕಾಲದ ಉಪವಾಸ ಅಪೌಷ್ಟಿಕತೆಯ ದುಷ್ಪರಿಣಾಮದ ಕಾರಣ ಅಪಾಯಕಾರಿಯಾಗಬಹುದು ಮತ್ತು ಕೇವಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ದೀರ್ಘಕಾಲದ ಉಪವಾಸದ ಅವಧಿಯಲ್ಲಿ ಮಿದುಳಿನ ಆದ್ಯತೆಯ ಶಕ್ತಿಮೂಲವಾದ ರಕ್ತದ ಗ್ಲೂಕೋಸ್‍ನ ಕಡಿತ, ದೇಹ ತನ್ನ ಗ್ಲೈಕೋಜೆನ್ ಸಂಗ್ರಹವನ್ನು ಖಾಲಿಮಾಡಲು ಕಾರಣವಾಗುತ್ತದೆ. ಗ್ಲೈಕೊಜೆನ್ ಖಾಲಿಯಾದಂತೆ ದೇಹವು ಮಿದುಳಿಗೆ ಕೀಟೋನ್ ಬಳಸಿ ಶಕ್ತಿ ಒದಗಿಸಲು ಆರಂಭಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Strychar I (January 2006). "Diet in the management of weight loss". CMAJ. 174 (1): 56–63. doi:10.1503/cmaj.045037. PMC 1319349. PMID 16389240.