ವಿಷಯಕ್ಕೆ ಹೋಗು

ನೈಲ್ ಪೊಲಿಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೇಲ್ ಪಾಲಿಶ್ ಉಗುರಿನ ಪದರಗಳನ್ನು ಅಲಂಕರಿಸಲು ಮತ್ತು ರಕ್ಷಿಸಲು ಮಾನವ ಬೆರಳು ಅಥವಾ ಕಾಲ್ಬೆರಳಿನ ಉಗುರುಗಳಿಗೆ ಲೇಪಿಸಬಹುದಾದ ಒಂದು ಮೆರುಗೆಣ್ಣೆ. ಅದರ ಅಲಂಕಾರಿಕ ಪರಿಣಾಮಗಳನ್ನು ಹೆಚ್ಚಿಸಲು ಮತ್ತು ಬಿರುಕುಗಳು ಅಥವಾ ಹಲ್ಲೆಯಾಗಿ ಉದುರುವುದನ್ನು ತಡೆಯಲು ಅದರ ಸೂತ್ರೀಕರಣವನ್ನು ಪದೇಪದೇ ಪರಿಷ್ಕರಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ನೇಲ್ ಪಾಲಿಶ್ ಚೀನಾದಲ್ಲಿ ಹುಟ್ಟಿಕೊಂಡಿತು, ಮತ್ತು ಅದರ ಬಳಕೆ ಕ್ರಿ.ಪೂ. 3000ರಷ್ಟು ಹಳೆಯದು.[೧][೨] 600 BC ಯಲ್ಲಿ ಝೌ ರಾಜವಂಶದ ಅವಧಿಯಲ್ಲಿ, ಅರಸು ಮನೆ ಚಿನ್ನ ಮತ್ತು ಬೆಳ್ಳಿ ಬಣ್ಣಗಳನ್ನು ಇಷ್ಟಪಡುತ್ತಿತ್ತು. ಆದಾಗ್ಯೂ, ಅಂತಿಮವಾಗಿ ರಾಜಮನೆತನದ ಮೆಚ್ಚಿನವುಗಳಾಗಿ ಈ ಲೋಹೀಯ ಬಣ್ಣಗಳ ಬದಲಿಗೆ ಕೆಂಪು ಮತ್ತು ಕಪ್ಪು ಬಂದವು. ಮಿಂಗ್ ರಾಜವಂಶದ ಅವಧಿಯಲ್ಲಿ, ನೇಲ್ ಪಾಲಿಶ್ಅನ್ನು ಹೆಚ್ಚಾಗಿ ಜೇನುಮೇಣ, ಮೊಟ್ಟೆಯ ಬಿಳಿಭಾಗ, ಜೆಲಟಿನ್, ತರಕಾರಿ ವರ್ಣಗಳು ಮತ್ತು ಅಕೇಶಿಯಾ ಅಂಟನ್ನು ಒಳಗೊಂಡ ಒಂದು ಮಿಶ್ರಣದಿಂದ ತಯಾರಿಸಲಾಗುತ್ತಿತ್ತು.

ಈಜಿಪ್ಟ್‌ನಲ್ಲಿ, ಕೆಳವರ್ಗದವರು ಮಸುಕಾದ ಬಣ್ಣಗಳನ್ನು ಧರಿಸುತ್ತಿದ್ದರೆ, ಉನ್ನತ ಸಮಾಜದವರು ತಮ್ಮ ಉಗುರುಗಳಿಗೆ ಕೆಂಪು ಮಿಶ್ರಿತ ಕಂದು ಬಣ್ಣವನ್ನು ಲೇಪಿಸಿಕೊಳ್ಳುತ್ತಿದ್ದರು.

9 ನೇ ಶತಮಾನದ ತಿರುವಿನ ವೇಳೆಗೆ, ಉಗುರುಗಳನ್ನು ಸುವಾಸಿತ ಕೆಂಪು ತೈಲಗಳಿಂದ ಲೇಪಿಸಲಾಗುತ್ತಿತ್ತು, ಮತ್ತು ನಂತರ ಹೊಳಪು ನೀಡಲಾಗುತ್ತಿತ್ತು ಅಥವಾ ನಯ ಮಾಡಲಾಗುತ್ತಿತ್ತು. 19ನೇ ಮತ್ತು 20 ನೇ ಶತಮಾನದ ಮುಂಚಿನಲ್ಲಿ, ಜನರು ತಮ್ಮ ಉಗುರುಗಳೊಳಗೆ ಬಣ್ಣದ ಪುಡಿಗಳು ಮತ್ತು ಕ್ರೀಮ್‍ಗಳನ್ನು ಮಿಶ್ರಣಮಾಡಿ, ನಂತರ ಹೊಳೆಯುವವರೆಗೆ ಅವುಗಳನ್ನು ನಯಮಾಡಿ, ಬಣ್ಣಯುಕ್ತ ನೋಟದ ಬದಲಾಗಿ ನಯಗೊಳಿಸಿದ ನೋಟವನ್ನು ಇಷ್ಟಪಡುತ್ತಿದ್ದರು. ಗ್ರಾಫ್‍ನ ಹೈಗ್ಲೊ ನೇಲ್ ಪಾಲಿಶ್ ಪೇಸ್ಟ್ ಈ ಸಮಯದಲ್ಲಿ ಮಾರಾಟವಾದ ಒಂದು ಬಗೆಯ ಹೊಳಪುನೀಡುವ ಉತ್ಪನ್ನವಾಗಿತ್ತು.

ಆಟೊಮೊಬೈಲ್ ಬಣ್ಣಗಳ ಸೃಷ್ಟಿ ನಂತರ, ೧೯೭೧ ರಲ್ಲಿ ಮೊದಲ ಆಧುನಿಕ ನೇಲ್ ಪಾಲಿಶ್‍ನ ನಿರ್ಮಾಣವಾಯಿತು. ೧೯೩೨ ರಲ್ಲಿ ಚಾರ್ಲ್ಸ್ ಕಂಪನಿ (ನಂತರ ರೆವ್ಲಾನ್) ತನ್ನ ಮೊದಲ ನೇಲ್ ಪಾಲಿಶ್ ಅನ್ನು ತಯಾರಿಸಿತು. ಹಿಂದೆ, ಇದನ್ನು ಬೆರಳು ಹಾಗೂ ಕಾಲ್ಬೆರಳ ಉಗುರುಗಳ ಕೆಳಗಿನ ಹೊಲಸನ್ನು ಮುಚ್ಚಿಡಲು ಕೈಗವಸುಗಳ ಬದಲಾಗಿ ಬಳಸಲಾಗಿತ್ತು.

ಪೋಲಿಷ್ ವಿಧಗಳು[ಬದಲಾಯಿಸಿ]

ಬೇಸ್ ಕೋಟ್[ಬದಲಾಯಿಸಿ]

ಈ ಬಗೆಯ ನೇಲ್ ಪಾಲಿಶ್ ನಿರ್ದಿಷ್ಟವಾಗಿ ಉಗುರಿಗೆ ನೇಲ್ ಪಾಲಿಶ್ ಅನ್ನು ಲೇಪಿಸುವ ಮೊದಲು ಬಳಸಲಾಗುವ ಒಂದು ಪಾರದರ್ಶಕ ಅಥವಾ ಹಾಲಿನ ಬಣ್ಣದ ಪಾಲಿಶ್ ಸೂತ್ರವಾಗಿದೆ.[೩] ಇದರ ಉದ್ದೇಶ ಉಗುರುಗಳನ್ನು ಬಲಪಡಿಸುವುದು, ಉಗುರಿನ ತೇವಾಂಶವನ್ನು ಮೂಲಪ್ರಮಾಣಕ್ಕೆ ತರುವುದು, ಮತ್ತು/ಅಥವಾ ಪಾಲಿಶ್ ಉಗುರಿಗೆ ಅಂಟಿಕೊಳ್ಳುವುದಕ್ಕೆ ಸಹಾಯಮಾಡುವುದು. ಕೆಲವು ಬೇಸ್ ಕೋಟ್‍ಗಳನ್ನು "ಏಣು ಭರ್ತಿಸಾಮಾಗ್ರಿ" ಎಂದು ಮಾರಾಟ ಮಾಡಲಾಗುತ್ತದೆ, ಮತ್ತು ಒಂದು ನಯವಾದ ಮೇಲ್ಮೈಯನ್ನು ರಚಿಸುವ ಮೂಲಕ, ಅನಾರೋಗ್ಯದ ಉಗುರುಗಳ ಕಾರಣ ಅಥವಾ ವಯಸ್ಸಿನ ಕಾರಣ ಕಾಣಿಸಿಕೊಳ್ಳುವ ಏಣುಗಳ ಬರುವಿಕೆಯನ್ನು ಕಡಿಮೆಮಾಡುತ್ತವೆ. ಬೇಸ್ ಕೋಟ್ ಬಣ್ಣಯುಕ್ತ ಪಾಲಿಶ್‍ಗಳಿಂದ ಉಂಟಾಗುವ ಹಳದಿ ಬಣ್ಣದ ಕಲೆಗಳಿಂದ ಉಗುರುಗಳನ್ನು ಕಾಪಾಡಲು ಸಹಾಯ ಮಾಡಬಹುದು.

ಟಾಪ್ ಕೋಟ್[ಬದಲಾಯಿಸಿ]

ಈ ಬಗೆಯ ನೇಲ್ ಪಾಲಿಶ್ ನಿರ್ದಿಷ್ಟವಾಗಿ ಉಗುರಿಗೆ ನೇಲ್ ಪಾಲಿಶ್ ಅನ್ನು ಲೇಪಿಸಿದ ನಂತರ ಬಳಸಲಾಗುವ ಒಂದು ಪಾರದರ್ಶಕ ಬಣ್ಣದ ಪಾಲಿಶ್ ಸೂತ್ರ. ಇದು, ಸೀಳುವಿಕೆ, ಗೀರಾಗುವಿಕೆ ಮತ್ತು ಸಿಪ್ಪೆಸುಲಿಯುವಿಕೆಯನ್ನು ತಡೆಗಟ್ಟಲು ಉಗುರಿಗೆ ಒಂದು ಗಟ್ಟಿಯಾದ ತಡೆಗೋಡೆಯನ್ನು ನಿರ್ಮಿಸುತ್ತದೆ. ಅನೇಕ ಟಾಪ್ ಕೋಟ್‍ಗಳನ್ನು "ಕ್ಷಿಪ್ರವಾಗಿ ಒಣಗುವ"ವೆಂದು ಮಾರಾಟ ಮಾಡಲಾಗುತ್ತದೆ, ಮತ್ತು ವೇಗವಾಗಿ ಒಣಗುವುದರ ಜೊತೆಗೆ, ಕೆಳಗಿನ ಬಣ್ಣದ ಪಾಲಿಶ್ ಕೂಡ ಶೀಘ್ರವಾಗಿ ಒಣಗಲು ಸಹಾಯ ಮಾಡುತ್ತವೆ.

ಜೆಲ್[ಬದಲಾಯಿಸಿ]

ಜೆಲ್ ನೇಲ್ ಪಾಲಿಶ್ ದೀರ್ಘಬಾಳಿಕೆ ಬರುವ ನೇಲ್ ಪಾಲಿಶ್‍ನ ಒಂದು ವಿಧ. ಇದನ್ನು ಸಾಮಾನ್ಯ ಪಾಲಿಶ್‍ನಂತೆ ಉಗುರಿನ ಮೇಲೆ ಲೇಪಿಸಲಾಗುತ್ತದೆ, ಮತ್ತು ಇದು ನೇರಳಾತೀತ ಅಥವಾ ಎಲ್ಇಡಿ ದೀಪದ ಅಡಿಯಲ್ಲಿ ಇರಿಸುವವರೆಗೆ ಒಣಗುವುದಿಲ್ಲ. ಸಾಮಾನ್ಯ ನೇಲ್ ಪಾಲಿಶ್ ಸೂತ್ರಗಳು ವಿಶಿಷ್ಟವಾಗಿ ಸೀಳುವ ಮೊದಲು 2-7 ದಿನಗಳ ಬಾಳಿಕೆ ಬಂದರೆ, ಜೆಲ್ ಪಾಲಿಶ್ ಅತಿ ಹೆಚ್ಚೆಂದರೆ ಸುಮಾರು ಎರಡು ವಾರ ಬಾಳಿಕೆ ಬರುತ್ತದೆ. ಜೆಲ್ ಪಾಲಿಶ್ ಅನ್ನು ತೆಗೆಯುವುದು ಸಾಮಾನ್ಯ ನೇಲ್ ಪಾಲಿಶ್‍ಗಿಂತ ಹೆಚ್ಚು ಕಷ್ಟಕರ; ಇದನ್ನು ಸಾಮಾನ್ಯವಾಗಿ ಉಗುರುಗಳನ್ನು 5-10 ನಿಮಿಷ ಅಸಿಟೋನ್‍ನಲ್ಲಿ ನೆನೆಸಿ ನಂತರ ಕೆರೆಯಲಾಗುತ್ತದೆ. ಅಸಿಟೋನ್ ಇಲ್ಲದ ನೇಲ್ ಪಾಲಿಶ್ ತೆಗೆಯುವ ವಸ್ತುವಿನಿಂದ ಜೆಲ್ ಪಾಲಿಶ್ ತೆಗೆಯುವುದು ಸಾಧ್ಯವಿಲ್ಲ.

ಫ್ಯಾಷನ್‍ನಲ್ಲಿ ನೇಲ್ ಪಾಲಿಶ್[ಬದಲಾಯಿಸಿ]

ಸಾಂಪ್ರದಾಯಿಕವಾಗಿ, ನೇಲ್ ಪಾಲಿಶ್ ನೇರಳೆ, ಗುಲಾಬಿ, ಕೆಂಪು, ಪಾರದರ್ಶಕ, ಮತ್ತು ಕಪ್ಪು ಬಣ್ಣದಲ್ಲಿ ಆರಂಭವಾಯಿತು. ಆ ನಂತರ, ಅನೇಕ ಹೊಸ ಬಣ್ಣಗಳು ಮತ್ತು ತಂತ್ರಗಳು ಅಭಿವೃದ್ಧಿಯಾಗಿವೆ, ಪರಿಣಾಮವಾಗಿ ತೀರಾ ಭಿನ್ನವಾದ ಬಣ್ಣಗಳ ವೈವಿಧ್ಯಗಳ ನೇಲ್ ಪಾಲಿಶ್ ಅನ್ನು ಕಾಣಬಹುದು.[೪] ಘನ ಬಣ್ಣಗಳನ್ನು ಮೀರಿ, ನೇಲ್ ಪಾಲಿಶ್, ನೇಲ್ ಪಾಲಿಶ್ ಮುದ್ರೆಗಳು, ಸಣ್ಣ ಬಿರುಕು ಶೈಲಿಯ, ಆಕರ್ಷಕ, ನೇಲ್ ಪಾಲಿಶ್ ಪಟ್ಟಿಗಳು ಮತ್ತು ಸ್ಟಿಕ್ಕರ್ಗಳಂತಹ ಇತರ ವಿನ್ಯಾಸಗಳು ಮತ್ತು ಬಣ್ಣಗಳ ವ್ಯೂಹವನ್ನು ಅಭಿವೃದ್ಧಿಗೊಳಿಸಿದೆ. ನಕಲಿ ಕೃತಕ ರತ್ನಗಳನ್ನು ಹಲವುವೇಳೆ ಲೇಪಿಸಲಾಗುತ್ತದೆ. ಕೆಲವು ರೀತಿಯ ಪಾಲಿಶ್‍ಗಳನ್ನು, ಉಗುರು ಬೆಳವಣಿಗೆಯನ್ನು ಉಂಟುಮಾಡುವವು, ಉಗುರುಗಳನ್ನು ಹೆಚ್ಚು ಬಲಶಾಲಿ ಮಾಡುವವು, ಉಗುರುಗಳನ್ನು ಒಡೆತ, ಬಿರುಕು ಮತ್ತು ಸೀಳುವಿಕೆಯಿಂದ ತಡೆಗಟ್ಟುವವು, ಮತ್ತು ಉಗುರು ಕಚ್ಚುವಿಕೆಯನ್ನು ನಿಲ್ಲಿಸುವವು ಎಂದು ಪ್ರಚಾರ ಮಾಡಲಾಗುತ್ತದೆ. ನೇಲ್ ಪಾಲಿಶ್ ಅನ್ನು ಹಸ್ತಾಲಂಕಾರದಲ್ಲಿ ಹಲವಾರು ಘಟಕಗಳಲ್ಲಿ ಒಂದಾಗಿ ಲೇಪಿಸಬಹುದು.

ಫ್ರೆಂಚ್ ಮೆನಿಕ್ಯೂರ್ಗಳು ನೈಸರ್ಗಿಕ ಉಗುರುಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಮೆನಿಕ್ಯೂರ್ಗಳು, ಮತ್ತು ಬಿಳಿ ಅಂಚುಗಳಿರುವ ನೈಸರ್ಗಿಕ ಗುಲಾಬಿ ಆಧಾರ ಉಗುರುಗಳನ್ನು ಲಕ್ಷಣವಾಗಿ ಹೊಂದಿವೆ, ಮತ್ತು ಇದರಿಂದ ಇದು ನೇಲ್ ಪಾಲಿಶ್ ಉಳ್ಳ ಮೊದಲ ಜನಪ್ರಿಯ ಮತ್ತು ಪ್ರಸಿದ್ಧ ಬಣ್ಣ ಸಂಯೋಜನೆಗಳಲ್ಲಿ ಒಂದೆನಿಸಿದೆ. ಉಗುರುಗಳ ಅಂಚುಗಳನ್ನು ಬಿಳಿಯ ಬಣ್ಣದಿಂದ ಲೇಪಿಸಲಾದರೆ, ಉಗುರಿನ ಉಳಿದ ಭಾಗವನ್ನು ಗುಲಾಬಿ ಅಥವಾ ಸೂಕ್ತ ನಗ್ನ ಛಾಯೆಯ ಬಣ್ಣದಿಂದ ಪಾಲಿಶ್ ಮಾಡಲಾಗುತ್ತದೆ. ಫ್ರೆಂಚ್ ಮೆನಿಕ್ಯೂರ್ಗಳು 18 ನೇ ಶತಮಾನದ ಪ್ಯಾರಿಸ್‍ನಲ್ಲಿ ಹುಟ್ಟಿಕೊಂಡಿರಬಹುದು ಮತ್ತು 1920 ಮತ್ತು 1930 ರ ದಶಕಗಳಲ್ಲಿ ಜನಪ್ರಿಯವಾಗಿದ್ದವು.

ಸಾಮಾಜಿಕ ಸಂಪರ್ಕಜಾಲ ಮಾಧ್ಯಮವು ಬಳಕೆದಾರರಿಗೆ ತಮ್ಮ ಉಗುರು ಕಲೆ ಬಗ್ಗೆ ಚಿತ್ರಗಳನ್ನು ಹಂಚಿಕೊಳ್ಳಲು ಅನುಮತಿಸಿ, ಉಗುರು ಕಲೆ ಸಂಸ್ಕೃತಿಗೆ ಕಾರಣವಾಗಿದೆ. ಬಂದ ಉದಾಹರಣೆಗೆ ಉಗುರು ಅಂಟು ಕಾಗದಗಳು (ನೇಲ್ ಪಾಲಿಶ್ ಅಥವಾ ಪ್ಲಾಸ್ಟಿಕ್ನಿಂದ ಮಾಡಿದ), ಬಿರುಕು ಶೈಲಿಯ ನೇಲ್ ಪಾಲಿಶ್, ಕಾಂತೀಯ ನೇಲ್ ಪಾಲಿಶ್, ಪುರುಷರಿಗಾಗಿ ಮಾರಾಟಮಾಡಲಾದ ನೇಲ್ ಪಾಲಿಶ್, ಮತ್ತು ಉಗುರು ಅಲಂಕಾರಗಳಂತಹ, ಹಲವಾರು ಹೊಸ ಪಾಲಿಶ್‍ಗಳು ಮತ್ತು ಸಂಬಂಧಿತ ಉತ್ಪನ್ನಗಳು ಉಗುರು ಕಲೆಯ ಸ್ಫೋಟದ ಭಾಗವಾಗಿ 21 ನೇ ಶತಮಾನದ ಎರಡನೇ ದಶಕದಲ್ಲಿ ಮಾರುಕಟ್ಟೆಗೆ ಬಂದವು.

ಉಲ್ಲೇಖಗಳು[ಬದಲಾಯಿಸಿ]

  1. Toedt, John; Koza, Darrell; Cleef-Toedt, Kathleen van (2005). Chemical Composition Of Everyday Products. Greenwood Publishing Group. p. 49. ISBN 978-0-313-32579-3.
  2. Sherrow, Victoria (2001). For appearance' sake: The historical encyclopedia of good looks, beauty, and grooming. Phoenix: Oryx Press. p. 119. ISBN 978-1-57356-204-1.
  3. Molina, Christina (31 March 2014). "How to Actually Remove Glitter Nail Polish for Good". Elle.com. Hearst Communications, Inc. Retrieved 2 April 2014.
  4. "Nail Design Ideas". EllaHays.com. Archived from the original on 2015-04-20. Retrieved 2015-04-04.