ವಿಷಯಕ್ಕೆ ಹೋಗು

ನೋಹ್‍ಸ್ಗಿಥಿಯಾಂಗ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋಹ್‍ಸ್ಗಿಥಿಯಾಂಗ್ ಜಲಪಾತವು (ಸೆವೆನ್ ಸಿಸ್ಟರ್ಸ್ ಫ಼ಾಲ್ಸ್ - ಏಳು ಸೋದರಿಯರ ಜಲಪಾತ ಅಥವಾ ಮಾಸ್ಮಾಯ್ ಜಲಪಾತ ಎಂದೂ ಪರಿಚಿತವಾಗಿದೆ) ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿನ ಮಾಸ್ಮಾಯ್ ಹಳ್ಳಿಯ ದಕ್ಷಿಣಕ್ಕೆ ೧ ಕಿ.ಮಿ. ದೂರದಲ್ಲಿ ಸ್ಥಿತವಾಗಿರುವ ಏಳು ವಿಭಾಗಗಳ ಜಲಪಾತವಾಗಿದೆ. ನೀರು ೩೧೫ ಮೀಟರ್ ಎತ್ತರದಿಂದ ಬೀಳುತ್ತದೆ ಮತ್ತು ಸರಾಸರಿ ಅಗಲ ೭೦ ಮೀಟರ್‌ನಷ್ಟಿದೆ.[] ಇದು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದು.

ಜಲಪಾತವು ಖಾಸಿ ಗುಡ್ಡಗಳ ಸುಣ್ಣದಕಲ್ಲುಗಳ ಪ್ರಪಾತಗಳ ಮೇಲಿನಿಂದ ಕೇವಲ ಮಳೆಗಾಲದಲ್ಲಿ ಧುಮುಕುತ್ತದೆ. ಪೂರ್ಣ ಪ್ರಮಾಣದಲ್ಲಿ, ವಿಭಾಗಗಳು ಪ್ರಪಾತದ ಉದ್ದಕ್ಕೆ ಬಹುತೇಕ ದೂರದವರೆಗೆ ವ್ಯಾಪಿಸುತ್ತವೆ. ಜಲಪಾತವು ಸೂರ್ಯನಿಂದ ಪ್ರಕಾಶಗೊಳ್ಳುತ್ತದೆ ಮತ್ತು ಅಸ್ತವಾಗುತ್ತಿರುವ ಸೂರ್ಯನ ಹೊಳೆಯುವ ಬಣ್ಣಗಳು ಜಲಪಾತದ ಮೇಲೆ ಬಿದ್ದು ಸುಂದರವಾಗಿ ಕಾಣುತ್ತದೆ.[]

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Nohsngithiang Falls". World Waterfall Database. Archived from the original on 2010-12-01. Retrieved 2010-06-20.
  2. "Nohsngithiang Falls". Meghalaya Tourism. Archived from the original on 2020-01-26. Retrieved 2010-06-20.