ಪತ್ರಾಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಾಗಾರ[ಬದಲಾಯಿಸಿ]

50 ವರ್ಷಗಳ ಹಿಂದಿನ ದಾಖಲೆ, ಪುಸ್ತಕಗಳು, ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ತಾಳೆಗರಿ, ಹಸ್ತಪ್ರತಿ, ಕಡತ, ಮುಂತಾದ ಅಮೂಲ್ಯ ದಾಖಲೆಗಳನ್ನು ಶೇಖರಿಸಿಡುವ ಸಂಗ್ರಹಾಲಯಕ್ಕೆ ಪತ್ರಾಗಾರವೆನ್ನುತ್ತಾರೆ (Archives) ಇತ್ತೀಚೆಗೆ ಪತ್ರಾಗಾರಗಳು ಬೆರಳೆಣಿಕೆಯಷ್ಟು ಪ್ರಾರಂಭವಾಗಿದೆ. ಆದರೆ ಪತ್ರಾಗಾರದ ರೀತಿಯಲ್ಲಿ ಕೃತಿಗಳನ್ನು ಜೋಪಾನ ಮಾಡಬೇಕಾದರೆ ನಮ್ಮಲ್ಲಿರುವ ಪುಸ್ತಕಗಳ ಸಂಗ್ರಹದಿಂದ ಇವನ್ನೆಲ್ಲ ಬೇರ್ಪಡಿಸಿ ಪ್ರತ್ಯೇಕವಾಗಿ ಜೋಡಿಸಬೇಕಾಗುತ್ತದೆ. ಪತ್ರಾಗಾರದಲ್ಲಿ ತಾಳೆಗರಿ, ಹಸ್ತಪ್ರತಿ, ಲಿಥೋಗ್ರಫಿ ಮುದ್ರಿತ ಕೃತಿಗಳು, ಟೈಪ್ ಮಾಡಿದ ಕೃತಿಗಳು , ಆದುನಿಕ ಮುದ್ರಿತ ಕೃತಿಗಳು, ಕಡತ, ಫೈಲುಗಳು, ಪೋಟೋ, ಸ್ಮರಣ ಸಂಚಿಕೆ, ನಿಯತಕಾಲಿಕೆಗಳು, ವರದಿಗಳು, ಹೀಗೆ ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಿ ಜೋಪಾನ ಮಾಡಬೇಕಾಗುತ್ತದೆ. ಪುರಾತನ ಕಾಲದಿಂದ ಬಂದಿರುವ ಹಳೆಯ ಗ್ರಂಥಗಳು, ನಿಯತಕಾಲಿಕೆಗಳು ಮತ್ತು ದಾಖಲೆಗಳನ್ನು ಕಾಪಾಡುವುದು ಅತ್ಯಂತ ಮಹತ್ವವಾದುದು. ಇವುಗಳು ಪೂರ್ವಿಕರಿಂದ ಬಂದ ಪವಿತ್ರ ಆಸ್ತಿ. ಇವು ಇಂದಿನ ಜನಾಂಗಕ್ಕೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಅತ್ಯಂತ ಅವಶ್ಯಕ ಸಾಧನ ಸಾಧನಗಳಾಗಿವೆ. ಆದ್ದರಿಂದ ಇವುಗಳೆನ್ನವನ್ನು ಕಾಪಿಡುವುದು ನಮ್ಮ ಕರ್ತವ್ಯವಾಗಿದೆ.

ಈಗ ಎಲ್ಲಿ ನೋಡಿದರಲ್ಲಿ ಗ್ರಂಥಾಲಯಗಳಿವೆ ಪ್ರಾಥಮಿಕ ಮಟ್ಟದಿಂದ ಹಿಡಿದು ಇಂಜಿನಿಯರ್ ಕಾಲೆಜು ತನಕವೂ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆ ಇದೆ. ಶಿಕ್ಷಣ ಕ್ಷೇತ್ರಗಳಲ್ಲದೆ, ದಾರ್ಮಿಕ ಕೇಂದ್ರ, ಸಂಘ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಹೀಗೆ ಹತ್ತು ಹಲವು ರೀತಿಯಲ್ಲಿ ಓದುಗನಿಗೆ ಸುಲಭವಾಗಿ ಸಿಗುವ ಹಾಗೆ ಗ್ರಂಥಗಳು ಸಿಗುತ್ತವೆ. ಕತೆ ನಾಟಕ, ಚರಿತ್ರೆ, ಧಾರ್ಮಿಕ ಇಂತಹ ಕೆಲವೇ ವಿಷಯಗಳನ್ನೊಳಗೊಂಡ ಗ್ರಂಥಗಳು ಸಾರ್ವಜನಿಕ ಗ್ರಂಥಾಲಯದಲ್ಲಿದ್ದರೆ, ದಾರ್ಮಿಕ, ಸಂಸ್ಕøತಿ, ಚರಿತ್ರೆ, ಮುಂತಾದ ವಿಷಯಗಳನ್ನೊಳಗೊಂಡ ಗ್ರಂಥಗಳು ದಾರ್ಮಿಕ ಕೇಂದ್ರಗಳಲ್ಲಿರುತ್ತದೆ. ಶಿಕ್ಷಣ, ಪಠ್ಯ, ಚರಿತ್ರೆ, ಭಾಷೆ, ಇತಿಹಾಸ, ವಿಜ್ಞಾನ, ಮುಂತಾದ ಗ್ರಂಥಾಲಯಗಳು ಶಿಕ್ಷಣ ಕ್ಷೇತ್ರಗಳಲ್ಲಿರುತ್ತದೆ. ಗ್ರಂಥಗಳು ವಿದ್ಯಾಬ್ಯಾಸ, ಮನೋರಂಜನೆ, ಜ್ಞಾನಾರ್ಜನೆಗಳಿಗೆ ಉಪಯೋಗವಾದಂತೆ ಇಂದಿನ ಸಂಶೋಧನೆಗಳಿಗೂ ಪ್ರಯೋಜನಕಾರಿಯಾಗಿದೆ. ಆದರೆ ಸಂಶೋಧನೆಗಳು ನಡೆಯುವುದು 50, 100, 200 ವರ್ಷಗಳ ಹಿಂದೆ ಹೇಗೆ ದಾಖಲಾಗಿತ್ತು. ವಿದೇಶಿಯರು, ಹಿರಿಯರು, ರಾಜ ಮಹಾರಾಜರುಗಳು, ಕಾಲ ಜ್ಞಾನಿಗಳು ಏನು ಹೇಳಿದ್ದರು ಎನ್ನುವುದರ ಹುಡುಕಾಟವೇ ಆಗಿದೆ. ಆದರೆ ಈ ನಿಟ್ಟಿನಲ್ಲಿ ಸಂಶೋಧಕನು ಮೇಲೆ ಹೇಳಿದ ಯಾವುದೇ ಗ್ರಂಥಾಲಯಕ್ಕೆ ತನ್ನ ಸಂಶೋಧನೆಯ ವಿಷಯವನ್ನು ಅರಸಿಕೊಂಡು ಹೋದಾಗ ಅವನಿಗೆ ಸಿಗುವುದು 50 ವರ್ಷಗಳಿಂದೀಚೆಗಿನ ಗ್ರಂಥಗಳು. ಅದಕ್ಕಿಂತಲೂ ಹಿಂದಿನ ಗ್ರಂಥಗಳಿಗೆ ಸಂಶೋಧಕನು ಎಲ್ಲಿಗೆ ಹೋಗಬೇಕು. ಯಾರು ಹಳೆ ಪತ್ರಗಳನ್ನು /ಪುಸ್ತಕಗಳನ್ನು ಸಂಗ್ರಹಿಸುತ್ತಾರೆ / ಎಲ್ಲಿ ಸಿಗುತ್ತವೆ ಎನ್ನುವ ಪ್ರಶ್ನೆಯನ್ನು ಸಂಶೋಧಕನು ಹಾಕಿ ಕೊಳ್ಳಬೇಕಾಗುತ್ತದೆ. ಕೇವಲ ಬೆರಳೆಣಿಯಷ್ಷು ಇರುವ ಖಾಸಾಗಿ ಗ್ರಂಥಾಲಯಗಳು ಮಾತ್ರ ಈ ಸೇವೆಂiÀiನ್ನು ನೀಡುತ್ತದೆ. ಆದ್ದರಿಂದ ಧಾರ್ಮಿಕ ಕ್ಷೇತ್ರಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಇಂತಹ ಹಳೆ ಪುಸ್ತಕ/ ಕಡತ/ಪತ್ರ ಮುಂತಾದವುಗಳನ್ನು ಜೋಪಾನ ಮಾಡುತ್ತಾ ಬಂದರೆ ದಾಖಲೀಕರಣ ನಡೆಯುತ್ತದೆ. ಇದರಿಂದ ಚರಿತ್ರೆ ಬರೆಯಬಹುದು/ ಜ್ಞಾನ ಬೆಳೆಸಿಕೊಳ್ಳಬಹುದು/ ಅಮೂಲ್ಯ ಜ್ಞಾನ ಭಂಡಾರಗಳನ್ನು ಉಳಿಸಬಹುದು.

ಗ್ರಂಥ ಸಂರಕ್ಷಣೆ[ಬದಲಾಯಿಸಿ]

ಗ್ರಂಥಗಳು ಹಾಳಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಅವನ್ನು ನಾವು ಉಪಯೋಗಿಸುವ ಕ್ರಮ ಹಾಗೂ ಸಂಗ್ರಹಿಸುವ ಕ್ರಮ. ಜಾಗ್ರತೆಯಿಂದÀ ಪುಸ್ತಕಗಳನ್ನು ಬಳಸುವುದರಿಂದ ಅವು ಬಹುಕಾಲ ಬಾಳಿಕೆ ಬರುತ್ತವೆ. ಪುಸ್ತಕಗಳನ್ನು ಸಂಗ್ರಹದಿಂದ ತೆಗೆಯುವಾಗ ಅದರ ಬೆನ್ನನ್ನು ಹಿಡಿದೆಳೆಯದೇ ಸರಿಯಾಗಿ ಪುಸ್ತಕವನ್ನು ಹಿಡಿದುಕೊಂಡು ತೆಗೆಯಬೇಕು. ಕೆಳಗೆ ಬೀಳಿಸುವುದಾಗಲೀ, ಅವುಗಳ ಮೆಲೆ ಕುಳಿತುಕೊಳ್ಳುವುದಾಗಲೀ, ತಲೆದಿಂಬಿನ ಹಾಗೆ ಉಪಯೋಗಿಸುದುವದಾಗಲೀ, ಪೆನ್ನು ಪೆನ್ಸಿಲಿನಿಂದ ಬರೆಯುವುದಾಗಲೀ, ಹಾಳೆಗಳ ಕಿವಿ ಮಡಿಚಿ ಇಡುವುದಾದಲೀ ಬೆನ್ನು ಕೆಳಗೆ ಮುರಿಯುವುದಾಗಲೀ ನಿಷಿದ್ದ. ಸಂಗ್ರಹಕ್ಕೆ ಪುಸ್ತಕಗಳನ್ನು ಸೇರಿಸುವಾಗ ಅದನ್ನು ಉತ್ತಮ ರೀತಿಯಲ್ಲಿ ಸೇರಿಸಬೇಕು. ಉತ್ತಮವಾದ ಬೈಂಡ್ ಮಾಡಿಸಬೇಕು ಪುಸ್ತಕದಲ್ಲಿದ್ದ ಪಿನ್ನನ್ನು ತೆಗೆದು ಅದರ ಸ್ಥಾನದಲ್ಲಿ ದಾರ ಹಾಕಬೇಕು. ಪಿನ್ನುಗಳಿದ್ದರೆ ಅವುಗಳು ತುಕ್ಕು ಹಿಡಿದು ಪುಸ್ತಕವನ್ನು ಹಾಳು ಮಾಡುತ್ತವೆ. ಹರಿದ ಹಾಳೆಗಳನ್ನು ಸೆಲ್ಯೂಟೇಪಿನಿಂದ ಅಂಟಿಸಬಾರದು. ಸೆಲ್ಯೂಟೇಪ್ ಅಂಟಿಸಿದ ಸ್ಥಳದಲ್ಲಿ ಕೆಂಪಾಗಿ ಅಲ್ಲಿದ್ದ ಅಕ್ಷರಗಳು ಓದಲು ಕಷ್ಟವಾಗುತ್ತದೆ. ಹರಿದ ಕಾಗದಗಳನ್ನು ಬಟರ್ ಪೇಪರ್ ಅಂಟಿಸಿ ಸರಿಪಡಿಸಬಹುದು. ಮನೆಯಲ್ಲಿಯೇ ಪುಸ್ತಕಗಳನ್ನು ದುರಸ್ತಿ ಮಾಡುವುದಿದ್ದರೆ ಪ್ರೆಸ್‍ನಲ್ಲಿ ತಯಾರಿಸಿದ ಅಂಟುಗಳನ್ನೇ ಬಳಸಬೇಕು ವಿನಾ ಮನೆಯಲ್ಲಿ ತಯಾರಿಸಿದ ಗೋದಿ, ಮೈದಾ ಹಿಟ್ಟಿನ ಅಂಟನ್ನು ಅಥವಾ ಅಂಟಿಗಾಗಿ ಅನ್ನವನ್ನು ಬಳಸಬಾರದು. ಬೆಳಕು, ಕತ್ತಲೆ ಹಾಗೂ ಗಾಳಿಯಿಂದಲೂ ಪುಸ್ತಕಗಳು ನಶಿಸುತ್ತವೆ. ಸೂರ್ಯನ ಕಿರಣಗಳು ನೆರವಾಗಿ ಗ್ರಂಥಗಳ ಮೆಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಸೂರ್ಯನ ಬೆಳಕು ಮತ್ತು ಶಾಖದಿಂದ ಕಿರಣಗಳು ನೇರವಾಗಿ ಗ್ರಂಥಗಳ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಸೂರ್ಯನ ಬೆಳಕು ಹಾಗೂ ಶಾಖದಿಂದ ಹಲವಾರು ಕ್ರಿಮಿಕೀಟಗಳನ್ನು ದೂರವಿಡಬಹುದಾದರೂ ಸೂರ್ಯನ ಶಾಖದಿಂದ ಹಾಳೆಗಳು ಸತ್ವಹೀನವಾಗುತ್ತದೆ. ವಿದ್ಯುತ್ ದೀಪದ ಉಷ್ಣತೆಯಿಂದ ಪುಸ್ತಕಗಳನ್ನು ದೂರವಿರಿಸಬೇಕು. ಕತ್ತಲಿನಲ್ಲಿ ಗ್ರಂಥಗಳನ್ನಿಟ್ಟರೆ ಶೀತಾಂಶ ಹೆಚ್ಚಿ ಬೂಷ್ಟು ಬರಲು ಅವಕಾಶವಾಗುತ್ತದೆ. ಅಲ್ಲದೆ ಕ್ರಿಮಿಕೀಟಗಳು ಹೆಚ್ಚಲು ಸಹಾಯವಾಗುತ್ತದೆ. ಗಾಳಿಯಿಂದಲೂ ಗ್ರಂಥಗಳಿಗೆ ಕೆಡುಕಾಗುತ್ತದೆ. ಗಾಳಿಯು ಹೆಚ್ಚು ಉಷ್ಣತೆಯಿಂದಾಗಲೀ ಇಲ್ಲವೇ ಹೆಚ್ಚು ಶೀತದಿಂದಾಗಲೀ ಕೂಡಿದ್ದರೆ ಗ್ರಂಥಗಳಿಗೆ ಅಪಾಯ ತಪ್ಪಿದ್ದಲ್ಲ. ಉಷ್ಟತೆ ಜಾಸ್ತಿಯಾದರೆ ಗ್ರಂಥಗಳ ಕಾಗದ, ಹೊದಿಕೆಯ ರಟ್ಟು ಮೊದಲಾದವುಗಳು ಒಣಗಿ ಒರಟಾಗಿ ಹರಿಯುವಂತಾಗಬಹುದು. ಶೀತ ಹೆಚ್ಚಿ ಬೂಷ್ಟು ಬಂದರೆ ಗ್ರಂಥಗಳಿಗೆ ಉಪಯೋಗಿಸಿದ ಅಂಟು ಸಡಿಲವಾಗುತ್ತದೆ. ಅಲ್ಲದೆ ಕಾಗದ ಮತ್ತು ಹೊದಿಕೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಗಾಳಿಯಲ್ಲಿನ ಕೆಲವು ಅನಿಲಗಳು ಕಾಗದದ ಕ್ಷೀಣತೆಗೆ ದಾರಿಮಾಡಿಕೊಡುತ್ತದೆ. ದೂಳಿನಿಂದ ಗ್ರಂಥಗಳಿಗೆ ಆಗುವ ಅನಾಹುತ ಅಲ್ಪವಲ್ಲ. ದೂಳಿನ ಮೂಲಕವಾಗಿಯೇ ಕೀಟಗಳ ಅಂಡಾಣುಗಳು ಹೊರಗಿನಿಂದ ಬಂದು ಗ್ರಂಥದಲ್ಲಿ ಸೇರಲು ಸಹಾಯವಾಗುತ್ತದೆ. ಆದ್ದರಿಂದ ಗಾಳಿಯ ಮೂಲಕ ಬರುವ ದೂಳನ್ನು ತುಂಬ ಅಚ್ಚು ಕಟ್ಟಾಗಿ ಹೊರತೆಗೆಯುವ ಪ್ರಯತ್ನ ಮಾಡಬೇಕು. ಬಟ್ಟೆಯಿಂದ ಪುಸ್ತಕದ ಎಲ್ಲಾ ಭಾಗಗಳನ್ನು ಒರೆಸುವುದರಿಂದಲೂ. ಮೃದುವಾಗ ಪೊರಕೆಯಿಂದಲೂ ಸಾಕಷ್ಟು ದೂಳನ್ನು ತೆಗೆಯಬಹುದು. ಕಪಾಟುಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸುವಾಗ ಒಟ್ಟೊಟ್ಟಿಗೆ ಪುಸ್ತಕಗಳನ್ನಿಡಬೇಕು. ದೊಡ್ಡ ಗಾತ್ರದ ಪುಸ್ತಕಗಳನ್ನು ನಿಲ್ಲಿಸಿಡುವುದಕ್ಕಿಂತ ಮಲಗಿಸಿಡುವುದು ಒಳ್ಳೆಯದು. ಯಾಕಂದರೆ ನಿಲ್ಲಿಸಿಟ್ಟರೆ ಬೈಂಡು ಸಡಿಲವಾಗಿ, ಹೊಲಿಗೆ ಬಿಟ್ಟು ರಟ್ಟು ಕಿತ್ತುಬಂದು ಗ್ರಂಥವು ಹಾಳಾಗಬಹುದು. ಆದ್ದರಿಂದ ಪುಸ್ತಕಗಳನ್ನು ಒತ್ತೊತ್ತಿ ಇಡಬೇಕು (ಬುಕ್ ಸಪೋರ್ಟ್ ಸಹಾಯ ಪಡಯಬಹುದು)

ಗ್ರಂಥಪ್ರೀಯರಿಗೆ ಗ್ರಂಥ ಸಂರಕ್ಷಣೆ ಮಾಡುವುದು ದೊಡ್ಡ ಸಮಸ್ಯೆ. ಕೆಲವು ವೇಳೆ ಗ್ರಂಥಗಳನ್ನು ಶೇಖರಿಸುವುದು ಸುಲಭ ಸಾಧ್ಯವಾಗಬಹುದು. ಆದರೆ ಶೇಖರಿಸಿದ ರಾಶಿಯನ್ನು ಮುಂದಿನ ಪೀಳಿಗೆಗಳ ಉಪಯೋಗಕ್ಕಾಗಿ ಕಾದಿರಿಸುವುದು ಅತ್ಯಂತ ಕಷ್ಟದ ಕೆಲಸ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದೊಂದು ನಿಯಮಿತ ವೇಳಾ ಪರಿಮಿತಿ ಇರುವಂತೆ ಕಾಗದಗಳಿಗೂ ಒಂದು ಕಾಲದ ಪರಿಮಿತಿ ಇದೆ. ಈ ಪರಿಮಿತಿ ಮೀರಿದ ನಂತರ ಕಾಗದವು ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಹಾಳೆಗಳನ್ನು ಎಷ್ಟು ಜಾಗ್ರತೆಯಿಂದ ಉಪಯೋಗಿಸಿದರೂ ಕಾಗದ ಪುಡಿಪುಡಿಯಾಗುತ್ತದೆ. ಈಚೆಗೆ ವೈಜ್ಞಾನಿಕ ಸಂಶೋಧನೆಗಳೂ ಹೆಚ್ಚು ಮುಂದುವರಿಯುವುದರಿಂದ ಕಾಗದ ತಯಾರಿಸುವಾಗಲೇ ಮುಂಜಾಗ್ರತೆ ವಹಿಸಿ ಇದರ ಆಯುಷ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. 200 ವರ್ಷ ಕಳೆದ ಹಸ್ತಪ್ರತಿ, ಪುಸ್ತಕ ಮುಂತಾದ ಅಮೂಲ್ಯ ಗ್ರಂಥಗಳನ್ನು ಮೈಕ್ರೋಫಿಲ್ಮ್, ಮೈಕ್ರೊಪಿಶ್‍ಗಳಲ್ಲಿ ಕಾಪಿಡಬಹುದು. ಇತ್ತೀಚೆಗೆ ಸ್ಕ್ಯಾನಿಂಗ್ ಮಾಡಿ ಸಿ.ಡಿ.ಗಳಲ್ಲಿ ಹಾರ್ಡ್ ಡಿಸ್ಕ್‍ಗಳಲ್ಲಿ ಜೋಪಾನಮಾಡಿಡಲಾಗುತ್ತಿದೆ.

ಗ್ರಂಥಗಳ ದೊಡ್ಡ ಹಾಗೂ ಭಯಾನಕ ಶತ್ರು ಎಂದರೆ ಕ್ರಿಮಿ ಕೀಟಗಳು. ಈ ಕ್ರಿಮಿ ಕೀಟಗಳ ಹಾವಳಿಯಿಂದ ಗ್ರಂಥಗಳನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ. ಹಲವಾರು ದಿನ ಒಂದೇ ಕಡೆ ಗ್ರಂಥಗಳನ್ನು ನಿರುಪಯುಕ್ತವಾಗಿ ಇಟ್ಟುಬಿಟ್ಟರೆ ಅಲ್ಲಿ ಕೀಟಗಳು ದಾಳಿಮಾಡಿ ಗ್ರಂಥಗಳನ್ನು ನಾಶಮಾಡುತ್ತದೆ. ಈ ಕೀಟಗಳಲ್ಲಿ ಹಲವಾರು ವಿಧಗಳಿವೆ. ಗ್ರಂಥ ಕೊರೆಯುವ ಹುಳುಗಳು, ಜಿರಳೆ, , ಗೆದ್ದಲು, ಸಿಲ್ವರ್ ಫಿಶ್, ಇವುಗಳಲ್ಲಿ ಗ್ರಂಥಕೀಟ, ಗೆದ್ದಲು, ಮತ್ತು ಜಿರಳೆಗಳು ಗ್ರಂಥಗಳ ಅತ್ಯಂತ ವಿನಾಶಕಾರಿ ಶತ್ರುಗಳಾಗಿವೆ. ಪ್ರಾಚೀನ ಗ್ರಂಥಗಳ ಅನೇಕ ಹಸ್ತಪ್ರತಿಗಳ ಹೆಸರುಗಳನ್ನು ಇಂದು ನಾವು ಕೇಳುತ್ತೇವಾದರೂ ನೋಡಲಾಗುತ್ತಿಲ್ಲ. ಎಂದರೆ ಈ ಬಗ್ಗೆ ಹಿಂದಿನವರು ಎಚ್ಚರ ವಹಿಸುತ್ತಿರಲಿಲ್ಲವೆಂದಲ್ಲ. ಆದರೂ ಅನೇಕ ರೀತಿಯ ಶಾಸ್ತ್ರೀಯ ಗ್ರಂಥಗಳು ಹಾಗೂ ಹಸ್ತಪ್ರತಿಗಳು ಕಾಲನ ತುಳಿತಕ್ಕೆ ಬಲಿಯಾಗಿ ಅವುಗಳು ನಮಗೆ ಲಬ್ಯವಾಗದೇ ಹೋಗಿವೆ. ಗೆದ್ದಲು ಹುಳುವಿನಲ್ಲಿ 2 ವಿಧ. ನೆಲಗೆದ್ದಲು, ಮತ್ತೊಂದು ಮರದಿಂದ ಬರುವ ಗೆದ್ದಲು. ಇದಕ್ಕಾಗಿಯೇ ಗೆದ್ದಲು ಹಿಡಿಯುವಂತ ಮರದ ಕಬಾಟುಗಳಲ್ಲಿ ಪುಸ್ತಕಗಳನ್ನಿಡಬಾರದು. ಅಲ್ಲದೆ ಮಣ್ಣಿನ ಗೆದ್ದಲಿನಿಂದ ದೂರವಿರಬೇಕಾದರೆ ಮಣ್ಣಿನ ಗೋಡೆಗೆ ತಾಗಿಸಿ ಪುಸ್ತಕದ ಕಬಾಟುಗಳನ್ನಿಡಬಾರದು. ಗ್ರಂಥ ಸಂಗ್ರಹಕ್ಕೆ ಕಬ್ಬಿಣದ ಕಬಾಟುಗಳು ಸೂಕ್ತ (ತುಕ್ಕು ಹಿಡಿಯದಂತೆ ಜಾಗ್ರತೆವಹಿಸಬೇಕು) ಇತ್ತೀಚೆಗೆ ಮಾರ್ಬಲ್ ಹಲಗೆಗಳ ಕಬಾಟುಗಳನ್ನು ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಉಪಯೋಗಿಸುತ್ತಾರೆ.

ಗ್ರಂಥಗಳು ಕ್ರಿಮಿಗಳಿಂದ ದೂರವಿರಬೇಕಾದರೆ ಯಾವಾÀಗಲೂ ಪುಸ್ತಕವನ್ನು ಉಪಯೋಗಿಸುತ್ತಿರಬೇಕು. ಉಪಯೋಗಿಸದ ಪುಸ್ತಕಗಳನ್ನು ವರ್ಷಕೆರಡು ಬಾರಿಯಾದರೂ ತೆಗೆದು ದೂಳು ಜಾಡಿಸಿ ತಿರುಗಿ ಕಬಾಟಿನಲ್ಲಿ ಜೋಡಿಸಬೇಕು. ಗ್ರಂಥಾಲಯಕ್ಕೆ ದಾನವಾಗಿ ಬರುವ ಹಳೆಯ ಪುಸ್ತಕಗಳನ್ನು ಸೇರಿಸುವಾಗ ಹುಳುಗಳು ಇಲ್ಲವೆಂದು ಖಾತ್ರಿಮಾಡಿಕೊಳ್ಳಬೇಕು. ಬೇವಿನ ಎಲೆ, ಹೊಗೆಸೊಪ್ಪು, ನೆಕ್ಕಿಸೊಪ್ಪು, ನೆಪ್ತಲಿನ್ ಗುಳಿಗೆಗಳನ್ನು ಇಡುವುದರಿಂದ ಕ್ರಿಮಿಕೀಟದಿಂದ ದೂರವಿರಬಹುದು(ಪುಸ್ತಕಕ್ಕೆ ತಾಗದÀಂತೆ ಜಾಗ್ರತೆ ವಹಿಸಬೇಕು) ಲವಂಗ-ಕೆತ್ತೆ-ಕಾಳುಜೀರಿಗೆ-ಕರ್ಪೂರ ಇವುಗಳ ಮಿಶ್ರಣದ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಕಬಾಟಿನಲ್ಲಿಡುವುದೂ ಒಂದು ವಿಧಾನ. ನೀರಿನ ಶೀತಾಂಶ ಹೆಚ್ಚಿದ್ದಾಗ ಇಡಿ ಸುಣ್ಣವನ್ನು ಪಾತ್ರೆಗಳಲ್ಲಿ ಇಡುವ ಕ್ರಮವನ್ನೂ ಬಳಸುತ್ತಾರೆ. ಕ್ರಿಮಿನಾಶಕ ಸಿಂಪಡಿಸಿ ಕ್ರಿಮಿಗಳನ್ನು ಕೊಲ್ಲುವ ವಿದಾನವೂ ಕೆಲವು ಗ್ರಂಥಾಲಯಗಳಲ್ಲಿವೆ. (ಆದರೆ ಕ್ರಿಮಿನಾಶಕದ ಪ್ರಮಾಣ ಹೆಚ್ಚಾದರೆ ಸಿಬಂದಿವರ್ಗದವರು, ಓದುಗರು ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾದೀತು.)

ಹಸ್ತಪ್ರತಿ, ಕಡತ, ಫೋಟೋಗಳ ಸಂರಕ್ಷಣೆ- ಹಸ್ತಪ್ರತಿಗಳು ಪುಸ್ತಕ ರೀತಿಯಲ್ಲಿದ್ದರೆ ಮೇಲಿನ ರೀತಿಯಲ್ಲಿಯೇ ಜೋಪಾನ ಮಾಡುವುದು. ನೆಟ್ಟಗೆ ನಿಲ್ಲಿಸುವುದಕ್ಕಿಂತ ಮಲಗಿಸಿಡುವುದು ಉತ್ತಮ. ಕಡತಗಳಲ್ಲಿರುವ ತುಕ್ಕು ಹಿಡಿದ ಎಲ್ಲಾ ಪಿನ್ನುಗಳನ್ನು ತೆಗೆದು ನೂಲುಗಳನ್ನು ಹಾಕಬಹುದು. ಹರಿದ ಹಾಳೆಗದ್ದಲ್ಲಿ ಒಂದೊಂದು ಬಿಳಿ ಹಾಳೆಗಳನ್ನು ಸೇರಿಸುವುದರಿಂದ ಬಾಳಿಕೆಯೂ ಬರುತ್ತದೆ, ಉಪಯೋಗಿಸಲೂ ಬರುತ್ತದೆ. ಕಡತಗಳನ್ನು ಪಿನ್. ಕಬ್ಬಿಣದ ಕ್ಲಿಪ್‍ಗಳಿರದ ಉತ್ತಮ ಫೈಲ್‍ಗಳಲ್ಲಿ ಹಾಕಿ ಬಟ್ಟೆ ನೂಲಿನಿಂದ ಕಟ್ಟಿಡಬೇಕು. ಪ್ಲಾಸ್ಟಿಕ್ ಹಾಳೆಗಳಲ್ಲಿ ಹಾಕಲೇಬಾರದು. ಪೋಟೋಗಳನ್ನು ಆಲ್ಬಂಬ್‍ನಿಂದ ಬೇರ್ಪಡಿಸಿ ಪ್ರತಿಯೊಂದು ಫೋಟೋವಿಗೂ ಬಟರ್ ಪೇಪರ್ ಲಕೋಟೆಯನ್ನು ಹಾಕಬೇಕು. ಒಂದರ ಮೇಲೆ ಒಂದು ಫೋಟೋಗಳನ್ನು ಇಡಬಾರದು. ಪ್ಲಾಸ್ಟಿಕ್ ಲಕೋಟೆಗಳಲ್ಲಿ ಹಾಕಬಾರದು.