ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ, ವಡಾಲ, ಮುಂಬೈ

ವಿಕಿಪೀಡಿಯ ಇಂದ
Jump to navigation Jump to search
'ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ, ವಡಾಲ, ಮುಂಬಯಿ
Wadala.JPG
ಸಾಮಾನ್ಯ ಮಾಹಿತಿ
ಮಾದರಿ'ಕಾಮರ್ಸ್' ಎಂಬ ವಾರ ಪತ್ರಿಕೆಯ ಸಂಪಾದಕರು ಹಾಗೂ ಬರಹಗಾರರಾದ ಶ್ರೀ ಆರ್.ವಿ.ಮೂರ್ತಿ, ಶ್ರೀ ಎನ್.ಎನ್.ಹುಬ್ಬಿ, ಶ್ರೀ ಬಿ.ಎಮ್.ಮೂರ್ತಿ, ವಿದ್ವಾನ್ ಮಾಹುಲಿ ಗೋಪಾಲಾಚಾರ್ಯ ಮುಂತಾದವರ ನಾಯಕತ್ವದಲ್ಲಿ,'ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ' (N.K.E.S), 1939ರಲ್ಲಿ ಮುಂಬಯಿ ಮಹಾನಗರದಲ್ಲಿ ಸ್ಥಾಪಿಸಲಾಯಿತು. ದಿವಾನ್ ಬಹಾದ್ದೂರ್ ರಾಮಸ್ವಾಮಿ ಹಾಗೂ ಶ್ರೀ ಗುಬ್ಬಿಯವರ ಪ್ರಯತ್ನದಿಂದ ಮುಂಬಯಿ ಮಹಾನಗರ ಪಾಲಿಕೆಯಿಂದ ಸೈನಿಕ ವಸತಿಗಳನ್ನು ಶಾಲೆ ನಡೆಸಲು ಅನುಮತಿ ಪಡೆಯಲಾಯಿತು.
ಸ್ಥಳವಡಾಲ,ಮುಂಬಯಿ,ಭಾರತ
ನಿರ್ಮಾಣ ಪ್ರಾರಂಭವಾದ ದಿನಾಂಕ೧೯೩೯ ರಲ್ಲಿ ಆರಂಭಗೊಂಡು
ಪೂರ್ಣಗೊಂಡಿದೆ೧೯೬೦ ರಲ್ಲಿ ಕಟ್ಟಡ ಪೂರ್ಣಗೊಂಡಿತು.
Design and construction
ವಾಸ್ತುಶಿಲ್ಪಿ
 • 1946 ರಲ್ಲಿ ಮೈಸೂರು ಮಹಾರಾಜರಾದ 'ಶ್ರೀ ಜಯಚಾಮರಾಜ ಒಡೆಯರ್' ಅಧ್ಯಕ್ಷತೆಯಲ್ಲಿ ಬೆಳ್ಳಿಹಬ್ಬ.
 • 1989 ರಲ್ಲಿ ಶಾಲೆಯು ಬಂಗಾರದ ಹಬ್ಬ. * 1998-99ರಲ್ಲಿ ತನ್ನ ವಜ್ರ ಮಹೋತ್ಸವ.
 • ೨೦೧೪ ರ ಮಾರ್ಚ್, ೧ ರಂದು, 'ಶ್ರೀ. ಶಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹ',ದಲ್ಲಿ 'ಅಮೃತ ಮಹೋತ್ಸವ'.
 • ಕರ್ನಾಟಕದ ಮಾಜೀ ಲೆಜಿಸ್ಲೇಟೀವ್ ಕೌನ್ಸಿಲ್ ನ ಸ್ಪೀಕರ್, 'ಶ್ರೀ. ವಿ. ಆರ್. ಸುದರ್ಶನ್' ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮುಖ್ಯ ಗುತ್ತಿಗೆದಾರಮೆಸರ್ಸ್, ಅಯ್ಯಂಗಾರ್ ಅಂಡ್ ಕಂಪೆನಿ, ಮುಂಬಯಿ
ಜಾಲ ತಾಣ
www.nkes.in/kn
'ನಿವೃತ್ತ ಜಸ್ಟೀಸ್, ಬಿ.ಎನ್.ಶ್ರೀಕೃಷ್ಣ ಸಭೆಯನ್ನುದ್ದೇಶಿಸಿ ಭಾಷಣಮಾಡುತ್ತಿರುವುದು'
'೨೦೧೪ ರಲ್ಲಿ, ಎನ್.ಕೆ.ಇ.ಎಸ್. ಅಮೃತಮಹೋತ್ಸವದ ಆಚರಣೆಯ ಸಮಯದಲ್ಲಿ, ಸ್ಮರಣ ಸಂಚಿಕೆಯನ್ನು ಬಿಡುಗಡೆಮಾಡಲಾಯಿತು'

ಮೈಸೂರಿನ ಕೆಲವು ತರುಣರು ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ಕಂಪನ್ನು ಹೊರನಾಡಿನಲ್ಲಿ ಪಸರಿಸಿ ಅದರ ಸೊಗಡನ್ನು ಕನ್ನಡಿಗರಿಗೆ ಉಣಬಡಿಸುವ ದೃಷ್ಟಿಯಿಂದ ನಿಸ್ವಾರ್ಥವಾಗಿ ದುಡಿದ ಕನ್ನಡಿಗರ ಪ್ರಯತ್ನದ ಫಲವಾಗಿ, ಎನ್.ಕೆ.ಇ.ಎಸ್.ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ (N.K.E.S),[೧] ಮುಂಬಯಿ, ಸನ್, 1939 ರಲ್ಲಿ ಮುಂಬಯಿ ಮಹಾನಗರದಲ್ಲಿ ಸ್ಥಾಪಿಸಲಾಯಿತು. ಮುಂಬಯಿ ಕನ್ನಡಿಗರ ಜ್ಞಾನದಾಹವನ್ನು ಅರಿತು ಸಮಿತಿಯ ಕಾರ್ಯದರ್ಶಿಗಳಾದ 'ಶ್ರೀ ಚಂದ್ರಶೇಖರ ಶರ್ಮ'ರವರ ಮುಂದಾಳತ್ವ ಹಾಗೂ ದೃಢ ನಿರ್ಧಾರದ ಫಲದಿಂದ 1926ರ ಮೇ ತಿಂಗಳಿನಲ್ಲಿ ಮೈಸೂರ್ ಅಸೋಸಿಯೇಷನ್, ಮುಂಬಯಿ, ನ ಸಂಚಾಲಕತ್ವದಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು.

ಕನ್ನಡ ಶಾಲೆ ಶುರುವಾದ ಪರಿ[ಬದಲಾಯಿಸಿ]

'ಉಪಾಧ್ಯಕ್ಷ,ಶ್ರೀ.ಎಸ್.ಕೆ.ಅಯ್ಯಂಗಾರ್ ಮತ್ತು ನಿವೃತ್ತ ಜಸ್ಟಿಸ್, ಶ್ರಿ. ಬಿ.ಎನ್.ಶ್ರೀಕೃಷ್ಣ (ಎನ್.ಕೆ.ಇ.ಎಸ್.ನ ಹಿರಿಯ ವಿದ್ಯಾರ್ಥಿ)ಗಣ್ಯರನ್ನು ಸನ್ಮಾನಿಸಿದರು.'

ಶಾಲೆಯು ಇಬ್ಬರು ನುರಿತ ಶಿಕ್ಷಕರು ಹಾಗೂ ಒಬ್ಬ ಸಿಪಾಯಿಯನ್ನೊಳಗೊಂಡು ಆರಂಭವಾದರೂ ಅಸೋಸಿಯೇಶನ್ ಹಣದ ಮುಗ್ಗಟ್ಟಿನಿಂದಾಗಿ 1927 ರಲ್ಲಿ ಶಾಲೆಯನ್ನು ಮುಚ್ಚಿತು. 1937ರಲ್ಲಿ ಅಂದಿನ ಮೈಸೂರು ಮಹಾಸಂಸ್ಥಾನದ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಅಸೋಸಿಯೇಶನ್ನಿಗೆ ಭೇಟಿ ನೀಡಿ, ಅಸೋಸಿಯೇಶನ್ ನಿರ್ವಹಿಸುತ್ತಿದ್ದ ಕನ್ನಡ ಸಂಸ್ಕೃತಿ ಹಾಗೂ ಕ್ರೀಡೆಗಳ ಅಭಿವೃದ್ದಿಯನ್ನು ಶ್ಲಾಘಿಸಿ, ಈ ಸಂಘಟನಾತ್ಮಕ ಶಕ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲೂ ಉಪಯೋಗಿಸಲು ಸೂಚಿಸಿದರು.

ಹಲವು ನಿಷ್ಠಾವಂತ ಕನ್ನಡಿಗರ ಮುಂದಾಳತ್ವದಲ್ಲಿ[ಬದಲಾಯಿಸಿ]

ಈ ಸಂಸ್ಥೆಯು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಆಧುನಿಕ ಭಾರತದ ನಿರ್ಮಾಣದ ರೂವಾರಿಗಳಲ್ಲೊಬ್ಬರಾದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಂತೆ 1939ರಲ್ಲಿ ಸ್ಥಾಪಿಸಲ್ಪಟ್ಟಿತು. ವಿಶ್ವೇಶ್ವರಯ್ಯನವರು ನೀಡಿದ ಈ ಮಹತ್ತರವಾದ ಸೂಚನೆಯನ್ನು ಅಂದಿನ 'ಕಾಮರ್ಸ್' ಎಂಬ ವಾರ ಪತ್ರಿಕೆಯ ಸಂಪಾದಕರು ಹಾಗೂ ಬರೆಹಗಾರರಾರು,ಸಂಪಾದಕರು ವಾಣಿಜ್ಯ ಮತ್ತು ಸಮಾಜ ವಿಜ್ಞಾನಿಗಳು, ಪ್ರಭಾವಿ ಸಂಘಟಕರು, ಧಾರ್ಮಿಕಶ್ರಧ್ಧಾಳುಗಳೂ ಆಗಿದ್ದ, ಶ್ರೀ ಆರ್.ವಿ.ಮೂರ್ತಿ ಮತ್ತು ಅವರ ನಿಕಟವರ್ತಿಗಳಾದ ಶ್ರೀ ಎನ್.ಎನ್.ಹುಬ್ಬಿ, ಶ್ರೀ ಬಿ.ಎಮ್.ಮೂರ್ತಿ, ವಿದ್ವಾನ್ ಮಾಹುಲಿ ಗೋಪಾಲಾಚಾರ್ಯ, ಮುಂತಾದವರ ಸಹಾಯದಿಂದ ಈ ಸಮಿತಿಯು ಸಂಘಟನಾತ್ಮಕವಾಗಿ ಸ್ಥಾಪಿಸಲ್ಪಟ್ಟಿತು. ಆರ್.ವಿ.ಮೂರ್ತಿಯವರಿಗೆ ಬೊಂಬಾಯಿನ ಹೆಸರಾಂತ ಉದ್ಯಮಿಗಳು, ವಕೀಲರು, ಹಾಗೂ ಉನ್ನತ ಹುದ್ದೆಗಳಲ್ಲಿದ್ದ ಹಲವಾರು ಗಣ್ಯರ ನಿಕಟ ಪರಿಚಯವಿತ್ತು. ಮುಂಬಯಿಯ ಜನರಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವ ಉದ್ದೇಶದಿಂದ ಜನರಲ್ಲಿ ರಾಷ್ಟ್ರ ಕಟ್ಟುವ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಇದನ್ನು 'ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ' ಎಂದು ಸರ್ವಾನುಮತದಿಂದ ನಿರ್ದರಿಸಲ್ಪಟ್ಟಿತು. ಅದರಂತೆ 1939ರ ಮೇ ತಿಂಗಳಿನ ಒಂದು ಭಾನುವಾರದಂದು ಎನ್.ಕೆ.ಇ.ಎಸ್ ಜನ್ಮತಾಳಿತು. ಹಾಗೆ ಈ ಅಭಿಯಾನದಲ್ಲಿ ಮುಂದೆ ಬಂದು, ತಮ್ಮ ಜೀವಿತದ ಅಮೂಲ್ಯ ಸಮಯವನ್ನು ನೀಡಿ ಅದರ ಏಳಿಗೆಗೆ ಶ್ರಮಿಸಿದ ಕನ್ನಡಿಗರಲ್ಲಿ ಪ್ರಮುಖರು : ಸಂಸ್ಥೆಯ ಸ್ಥಾಪನೆಗೆ ಕಾರಣರಾದವರು ಶ್ರೀ. ಆರ್.ಡಿ.ಚಾರ್. ಅವರು

 1. CMD M/S standard Batteries Ltd,
 2. M/S IAEC Ltd, M/S MEI Ltd,
 3. M/S Fuel injections Ltd, ಮೊದಲಾದ ಕಂಪೆನಿಗಳ ಸ್ಥಾಪಕರು.

ಇತರ ಮಹನೀಯರು[ಬದಲಾಯಿಸಿ]

 1. ಶ್ರೀ.ಬಿ.ವಿ.ಎಸ್. ಅಯ್ಯಂಗಾರ್- ಬೊಂಬಾಯಿನ ಹೆಸರಾಂತ ಕಟ್ಟಡ ಶಿಲ್ಪಿ,
 2. ಶ್ರೀ ಎಂ. ಆರ್.ವರದರಾಜನ್- ಮುಖ್ಯ ಅಭಿಯಂತರರು, ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪೆನಿ (ನಿಯಮಿತ),
 3. ಶ್ರೀ.ಬಿ.ನಾರಾಯಣ ಸ್ವಾಮಿ- ನ್ಯಾಯವಾದಿಗಳು, ಮುಂಬಯಿ ಉಚ್ಚನ್ಯಾಯಾಲಯ,
 4. ವಿದ್ವಾನ್ ಗೋಪಾಲಾಚಾರ್ಯ- ಕುಲಪತಿಗಳು ಸತ್ಯದಾನ ವಿದ್ಯಾಪೀಠ ಮತ್ತು ಇನ್ನಿತರರು.
 5. ಕನ್ನಡ ಭಾಷೆಯ ಅನುಪಮ ಪರಿಚಾರಕರಾಗಿ ಸತತವಾಗಿ ದುಡಿಯಲು ಸಿದ್ಧರಿದ್ದ, ಶ್ರೀ ಎನ್.ಎನ್.ಹುಬ್ಬಿ, ಶ್ರೀ ಬಿ.ಎಮ್.ಮೂರ್ತಿ, ಮುಂತಾದವರು.
 6. ಶ್ರೀ. ದಿವಾನ್ ಬಹದ್ದೂರ್ ರಾಮಸ್ವಾಮಿ,
 7. ಶ್ರೀ ಗುಬ್ಬಿ,

1946[ಬದಲಾಯಿಸಿ]

1946ರಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಶಿವಡಿ-ವಡಾಲದ ರಸ್ತೆ ಸಂಖ್ಯೆ 9 ರಲ್ಲಿ ಆರು ನಿವೇಶನವನ್ನು ಒದಗಿಸಿತು. ಸಂಸ್ಥೆಯ ಹಣಕಾಸಿನ ಕೊರತೆಯನ್ನು ನೀಗಲು ಮಹಿಳಾ ಸದಸ್ಯರಾದ 'ವೈದೇಹಿ ಚಾರ್' ಹಾಗೂ ಅವರ ಸಂಗಡಿಗರು ವಡಾಲ ಪರಿಸರದ ಮನೆಮನೆಗೆ ತೆರಳಿ ಹಳೆಯ ಪೀಠೋಪಕರಣ, ರದ್ದಿ ಪೇಪರ್ ಗಳನ್ನು ಕಲೆಹಾಕಿ ಅದನ್ನು ಮಾರಿ ಹಣ ಸಂಗ್ರಹಿಸಿದರು. ಮುಂಬಯಿಯ ಪ್ರಸಿದ್ಧ ಕಟ್ಟಡ ಶಿಲ್ಪಿ ಕಲಾಕಾರರಾದ ಶ್ರೀ. ಬಿ.ವಿ.ಎಸ್.ಅಯ್ಯಂಗಾರರು ತಾವೇ ಸ್ವತಃ ಮುಂದೆ ಬಂದು, 'ಶಾಲೆಯ ಭವ್ಯ ಕಟ್ಟಡದ ನಕ್ಷೆ'ಯನ್ನು ನಿರ್ಮಿಸಿಕೊಟ್ಟರು. ಶ್ರೀ. ಆರ್.ಡಿ.ಚಾರ್ ರವರು 50,000 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಅವರ ಪ್ರೋತ್ಸಾಹದ ಫಲವಾಗಿ ಭವ್ಯ ಜ್ಞಾನ ಮಂದಿರದ ಭೂಮಿ ಪೂಜೆಯು ಅಕ್ಟೋಬರ್ 1953 ರಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಆರ್. ಡಿ. ಚಾರ್ ರವರ ಮುಂದಾಳತ್ವದಲ್ಲಿ ನೆರವೇರಿತು. ಎನ್.ಕೆ.ಇ.ಎಸ್. ಸ್ಥಾಪನೆಯಾದ ಬಳಿಕ, ವಿದ್ವಾನ್ ಮಾಹುಲಿ ಗೋಪಾಲಾಚಾರ್ಯರು ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು. ಶಾಲೆಯ ಹನ್ನೊಂದು ವಿದ್ಯಾರ್ಥಿಗಳ ಮೊದಲ ವರ್ಷವು ಮಾಟುಂಗದ ಕರ್ನಾಟಕ ಸಂಘದ ಒಂದು ಬಾಡಿಗೆ ಕೋಣೆಯಲ್ಲಿ ಆರಂಭಗೊಂಡಿತು. ಎರಡನೆಯ ವರ್ಷ ವಿದ್ಯಾರ್ಥಿಗಳ ಸಂಖ್ಯೆ 17 ಕ್ಕೆ ಏರಿದ್ದರಿಂದ ಮತ್ತೆರಡು ಕೋಣೆಗಳನ್ನು 'ಕಿಂಗ್ಸ್ ಸರ್ಕಲ್‌'ನ ಮಹಿಳಾಶ್ರಮದಲ್ಲಿ ಬಾಡಿಗೆಗೆ ತೆಗೆದುಕೊಂಡು ಶಾಲೆಯನ್ನು ನಡೆಸಲಾಯಿತು. ದ್ವಿತೀಯ ಮಹಾಯುದ್ದದ ಸಮಾಪ್ತಿಯ ತರುವಾಯ 'ಸಾಯನ್‌'ನಲ್ಲಿರುವ ಸೈನಿಕ ವಸತಿಗಳಿಂದ ಸೈನಿಕರು ನಿರ್ಮಿಸಿದ ನಂತರ ದಿವಾನ್ ಬಹಾದ್ದೂರ್ ರಾಮಸ್ವಾಮಿ ಹಾಗೂ ಶ್ರೀ ಗುಬ್ಬಿಯವರ ಪ್ರಯತ್ನದಿಂದ ಮುಂಬಯಿ ಮಹಾನಗರ ಪಾಲಿಕೆಯಿಂದ ಸೈನಿಕ ವಸತಿಗಳನ್ನು ಶಾಲೆ ನಡೆಸಲು ಪಡೆಯಲಾಯಿತು.ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ'ಯು ಭಾಷಾವಾರು ಅಲ್ಪಸಂಖ್ಯಾತ ಸಂಸ್ಥೆಯಾಗಿದ್ದು ವಡಾಲದ ಮಧ್ಯಭಾಗದಲ್ಲಿರುವ 'ಇಂದೂಲಾಲ್ ಭುವಾ ಮಾರ್ಗ'ದಲ್ಲಿ ಶಾಲೆ ಮತ್ತು ಕಿರಿಯ ಕಾಲೇಜನ್ನು ನಡೆಸುತ್ತಿದೆ. ಈ ಸಂಸ್ಥೆಯು

 • ಶಿಶುಪಾಲನಾ ಕೇಂದ್ರ ಮತ್ತು ಶಿಶು ಅಭಿವೃದ್ಧಿ ಕೇಂದ್ರ,
 • ಪ್ರಾಥಮಿಕ, ಮಾಧ್ಯಮಿಕ, ಶಾಲೆಯೊಂದಿಗೆ ಕಿರಿಯ ಕಾಲೇಜನ್ನು ನಡೆಸಿಕೊಂಡು ಬರುತ್ತಿದೆ.

ಶಾಲೆಯಲ್ಲಿ ಸಹಶಿಕ್ಷಣ ಪದ್ದತಿಯಿದ್ದು ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಹಾಗೂ ಉಚ್ಚ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಇದು ಮಹಾರಾಷ್ಟ್ರ ಸರಕಾರದಿಂದ ಅಲ್ಪಸಂಖ್ಯಾತ ಭಾಷಾವಾರು ಶಾಲೆ ಎಂದು ಗುರುತಿಸಲ್ಪಟ್ಟಿದೆ. ಈ ಶಾಲೆಯು ಇಂಗ್ಲೀಷ್ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಹಾಗೂ ಕನ್ನಡ ಮಾಧ್ಯಮದಲ್ಲಿ 5ರಿಂದ 10ನೇ ತರಗತಿಯವರೆಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಲಿದ್ದು ಶಾಲಾ ಮಾಧ್ಯಮಿಕ ವಿಭಾಗವು ಮಹಾರಾಷ್ಟ್ರ ಸರಕಾರದಿಂದ ಅನುದಾನವನ್ನು ಪಡೆದಿದೆ. ಮತ್ತು ಪ್ರಾಥಮಿಕ ವಿಭಾಗವು ಬೃಹತ್ ಮುಂಬಯಿ ಮಹಾನಗರ ಪಾಲಿಕೆಯಿಂದ ಅನುದಾನವನ್ನು ಪಡೆಯುತ್ತಲಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಯಾಗಲು ವಿದ್ಯಾರ್ಥಿಗೆ ಪಠ್ಯಶಿಕ್ಷಣದೊಂದಿಗೆ ಕಲೆ ಸಾಹಿತ್ಯ , ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಒದಗಿಸುವ ಮೂಲಕ ಅವನ ಸರ್ವತೋಮುಖ ಪ್ರಗತಿಯನ್ನು ಸಾಧಿಸುವುದು ಶಾಲೆಯ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಸ್ಥಾಪನೆ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಅಮೋಘವಾದ ಸಾಧನೆಯನ್ನು ಮಾಡಿ ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡಿದೆ.

ಸಂಸ್ಥೆಯ ಮುಖ್ಯ ಉದ್ದೇಶ[ಬದಲಾಯಿಸಿ]

ಭವ್ಯ ಜ್ಞಾನ ಮಂದಿರದ ಭೂಮಿ ಪೂಜೆಯು ಅಕ್ಟೋಬರ್ 1953 ರಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಆರ್. ಡಿ. ಚಾರ್ ರವರ ಮುಂದಾಳತ್ವದಲ್ಲಿ ನೆರವೇರಿತು. ಹೊಸ ಕಟ್ಟಡದ ದಕ್ಷಿಣ ವಿಭಾಗವು 14 ಜೂನ್ 1956 ರಂದು ಪೂರ್ಣಗೊಂಡಿತು. ಹೊಸ ಕಟ್ಟಡದಲ್ಲಿ ಜೂನ್ 1957ರಲ್ಲಿ ಮೊದಲನೆಯ ವರ್ಷವು ಆರಂಭಗೊಂಡಿತು. ಅದರಂತೆ 1960ರಲ್ಲಿ 'ಮೈಸೂರು ಅಸೋಸಿಯೇಶನ್ ನ, ನ ಸದಸ್ಯರ ಸ್ಪೂರ್ತಿಯಿಂದ 'ವಿಶ್ವೇಶ್ವರ ವಿಂಗ್' ನಿರ್ಮಾಣಗೊಂಡಿತು. ಇಂದು ಅದೇ ವಿಭಾಗದಲ್ಲಿ 'ಸರ್,ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ರಿಸರ್ಚ', ನ್ನು ಪ್ರಾರಂಭಿಸಿದ್ದು ಇದು ಮುಂಬಯಿ ವಿಶ್ವವಿದ್ಯಾಲಯದಿಂದ ಅಂಗೀಕರಿಸಲ್ಪಟ್ಟಿದೆ. 2012 ರಲ್ಲಿ M.M.S ನ ಮೊದಲ ವರ್ಷದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಮಹಾರಾಷ್ಟ್ರ ಸೊಸೈಟಿಸ್ ಆಕ್ಟ್ 1880ಹಾಗೂ ಚಾರಿಟೇಬಲ್ ಪಬ್ಲಿಕ್ ಟ್ರಸ್ಟ್ ಆಕ್ಟ 1950ರ ಪ್ರಕಾರ ನೋಂದಾಯಿಸಲ್ಪಟ್ಟಿದೆ. ಸಂಸ್ಥೆಯ ಮುಖ್ಯ ಉದ್ದೇಶವು ಶಿಕ್ಷಣದಿಂದ ಸಬಲೀಕರಣ ಎಂಬುದಾಗಿದೆ. ಈ ಶಾಲೆಯ ಸಂಸ್ಥೆಯ ಅಧಿನದಲ್ಲಿದ್ದು ಇದರ ನೋಂದಣಿ ಸಂಖ್ಯೆಯು 973/ 1934-40. ಇದು ಚಾರಿಟೇಬಲ್ ಟ್ರಸ್ಟ್ ಕಾಯ್ದೆ 1950ರ ಪ್ರಕಾರ ನೋಂದಾಯಿಸಲ್ಪಟ್ಟಿದೆ. ಇದರ ನೋಂದಾವಣಿ ಸಂಖ್ಯೆಯು F.188(BOM) ಇದಕ್ಕೆ BMCಯು 580-70 M2 ನ 6 plots ಗಳನ್ನು ಎನ್.ಕೆ.ಇ.ಸಂಸ್ಥೆಗೆ ಶಿಕ್ಷಣದ ಉದ್ದೇಶಕ್ಕಾಗಿ ನೀಡಿದೆ. ಸಂಸ್ಥೆಯು ಸುಮಾರು 3484.99.M2 ವಿಸ್ತಾರದ ಭೂಮಿಯನ್ನು ಹೊಂದಿದೆ. ಮತ್ತು 1107.00 M2 ಕ್ಷೇತ್ರದ ಆಟದ ಮೈದಾನವನ್ನು ಹೊಂದಿದೆ. ಸಂಸ್ಥೆಯು 4100 M2 ಕ್ಷೇತ್ರದ ಕಟ್ಟಡವನ್ನು ಹೊಂದಿದೆ. ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉಚ್ಚ ಮಾಧ್ಯಮಿಕ ಶಿಕ್ಷಣವನ್ನು ನೀಡುತ್ತಲಿದ್ದು ಕಳೆದ 8 ವರ್ಷಗಳಿಂದ ಮಹಾರಾಷ್ಟ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು ನಡೆಸಿಕೊಂಡು ಬರುತ್ತಿರುವ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಶಾಲೆಯು ಸತತವಾಗಿ ಶೇಕಡಾ 100ಪಲಿತಾಂಶವನ್ನು ಪಡೆದಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆದ್ಯತೆ[ಬದಲಾಯಿಸಿ]

ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಲಿದ್ದು ಅದರಲ್ಲಿ 95% ದಷ್ಟು ಮಕ್ಕಳು ಬಡತನ ರೇಖೆಗಿಂತ ಕೆಳಗಿನ ಮಟ್ಟದವರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಹಿನ್ನೆಲೆಯ ತೊಂದರೆಯನ್ನು ಕೊಡಬಾರದು ಎನ್ನುವ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಸಮನಾದ ಅವಕಾಶಗಳನ್ನು ನೀಡಿ ಅವರ ಪ್ರತಿಭೆಯನ್ನು ತೋರಿಸಲು ಅನುವು ಮಾಡಿಕೊಟ್ಟಿದೆ.

ಅಲ್ಪಸಂಖ್ಯಾತ ವರ್ಗಕ್ಕೆ ಆದ್ಯತೆ[ಬದಲಾಯಿಸಿ]

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯು ಭಾಷಾವಾರು ಅಲ್ಪಸಂಖ್ಯಾತ ಸಂಸ್ಥೆಯೆಂದು ಮಹಾರಾಷ್ಟ್ರದಿಂದ ಅಂಗೀಕರಿಸಲ್ಪಟ್ಟ ಸಂಸ್ಥೆಯಾಗಿದೆ. ಮೂಲ ಶಿಕ್ಷಣವನ್ನು ಕೊಡುವ ಮೂಲಕ ತನ್ನ ಉದ್ದೇಶದಲ್ಲಿ ಯಶಸ್ಸನ್ನು ಕಂಡಿದೆ. ಬದಲಾಗುತ್ತಿರುವ ವೈವಿಧ್ಯಮಯ ವ್ಯಾಪಾರಾತ್ಮಕ, ವ್ಯವಹಾರಾತ್ಮಕ ಪರಿಸರಕ್ಕೆ ಹೊಂದಿಕೊಳ್ಳಲು ಬೇಕಾಗುವ ಸಮಾಜದ ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸಲು ಹಾಗೂ ನಮ್ಮ ತಂತ್ರಜ್ಞಾನದ ಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಮುಂದಾಳತ್ವ ವಹಿಸುವಂತಹ ಶಿಕ್ಷಣವನ್ನು ಒದಗಿಸುತ್ತಿದೆ. ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಇನ್ನೊಂದು ಮಹತ್ತರ ಉದ್ದೇಶವೆಂದರೆ ಸವಲತ್ತುಗಳನ್ನು ಸೃಷ್ಟಿಸಿ ಅಭಿವೃದ್ದಿಪಡಿಸುವುದು. ಆ ಮೂಲಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮರ್ಥ್ಯ ಪಡೆಯುವಂತೆ ಮಾಡುವುದು. ಸಂಸ್ಥೆಯು ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ 150 ಸದಸ್ಯರನ್ನು ಹೊಂದಿದೆ. ಸಂಸ್ಥೆಯು ಕಾರ್ಯಕಾರಿ ಸಮಿತಿಯ ಮುಖಾಂತರ ನಡೆಯುತಲಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಮತ್ತು ಒಬ್ಬರು ಕೋಶಾಧಿಕಾರಿಗಳನ್ನೊಳಗೊಂಡ ಒಟ್ಟು ಆರು ಸದಸ್ಯರನ್ನು ಒಳಗೊಂಡಿದೆ. ಪ್ರತೀ ವರ್ಷ ಕಾರ್ಯಕಾರಿ ಸಮಿತಿಯ ಸಂಸ್ಥೆಯ ಅರ್ಹ ಸದಸ್ಯರಿಂದ ಚುನಾಯಿಸಲ್ಪಡುತ್ತಿದ್ದು ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆಯಲ್ಲಿ ದೀರ್ಘವಾದ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ.

'ತರಗತಿಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಸ್ಥಾಪಿಸಲಾಯಿತು'

ಶಾಲೆಯ ಬೆಳ್ಳಿಹಬ್ಬದ ಆಚರಣೆ[ಬದಲಾಯಿಸಿ]

ಶಾಲೆಯು ತನ್ನ ಬೆಳ್ಳಿ ಹಬ್ಬವನ್ನು 1946 ರಲ್ಲಿ ಮೈಸೂರು ಮಹಾರಾಜರಾದ 'ಶ್ರೀ ಜಯಚಾಮರಾಜ ಒಡೆಯರ್', ರವರ ಉಪಸ್ಥಿತಿಯಲ್ಲಿ ಆಚರಿಸಿಕೊಂಡಿತು.

ಶಾಲೆಯ ಸುವರ್ಣಮಹೋತ್ಸವ[ಬದಲಾಯಿಸಿ]

1989 ರಲ್ಲಿ ಶಾಲೆಯು ತನ್ನ 'ಸುವರ್ಣ ಮಹೋತ್ಸವ'ವನ್ನು ನೆರವೇರಿಸಿತು.

ಶಾಲೆಯ ವಜ್ರ ಮಹೋತ್ಸವಾಚರಣೆ[ಬದಲಾಯಿಸಿ]

1998-99ರಲ್ಲಿ ತನ್ನ 'ವಜ್ರಮಹೋತ್ಸವ'ವನ್ನು ಅತೀ ವಿಜೃಂಭಣೆಯಿಂದ ಆಚರಿಸಿಕೊಂಡಿತು.

೨೦೧೪ ರಲ್ಲಿ ಅಮೃತ ಮಹೋತ್ಸವ[ಬದಲಾಯಿಸಿ]

ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆಯನ್ನು ಸಲ್ಲಿಸಿದ್ದು 2014 ರಲ್ಲಿ ತನ್ನ 75ವರ್ಷಗಳನ್ನು ಪೂರೈಸಿ, 'ಅಮೃತ ಮಹೋತ್ಸವ'ವನ್ನು ಆಚರಿಸಿತು.[೨] 'ಮುಂಬಯಿನಗರದ 'ಎನ್. ಕೆ. ಇ. ಎಸ್. ಸೊಸೈಟಿಯ ಅಮೃತ ಮಹೋತ್ಸವ ಸಮಾರಂಭ', ಮಾಟುಂಗಾದ ಮಹೇಶ್ವರಿ ಉದ್ಯಾನದ ಸಮೀಪದಲ್ಲಿರುವ, 'ಶ್ರೀ. ಶಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹ',ದಲ್ಲಿ ೨೦೧೪ ರ ಮಾರ್ಚ್ ೧ ನೆಯತಾರೀಖು, ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕರ್ನಾಟಕದ ಮಾಜೀ ಲೆಜಿಸ್ಲೇಟೀವ್ ಕೌನ್ಸಿಲ್ ನ ಸ್ಪೀಕರ್, 'ಶ್ರೀ. ವಿ. ಆರ್. ಸುದರ್ಶನ್' ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. 'ಅಮೃತ ಮಹೋತ್ಸವದ ಸ್ಮರಣಿಕಾ ಸಂಚಿಕೆ'ಯನ್ನು ಬಿಡುಗಡೆಮಾಡುತ್ತಾ, ಅವರು, ಮುಂಬಯಿ ನಗರದ ಕನ್ನಡಿಗರ ಕೊಡುಗೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮಹಾರಾಷ್ಟ್ರಲ್ಲಿ ನೆಲಸಿರುವ ಕನ್ನಡಿಗರು, ವಾಣಿಜ್ಯ, ಶಿಕ್ಷಣ, ಮೊದಲಾದ ವಿಷಯಗಳಲ್ಲಿ ಮಹತ್ವದ ಯೋಗದಾನ ಮಾಡುವದಿಶೆಯಲ್ಲಿ ಮಂಚೂಣಿಯಲ್ಲಿದ್ದಾರೆ ಎಂದು ವರ್ಣಿಸಿದರು. 'ಎನ್.ಕೆ.ಇ.ಎಸ್.ವಿದ್ಯಾಲಯ'ದಿಂದ ಹೊರಬಂದ ವಿದ್ಯಾರ್ಥಿಗಳಲ್ಲಿ 'ಜಸ್ಟೀಸ್, ಶ್ರೀಕೃಷ್ಣ',ರಾದಿಯಾಗಿ ಹಲವಾರು ಜನ, ಸಮಾಜದ ಮುಖ್ಯವಾಹಿನಿಯಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ.[೩]

ಅಧ್ಯಕ್ಷರು[ಬದಲಾಯಿಸಿ]

ವರ್ಷ/ಅಧ್ಯಕ್ಷರ ಹೆಸರು 1939-42 ವಿದ್ವಾನ್ ಮಾಹುಲಿ. ಆರ್.ಗೋಪಾಲಾಚಾರ್ಯ

1942-57 ಶ್ರೀ .ಆರ್. ಡಿ. ಚಾರ್

1957-64 ಶ್ರೀ.ಎಂ.ಆರ್. ವರದರಾಜನ್

1964-78 ಶ್ರೀ ನಾರಾಯಣ ಸ್ವಾಮಿ

1978-79 ಡಾ. ಆರ್.ಎಲ್.ಎನ್. ಅಯ್ಯಂಗಾರ್

1979-83 ಶ್ರೀ.ಬಿ.ವಿ.ವೆಂಕಟೇಶ

1983-90 ಶ್ರೀ.ಬಿ.ಎನ್.ಶ್ರೀ ಕೃಷ್ಣ

1990-96 ಶ್ರೀ ಜಿ.ಡಿ .ಜಿನೇಗೌಡ

1996-97 ಶ್ರೀಮತಿ ಉಷಾ ಜೈರಾಮ್

1997-2001 ಶ್ರೀಮತಿ ಲೀಲಾ ರಾಜ್ ಕುಮಾರ

2001-02 ಶ್ರೀ ಜಿ.ಆರ್.ಆನಂದ

2002-03 ಶ್ರೀಮತಿ ಲೀಲಾ ರಾಜ್‌ ಕುಮಾರ

2003 ರಿಂದ ಶ್ರೀ ಡಾ. ಎಚ್.ಎಸ್. ಶ್ರೀನಿವಾಸ್

ಗೌರವ ಕಾರ್ಯದರ್ಶಿಗಳು[ಬದಲಾಯಿಸಿ]

ವರ್ಷ/ ಗೌರವ ಕಾರ್ಯದರ್ಶಿಗಳ ಹೆಸರು

1939- 78 ಶ್ರೀ. ಆರ್. ವೆಂಕಟೇಶ ಮೂರ್ತಿ

1978- 79 ಶ್ರೀ.ಪಿ.ಎನ್. ಮೂರ್ತಿ

1979- 83 ಶ್ರೀ ಡಿ.ಕೆ.ಆರ್ ರಾವ್

1983- 86 ಶ್ರೀ.ಎ.ಎಸ್.ಕೆ.ರಾವ್

1986- 90 ಶ್ರೀ.ಜಿ.ಡಿ.ಜಿನಗೌಡ

1990- 2004 ಶ್ರೀ.ಎಸ್.ಸುಬ್ರಮಣಿ

2004- 05 ಶ್ರೀ.ಎಸ್.ಕೆ.ಅಯ್ಯಂಗಾರ್

2005- 07 ಶ್ರೀ.ಎಸ್. ಸುಬ್ರಮಣಿ

2007 ರಿಂದ ಶ್ರೀ.ಬಿ.ಎಸ್. ಸುರೇಶ್

ಮುಖ್ಯೋಪಾಧ್ಯಾಯರು[ಬದಲಾಯಿಸಿ]

ವರ್ಷ/ಮುಖ್ಯೋಪಾಧ್ಯಾಯರ ಹೆಸರು

1941- 43 ಶ್ರೀ ಎಚ್.ಕೆ.ಗುಂಡೂರಾವ್

1943- 47 ಶ್ರೀ.ಎನ್.ಎನ್.ಮಹಲ್.

1947- 50 ಶ್ರೀ.ಸಿ.ಕೃಷ್ಣಸ್ವಾಮಿ

1950- 52 ಶ್ರೀ.ಎ.ಎಸ್.ಭಾಸ್ಕರ

1952- 58 ಶ್ರೀ.ಎನ್.ನರಸಿಂಹಯ್ಯ

1958- 74 ಶ್ರೀ.ಪಿ.ಎನ್.ಮೂರ್ತಿ

1974- 84 ಶ್ರೀಮತಿ ಕೆ.ಹಟ್ಟಂಗಡಿ

1984- 87 ಶ್ರೀಮತಿ ಶಶಿಕಲಾ ಆರ್.ಶರ್ಮಾ

1987- 92 ಶ್ರೀ ಎಸ್.ರಾಮಚಂದ್ರ ರಾವ್

1992-2000 ಶ್ರೀಮತಿ ವಸುಂದರಾ ಆರ್

2000ರಿಂದ ಶ್ರೀಮತಿ ಸರೋಜ ರಾವ್

ಉಲ್ಲೇಖಗಳು[ಬದಲಾಯಿಸಿ]

 1. ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ
 2. mangalorean.com
 3. ಕನ್ನಡಿಗ ವರ್ಲ್ಡ್

'ಅಮೃತಮಹೋತ್ಸವದ ಸಾಂಸ್ಕೃತಿಯ ಕಾರ್ಯಕ್ರಮಗಳ ಸುಂದರ ಕ್ಷಣಗಳು'[ಬದಲಾಯಿಸಿ]