ಪಟ್ಟಮಾಡ

ವಿಕಿಪೀಡಿಯ ಇಂದ
Jump to navigation Jump to searchಕರ್ನಾಟಕ ರಾಜ್ಯದ ಪುಟ್ಟ ಜಿಲ್ಲೆ ಕೊಡಗು. ಈ ಜಿಲ್ಲೆಯ ಮೂಲ ನಿವಾಸಿಗಳು ಕೊಡುವ ಜನಾಂಗದವರು.

ಸದರಿ ಕೊಡವ ಜನಾಂಗದವರಿಗೆ ಪ್ರತ್ಯೇಕವಾದ ಆಚಾರ, ವಿಚಾರ, ಭಾಷೆ ಹಾಗೂ ಸಂಪ್ರದಾಯದ, ಪ್ರತಿಯೊಂದು ಕೊಡುವ ಕುಟುಂಬಕ್ಕೆ ಕುಟುಂಬ ಹೆಸರು ಇರುತ್ತದೆ. ಪ್ರತಿಯೊಂದು ಕುಟುಂಬಕ್ಕೆ ದೊಡ್ಡಮನೆ ಇರುತ್ತದೆ.

ಕೊಡವರ ಕೌಟುಂಬಿಕ ಹೆಸರಿಗೆ ಅದ್ದರದೇ ಮಹತ್ವವಿದ್ದು, ಸುಮಾರು ಮುನ್ನೂರು ಕೊಡುವ ಕುಟುಂಬಸ್ತರು ಕೊಡಗಿನಲ್ಲಿ ವಾಸವಿದ್ದು ಪ್ರತ್ಯೇಕವಾದ ಕೌಟುಂಬಿಕ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಹಾಗೆಯೇ ಪಟ್ಟಮಾಡ ಎಂಬುದು ಒಂದು ಕೊಡುವ ಕುಟುಂಬದ ಹೆಸರು.

ಪಟ್ಟಮಾಡ ಎಂದರೆ ಪುರೋಹಿತರ ಸೇವೆ ಮಾಡುವವ ಎಂಬುದಾಗಿದೆ. ಪಟ್ಟ ಎಂದರೆ ಪುರೋಹಿತ, ಮಾಡ ಎಂದರೆ ಮಾಡುವವ.

ಬಹಳ ಹಿಂದಿನ ಇತಿಹಾಸ ತೆಗೆದುಕೊಂಡರೆ ಕೊಡಗಿನ ಪುಣ್ಯಕ್ಷೇತ್ರವಾದ ಭಾಗಮಂಡಲ ಮತ್ತು ತಲಕಾವೇರಿ ದೇವಸ್ಥಾನಗಳು ಹೊರಗಿನ ಧಾಳಿಕೋರರ ದಾಳಿಗೆ ತುತ್ತಾದ ಸಮಯದಲ್ಲಿ ಸದರಿ ದೇವಸ್ಥಾನಗಳ ನಿತ್ಯ ಪೂಜೆ ಪುರಸ್ಕಾರಗಳು ನಿಂತು ಹೋಗುವ ಪರಿಸ್ಥಿತಿ ಬಂದಾಗ ನಮ್ಮ ಪೂರ್ವಜರಲ್ಲಿ ಒಬ್ಬರು ದಿನ ನಿತ್ಯ ಸುಮಾರು ಹತ್ತು ಕಿಮೀ ದೂರ ಕಾಲ್ನಡಿಗೆಯಲ್ಲಿ ದೇವಸ್ಥಾನದ ಪುರೋಹಿತರನ್ನು ಬೆಟ್ಟಗುಡ್ಡಗಳ ಕಡಿದಾದ ದಾರಿಯಲ್ಲಿ ಭುಜದ ಮೇಲೆ ಹೊತ್ತುಕೊಂಡು ಹೋಗಿ ನಿತ್ಯ ಪೂಜೆಯನ್ನು ವೈರಿಗಳ ಕಣ್ಣುತಪ್ಪಿಸಿ ನೆರವೇರಿಸಿಕೊಟ್ಟ ಹಿರಿಮೆ ನಮ್ಮ ಪೂರ್ವಜರಿಗೆ ಇದೆ. ಆದುದರಿಂದ ನಮ್ಮ ಕುಟುಂಬದ ಹೆಸರು, ಕೊಡಗು ರಾಜರ ಕಾಲದಲ್ಲಿ "ಪಟ್ಟಮಾಡ" ಎಂದು ನಾಮಕರಣಗೊಂಡಿದೆ. ಅಂದರೆ, ಪುರೋಹಿತರ ಸೇವೆ ಮಾಡಿ ದೇವರ ಸೇವೆ ಮಾಡಿದರು ಎಂಬುದಾಗಿ ಅರ್ಥಮಾಡಿಕೊಳ್ಳ ಬಹುದು.

ಸದ್ಯಕ್ಕೆ ನಮ್ಮ ಕುಟುಂಬದ ಸದಸ್ಯರ ಸಂಖ್ಯೆ ಸುಮಾರು 20 ರಿಂದ 300ರಷ್ಟು ಸದಸ್ಯರಿದ್ದು ಕೊಡಗಿನಲ್ಲಿ ಹಾಗೂ ಭಾರತದ ವಿವಿಧ ಪಟ್ಟಣಗಳಲ್ಲಿ ಹಾಗೂ ವಿದೇಶದಲ್ಲಿ ನೆಲೆಸಿದ್ದಾರೆ. ಪ್ರತಿಯೊಂದು ಸಾಂಪ್ರದಾಯಿಕ ಕುಟುಂಬದ ಅತಿ ಹಿರಿಯ ವ್ಯಕ್ತಿಯನ್ನು ಸದರಿ ಕುಟುಂಬಗಳ ಮುಖ್ಯಸ್ಥರನ್ನಾಗಿ ಒಪ್ಪಿಕೊಂಡು ಸದರಿ ಹಿರಿಯ ವ್ಯಕ್ತಿಯನ್ನು ಪಟ್ಟೆದಾರ ಎಂಬುದಾಗಿ ಕರೆಸಿಕೊಳುತ್ತಾರೆ.

ಪ್ರತಿಯೊಂದು ಮಂಗಳ ಕಾರ್ಯಗಳಿಗೆ ಸದರಿ ಪಟ್ಟೆದಾರರ ಅನುಮತಿ ಪಡೆದು ನಂತರ ಅವರ ಹೆಸರಿನಲ್ಲಿ ಆಮಂತ್ರಣ ಪತ್ರ ಮುದ್ರಣಗೊಳ್ಳುತ್ತದೆ ಮತ್ತು ಪ್ರತಿ ಕುಟುಂಬದ ಸಭೆ ಸಮಾರಂಭಗಳ ಅಧ್ಯಕ್ಷಸ್ಥಾನ ವಹಿಸಿಕೊಂಡು ಹಬ್ಬ ಹರಿದಿನಗಳನ್ನು ನಡೆಸಿಕೊಡುತ್ತಾರೆ.

"https://kn.wikipedia.org/w/index.php?title=ಪಟ್ಟಮಾಡ&oldid=585070" ಇಂದ ಪಡೆಯಲ್ಪಟ್ಟಿದೆ