ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಇವರು ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು. ೧೯೨೬ರಲ್ಲಿ ಜನಿಸಿದ ಇವರು ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಪಂಡಿತ್ ಪಂಚಾಕ್ಷರಿ ಗವಾಯಿಗಳಿಂದ ಪಡೆದರು. ಮುಂದೆ ಇವರು ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಇವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರೆಸಿದರು. ಮನ್ಸೂರರ ಬಳಿ ಕೆಲ ಕಾಲ ಕಲಿತ ನಂತರ ಕೊಲ್ಹಾಪುರ್ನಿವೃತ್ತಿಬುವಾ ಸರನಾಯಕ್ರ ಬಳಿ ಸಂಗೀತಾಭ್ಯಾಸ ಮಾಡಿದರು. ಆ ನಂತರ ಮತ್ತು ಈಗಿನವರೆಗೂ ಇವರು ಮನ್ಸೂರರ ಗುರು ಬುರ್ಜಿ ಖಾನ್ ರ ಮೊಮ್ಮಗ ಬಾಬಾ ಅಜೀಜುದ್ದೀನ್ ಖಾನ್ ರ ಬಳಿ ಸಂಗೀತದ ಹೊಸ ಹೊಳವುಗಳನ್ನು ತಿಳಿಯುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪುಟ್ಟರಾಜ್ ಸಮ್ಮಾನ್ ಪ್ರಶಸ್ತಿಗಳು ದೊರೆತಿವೆ.