ನೋಕಿಯ C2-೦೦, ಮೊಬೈಲ್ ಫೋನ್

ವಿಕಿಪೀಡಿಯ ಇಂದ
Jump to navigation Jump to search
ಚಿತ್ರ:C2-00-Beauty-shot-png.png
'ನೋಕಿಯ C2-೦೦, ಮೊಬೈಲ್ ಫೋನ್'

'ನೋಕಿಯ C2-೦೦', ಮೊಬೈಲ್ ಫೋನ್,[೧] ಇಂದಿನ ಮಾರುಕಟ್ಟೆಯಲ್ಲಿ ಬಿಕರಿಗೆ ದೊರೆಯುತ್ತಿರುವ ಹಲವಾರು ಕಂಪೆನಿಗಳ 'ಮೊಬೈ ಫೋನ್' ಗಳಿಗೆ ಹೋಲಿಸಿದರೆ, ಇಂದಿನ ದಿನಕ್ಕೆ ಅತಿ ಕಡಿಮೆ ಕ್ರಯ, ಹಾಗೂ ಹಲವಾರು ಸೌಲಭ್ಯಗಳ ಆಗರವಾಗಿರುವ ಒಂದು ವಿಶಿಷ್ಟತೆಯನ್ನು ಹೊಂದಿರುವ,ಹಾಗೂ ಅತಿ ಸೋವಿ ದರದಲ್ಲಿ ಲಭ್ಯವಿರುವ ಫೋನ್ ಎಂದು ಹೆಸರುವಾಸಿಯಾಗಿದೆ.ಇಂದಿನ 'ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗ'ದಲ್ಲಿ ಫೋನ್ ಬಳಸದ ವ್ಯಕ್ತಿ ಅತಿ ವಿರಳ. ಈಗ ಜನ ತಮ್ಮ ಜೀವನ ನಿರ್ವಹಣೆಗಾಗಿ ದೂರದೂರದ ರಾಷ್ಟ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆಲ್ಲಾ ತಮ್ಮ ಮನೆಯವರಿಗೆ ಹಾಗೂ ವೃತ್ತಿಪರ ವಿಶಯಗಳನ್ನು ನಿಶ್ಕರ್ಷೆಮಾಡಲು ಸಂಪರ್ಕ ಅನಿವಾರ್ಯ. ಹಿಂದಿನ 'ಸ್ಥಿರ ದೂರವಾಣಿ ಎಷ್ಟೋ ವರ್ಷಗಳಿಂದ ಚಾಲನೆಯಲ್ಲಿ ಇದ್ದರೂ ಇಂದಿನ ವೇಗದ ಜೀವನಾವಶ್ಯಕ ವ್ಯವಸ್ಥೆಗೆ ಅದು ಆಷ್ಟು ಸಮರ್ಪಕಾಗಿಲ್ಲ. ಅದರಲ್ಲಿ ಹಲವಾರು ತೊಡಕುಗಳಿವೆ. ಹಾಗಾಗಿ ಚಾಲನೆಯಲ್ಲಿ ವೈವಿಧ್ಯಮಯ 'ಮೊಬೈಲ್ ಫೋನ್' ಗಳು ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿವೆ. ಇವು ಅತಿ ಸುವ್ಯಸ್ಥಿತ, ವಿಶ್ವಸನೀಯ, ಅತಿ ಸ್ಪಷ್ಟವಾಗಿ ಕೇಳಿಸುವ, ಹಾಗೂ ಪರಿಸರ ಪ್ರೇಮಿಯಾಗಿರುವುದರಿಂದ ಎಲ್ಲರಿಗೂ ಅತಿ ಪ್ರಿಯವಾಗಿವೆ. ಇಂದು ಸುಮಾರು ಮೊಬೈಲ್ ನಿರ್ಮಾಣದ ಕಂಪೆನಿಗಳು ವಿಶ್ವದಾದ್ಯಂತ ಹೊಸ-ಹೊಸ ಆವಿಷ್ಕಾರಗಳ ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಪ್ರತಿಕಂಪೆನಿಯೂ ಅವರದೇ ಆದ 'ವಿಶಿಷ್ಟ ಸ್ಕೀಂ' ಗಳನ್ನು ಘೋಶಿಸುತ್ತದೆ. ಒಂದು ಫೋನ್ ರಾತ್ರಿಮಾತಾಡಲು, ಮತ್ತೊಂದು ಹಗಲಿನಲ್ಲಿ ಮಾತಾಡಲು, ಇನ್ನೊಂದು ರಾಜ್ಯದೊಳಗೆ ಕುಟುಂಬದವರ ಜೊತೆ ಮಾತಾಡಲು ಹೀಗೆ ಪ್ರಚಲಿತದಲ್ಲಿವೆ. ಈ ಫೋನ್ ಗಳಿಗೆ ಅಳವಡಿಸುವ 'ಸಿಮ್ ಕಾರ್ಡ್' ಗಳ ಸಂಖ್ಯೆಯೂ ಒಂದಕ್ಕಿಂತ ಹೆಚ್ಚು. ಇವತ್ತಿನ ಜೀವನಶೈಲಿಗೆ ಒಂದಕ್ಕಿಂತ ಹೆಚ್ಚು ಫೋನ್ ಗಳು ಅನಿವಾರ್ಯವೆನ್ನಿಸಿವೆ. ಸಾಮಾನ್ಯವಾಗಿ 'ಎರಡು ಸಿಮ್ ಕಾರ್ಡ್' ಬಳಸುವರ ಸಂಖ್ಯೆ ಗಣನೀಯವಾಗಿ ವೃದ್ಧಿಸುತ್ತಿದೆ. 'SIM ಕಾರ್ಡ್' ಎಂದರೆ,(Subscriber Identity Module) ಮೊಬೈಲ್ ಚಂದಾದಾರರ ವಿವರಗಳನ್ನು ಒಳಗೊಂಡ ಒಂದು ಚಿಕ್ಕ ಬಿಲ್ಲೆ.(ಚಂದಾದಾರರ ಗುರುತು ಲಾಂಛನ ಬಿಲ್ಲೆ,'ಚೆಂಗುಲಾಬಿ' ಎನ್ನಬಹುದು)

ಡ್ಯುಯಲ್ ಸಿಮ್ ಮೊಬೈಲ್ ಫೋನ್ ಗಳು[ಬದಲಾಯಿಸಿ]

ಒಬ್ಬನೇ ವ್ಯಕ್ತಿ ಎರಡು ಫೋನ್ ಇಟ್ಟುಕೊಳ್ಳುವುದರಲ್ಲಿ ಅಸುವಿಧತೆ ಹೆಚ್ಚು. ಹೆಂಗೆಳೆಯರಿಗೆ ಇದು ಇನ್ನೂ ಹೆಚ್ಚಿನ ಸಮಸ್ಯೆ. ಅಂತಹವರಿಗಾಗಿಯೇ 'ಎರಡು ಸಿಮ್' ಅರ್ಥಾತ್ 'ಡ್ಯುಯಲ್ ಸಿಮ್ ಫೋನ್' ಗಳು ಮಾರುಕಟ್ಟೆಗೆ ಬಂದಿವೆ. ಅಂತಹ ಫೋನ್ ಗಳ ಗುಣಾವಗುಣಗಳು ಹೀಗಿವೆ.[೨]

ನೋಕಿಯ C2-೦೦[ಬದಲಾಯಿಸಿ]

ಇದೊಂದು ಅಗ್ಗದ ಫೋನ್. (ಬೆಲೆ.೨,೪೦೦ ರೂಪಾಯಿಗಳು) (flipkart.com). ಪ್ರಮುಖ ಆಕರ್ಷಣೆ, 'ಎರಡು ಸಿಮ್ ಕಾರ್ಡ್ ಗಳ ಸೌಲಭ್ಯ'. ಒಟ್ಟಿನಲ್ಲಿ ಅತಿ ಚಿಕ್ಕ ಫೋನ್ ಆದರೂ ಹಲವಾರು ಸವಲತ್ತುಗಳಿವೆ.

 1. 'ಸಿಂಬಿಯನ್ S-40,' ಕಾರ್ಯಾಚರಣೆಯ ವ್ಯವಸ್ಥೆ,
 2. ೧೬ ಮೆಗಾ ಬೈಟ್ 'ಪ್ರಾಥಮಿಕ ಮೆಮೊರಿ',
 3. ೩೨ ಗಿಗಾ ಬೈಟ್ ತನಕ 'ಎಸ್.ಡಿ.ಕಾರ್ಡ್'
 4. 'ಹೆಚ್ಚುವರಿ ಮೆಮೊರಿ ಸೌಲಭ್ಯ',
 5. 'ಯು.ಎಸ್.ಬಿ. ಸಂಪರ್ಕ ಕಿಂಡಿ' (Slot)
 6. 'ಬ್ಲೂಟೂತ್'
 7. 'ಜಿ.ಪಿ.ಆರ್.ಎಸ್.ಅಂತರ್ಜಾಲ ವ್ಯವಸ್ಥೆ',
 8. '೧೦೨೦ mAh ಬ್ಯಾಟರಿ',
 9. 'ಇ-ಮೈಲ್ ಸೌಲಭ್ಯ',
 10. 'ಎಫ್ಎಂ ರೇಡಿಯೊ',
 11. 'MP3 ಸಂಗೀತ',
 12. '೬೪೦ x ೪೮೦ ಪಿಕ್ಸೆಲ್ ರೆಸೊಲ್ಯೂಶನ್ ಕ್ಯಾಮರಾ',
 13. 'ಬಣ್ಣದ ಪರದೆ',
 14. 'ಕ್ಯಾಮರದಲ್ಲಿ ೪ ಡಿಜಿಟಲ್ ಝೂಮ್',
 15. '೧೦೮x ೪೮x ೧೫ ಮಿ. ಮಿ, ಗಾತ್ರ'
 16. '೭೪ ಗ್ರಾಂ ತೂಕ'.
 17. 'ಒಂದು ಸಿಮ್ ಬಳಕೆಯಲ್ಲಿದ್ದು ಮಾತಾಡುವ ಸಮಯದಲ್ಲಿ ಇನ್ನೊಂದು ಕರೆ ಬಂದರೆ ಪರದೆಯಲ್ಲಿ ನಮೂದಿಸುತ್ತದೆ'.
 18. 'ಸಿಮ್ ಕಾರ್ಡ್ ಗಳ ಸ್ಲಾಟ್ ಬದಲಿಸಬಹುದು'
 19. 'ರಿಂಗ್ ಟೋನ್ ದ್ವನಿಯನ್ನು ಆರಿಸಿಕೊಳ್ಳಬಹುದು'
 20. 'ಧ್ವನಿ ಮುದ್ರಿಸುವ ವ್ಯವಸ್ಥೆ ಇದೆ'.
 21. 'ರೇಡಿಯೋ ದಿಂದ ಇಲ್ಲವೇ ಬೇರೆ ಕಡೆಯಿಂದ ಕೇಳಿ ಬರುವ ಧ್ವನಿಯೂ ಆಗುತ್ತದೆ'.
 22. 'ಬ್ಲೂಟೂತ್ ಹೆಡ್ ಸೆಟ್' ಉಪಯೋಗಕ್ಕೆ ಬರುತ್ತದೆ. ಮಾತನಾಡುವ ಸಮಯದಲ್ಲಿ 'ಕೈ ಫ್ರೀ' ಆಗುತ್ತದೆ.
 23. 'ಅತಿ ಕಡಿಮೆ ಬೆಲೆಯ ಮೊಬೈಲ್ ಫೋನ್,' ಎಂದು ಹೆಸರುವಾಸಿಯಾಗಿದೆ.

ಅವಗುಣಗಳು[ಬದಲಾಯಿಸಿ]

 • ವಾಸ್ತವವಾಗಿ, ಒಟ್ಟಾರೆ ಗುಣಮಟ್ಟ ಅಷ್ಟು ಉತ್ಕೃಷ್ಟವಾಗಿಲ್ಲ.
 • ಮೊಬೈಲ್ ನಲ್ಲಿ ಅಳವಡಿಸಿರುವ ಕ್ಯಾಮರದ ಗುಣಮಟ್ಟ ಕಡಿಮೆ. ವೀಡಿಯೋ ಮುದ್ರಣ ವಯಸ್ಥೆ ಸಮರ್ಪಕವಾಗಿಲ್ಲ.
 • (GPRS) ಅಥವಾ (EGDE) ಮೂಲಕ ಅಂತರ್ಜಾಲ ಸಂಪರ್ಕ ಪಡೆಯಬಹುದು ಈ ವೇಗ ಕೇವಲ ಇಮೈಲ್ ಗೆ ಮಾತ್ರ ಸಾಕು. ಆದರೆ ಅಂತರ್ಜಾಲ ತಾಣಗಳನ್ನು ವೀಕ್ಷಿಸಲು, ವೇಗ ಕಡಿಮೆ. 3G ಮತ್ತು 'ವೈ ಫೈ' ಸವಲತ್ತುಗಳಿಲ್ಲ.
 • ಯು.ಎಸ್.ಬಿ ಸ್ಲಾಟ್ ಇದೆ. ಗಣಕ ಯಂತ್ರಕ್ಕೆ ಸಂಪರ್ಕ ಕೊಡಬಹುದು. ಗಣಕ ಯಂತ್ರ ಮತ್ತು ಫೋನ್ ಗಳ ನಡುವೆ ಸಂಗೀತ ಮತ್ತು ಚಿತ್ರಗಳ ಫೈಲ್ ಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು.
 • ಫೋನ್ ಚಾರ್ಜ್ ಮಾಡಿಕೊಳ್ಳಲು 'ಯು.ಎಸ್.ಬಿ ಸ್ಲಾಟ್,' ಸಹಾಯಕ್ಕೆ ಬರುವುದಿಲ್ಲ.
 • 'ಸ್ಮಾರ್ಟ್ ಡಯಲಿಂಗ್' ಸವಲತ್ತು ಇಲ್ಲ. ಪರದೆಯನ್ನು ನೇರವಾಗಿಯೇ ನೋಡುತ್ತಿರಬೇಕು. ಪಕ್ಕದಿಂದ ನೋಡಿದರೆ ಮಾಹಿತಿ ಕಾಣಿಸುವುದಿಲ್ಲ.
 • 'ನೆಟ್ ವರ್ಕ್ ಸಮಸ್ಯೆ'. ಸಿಗ್ನಲ್ ಸರಿಯಾಗಿ ಬರುವುದಿಲ್ಲ. ಎಲ್ಲಾ ೫ ಕಡ್ಡಿಗಳನ್ನು ವೀಕ್ಷಿಸಿದರೂ ಕರೆ ಮಾತ್ರ ರವಾನೆಯಾಗುವುದಿಲ್ಲ. ಫೋನ್ ಒಮ್ಮೆ ಆರಿಸಿ, ಮತ್ತೆ ಆನ್ ಮಾಡಿದರೆ ಸರಿಹೋಗುತ್ತದೆ.
 • ಅತಿ ತ್ವರಿತವಾಗಿ 'ಕೀಬೋರ್ಡ್' ಒತ್ತಿ ರಭಸದಿಂದ ಎಸ್.ಎಂ.ಎಸ್.ಇಲ್ಲವೇ ಬೇರೆ ಕೆಲಸ ಮಾಡಿದರೆ, 'ಮೊಬೈಲ್' ತಟಸ್ಥವಾಗುತ್ತದೆ. ಇದಕ್ಕೆ ಉಪಾಯವೆಂದರೆ ಒಮ್ಮೆ ಆರಿಸಿ, 'ಮತ್ತೆ ಸ್ಟಾರ್ಟ್' ಮಾಡಿದರೆ ಸರಿಹೋಗುತ್ತದೆ.
 • 'ಅತ್ಯದ್ಭುತ ಫೋನ್' ಎಂದು ಹೇಳಲು ಬಾರದಿದ್ದರೂ, ಗ್ರಾಹಕರು ಕೊಟ್ಟ ಹಣಕ್ಕೆ ಹೆಚ್ಚು ಗುಣ ವಿಶಿಷ್ಠತೆ ಒದಗಿಸುವ ಫೋನ್ ಎಂದು ಸಾಬೀತಾಗಿದೆ.

ಉಲ್ಲೇಖಗಳು[ಬದಲಾಯಿಸಿ]

[೩] [೪] [೫]

 1. Nokia C2-00
 2. 'ವಿಶ್ವ ಕನ್ನಡ.ಕಾಂ. 'ಗ್ಯಾಜೆಟ್ ಲೋಕ'–೦೨೮,(ಜುಲೈ ೧೨, ೨೦೧೨),'ಎಲ್ಲ ಮಾಡಬಲ್ಲ ಅಗ್ಗದ ಫೋನ್ ನೋಕಿಯ ಸಿ೨-೦೦'
 3. https://www.gsmarena.com/nokia_c2_00-3367.php
 4. https://www.91mobiles.com/nokia-c2-00-price-in-india
 5. https://www.flipkart.com/nokia-c2-00/p/itmffg4hzygfd9dr