ನೇಮಿನಾಥ ಸ್ವಾಮಿ ಮತ್ತು ಆಮ್ರಕೂಷ್ಮಾಂಡಿಸದಿನಿ ಅಮ್ಮನವರ ಶ್ರೀ ಮಠದ ಬಸದಿ, ಸ್ವಾದಿ
ನೇಮಿನಾಥ ಸ್ವಾಮಿ ಮತ್ತು ಆಮ್ರಕೂಷ್ಮಾಂಡಿನಿ ಅಮ್ಮನವರ ಶ್ರೀ ಮಠದ ಬಸದಿ, ಸ್ವಾದಿ
ಇತಿಹಾಸ
[ಬದಲಾಯಿಸಿ]ಶ್ರೀ ೧೦೦೮ ನೇಮಿನಾಥ ಸ್ವಾಮಿ ಮತ್ತು ಮಾತೆ ಆಮ್ರಕೂಮಾಂಡಿನಿಯರ ಬಸದಿಯು ಸ್ಥಳೀಯ ಶ್ರೀ ದಿಗಂಬರ ಜೈನ ಮಠದ ಬಸದಿಯೇ ಆಗಿದೆ. ಇದು ಉತ್ತರ ಕನ್ನಡ ಜಿಲ್ಲೆ ಸಿರ್ಸಿ ತಾಲೂಕಿನ ಸ್ವಾದಿಯ ಮಠದ ಬಳಿಯಲ್ಲಿದೆ. ಶ್ರೀ ಮಠಕ್ಕೆ ಆಗಮಿಸುವ ಎಲ್ಲಾ ಮುನಿ, ಶಾವಕ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಅಭಿಷೇಕ ಪೂಜಾದಿಗಳನ್ನು ಸಲ್ಲಿಸುತ್ತಾರೆ. ಬಸದಿಯು ಜೀರ್ಣಾವಸ್ಥೆಯಲ್ಲಿದ್ದು ಪೂಜ್ಯ ಸ್ವಾಮೀಜಿಯವರ ಯೋಜನೆಯಂತೆ ನೂತನ ಬಸದಿ ಶಿಲಾಮಯವಾಗಿ ರೂಪುಗೊಳ್ಳುತ್ತಿದೆ. ಇಲ್ಲಿಯ ಎಲ್ಲಾ ಅನುಷ್ಠಾನಗಳನ್ನು ಪೂಜ್ಯ ಸ್ವಸ್ತಿ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿಯವರೇ ನಡೆಸುತ್ತಿದ್ದಾರೆ. ಬಸದಿಯ ಇಂದ್ರರ ಹೆಸರು ಶ್ರೀ ಅರುಣ ಕುಮಾರ್ ಇಂದ, ಪ್ರಸಿದ್ದ ಮುನಿ ಶ್ರೀ ಪ್ರಥಮ ಅಕಲಂಕಾಚಾರ್ಯರೇ ಇಲ್ಲಿಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿದ್ದರೆಂದು ಹೇಳಲಾಗುತ್ತದೆ, ಆದ್ದರಿಂದ ಇದು ಕ್ರಿ.ಶ. 6ನೇ ಶತಮಾನದಷ್ಟು ಪ್ರಾಚೀನ ಕಾಲದಲ್ಲೇ ಇತ್ತು ಎಂದು ಹೇಳಬಹುದು.
ದೈವ
[ಬದಲಾಯಿಸಿ]ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿಯನ್ನು ಮತ್ತು ಮಾತೆ ಆಮ್ರಕೂಷ್ಮಾಂಡಿ ದೇವಿಯನ್ನು ಆರಾಧಿಸಲಾಗುತ್ತಿದೆ. ಪೀಠಸ್ಥವಾಗಿರುವ ಈ ದೇವಿಯ ಬಿಂಬ ಶಿಲಾಮಯವಾದುದು. ಮೇಲ್ಗಡೆ ಕೀರ್ತಿ ಮುಖದ ಕೆಳಗಡೆ ಪದ್ಧವೂ ಇರುವ ಈ ಬಿಂಬವನ್ನು ಯಾವಾಗಲೂ ವಸ್ತ್ರ ಪುಷ್ಪಗಳಿಂದ ಮನೋಹರವಾಗಿ ಅಲಂಕರಿಸಲಾಗುತ್ತದೆ. ಅದೇ ರೀತಿ ಸರ್ವಾಪ್ತ ಯಕ್ಷನನ್ನೂ ಇಲ್ಲಿ ಪೂಜಿಸಲಾಗುತ್ತದೆ. ಅಮ್ಮನವರ ಪೂಜಾ ಸಮಯದಲ್ಲಿ ಪ್ರತ್ಯೇಕವಾಗಿ ಹೂಗಳನ್ನು ಹಾಕಿ ಪ್ರಸಾದ ನೋಡುವ ಕ್ರಮವೂ ಇಲ್ಲಿದೆ. [೧]
ಕಲಾಕೃತಿ
[ಬದಲಾಯಿಸಿ]ಶ್ರೀ ನೇಮಿನಾಥ ತೀರ್ಥಂಕರರ ಬಿಂಬವು ಚಂದ್ರಕಾಂತ ಶಿಲೆಯಿಂದ ಮಾಡಲ್ಪಟ್ಟಿದ್ದು ಪಯರ್ಂಕಾಸನ ಭಂಗಿಯಲ್ಲಿದೆ. ಎತ್ತರ ಸುಮಾರು ಒಂದೂವರೆ ಅಡಿ, ಇದು ಒಂದು ಸ್ವತಂತ್ರವಾಗಿರುವ ವಿಗ್ರಹ, ಜತೆಯಲ್ಲಿ ಪ್ರಭಾವಲಯ ಇಲ್ಲ, ಈ ಬಿಂಬದ ಹಿಂದುಗಡೆಯಲ್ಲಿ ಚಂದ್ರಕಾಂತ ಶಿಲೆಯ ಇನ್ನೊಂದು ಪದ್ಮಾಸನ ಜಿನಬಿಂಬವನ್ನು ಇಡಲಾಗಿದೆ. ಎಡಬಲಗಳಲ್ಲಿ ಪ್ರಭಾವಲಯವಿರುವ ಪಯರ್ಂಕಾಸನದ ಇನ್ನೆರಡು ಜಿನ ಬಿಂಬಗಳೂ ಅದೇ ರೀತಿಯ ಇನ್ನೊಂದು ಪಾಶ್ರ್ವನಾಥ ಸ್ವಾಮಿಯ ಬಿಂಬವೂ, ಖಡ್ಗಸನ ಭಂಗಿಯ ಇನ್ನೆರಡು ಜಿನ ಬಿಂಬಗಳೂ ಇಲ್ಲಿವೆ. ಪ್ರತಿದಿನ ಬೆಳಿಗೆ ಇದಕ್ಕೆ ಪಂಚಾಮೃತ ಅಭಿಷೇಕ ಮತ್ತು ಪೂಜೆ, ಸಂಜೆ ಮಂಗಳಾರತಿಯನ್ನು ಮಾಡಲಾಗುತ್ತದೆ. ನವರಾತ್ರಿಯ ವಿಜಯದಶಮಿಯಂದು ಸ್ವಾಮಿಗೆ ರಥೋತ್ಸವವನ್ನು ಮಾಡಲಾಗುತ್ತದೆ. ಬಸದಿಯಲ್ಲಿ ಫಾಲ್ಕುನ ಅಷ್ಟಾಹಿಕ, ನೇಮಿನಾಥ ಸ್ವಾಮಿ ಮೋಕ್ಷ ಕಲ್ಯಾಣೋತ್ಸವ, ದಶಲಕ್ಷಣ ಪರ್ವ, ನೂಲಹುಣ್ಣಿಮೆ. ಮಹಾವೀರ ಜಯಂತಿ, ಸಿದ್ಧಚಿತ್ರ ಆರಾಧನೆ, ಸಿದ್ದಚಕ್ರ ಆರಾಧನೆ, ಜೀವದಯಾಷ್ಟಮಿ ಇತ್ಯಾದಿಗಳನ್ನು ಆಚರಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೪೬-೩೪೭.