ನೇಪಾಳ ಭೀಕರ ಭೂಕಂಪ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನೇಪಾಳ ಭೀಕರ ಭೂಕಂಪ[ಬದಲಾಯಿಸಿ]

ಮೇ ೨೦೧೫ ನೇಪಾಳ ಭೂಕಂಪ
ನೇಪಾಳ ಭೀಕರ ಭೂಕಂಪ is located in Nepal
ನೇಪಾಳ ಭೀಕರ ಭೂಕಂಪ
ಕಠ್ಮಂಡು
ಕಠ್ಮಂಡು
ದಿನಾಂಕ12 ಮೇ 2015 (2015-05-12)
ಉಂಟಾದ ಸಮಯ೧೨:೩೫:೧೯ ನೇಪಾಳದ ಸಮಯ
ಪ್ರಮಾಣ೭.೩ Mw[೧]
ಆಳ೧೮.೫ ಕಿ.ಮೀ (೧೧.೫ ಮೈ)
ಬಗೆಪಳಕು
ಹಾನಿಗೊಳಗಾದ ಪ್ರದೇಶಗಳು
ಸಾವು ನೋವುಗಳು೬೮ ಮರಣ
೧,೨೫೦+ ಗಾಯಾಳುಗಳು

ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ ೮೦ ಕಿ.ಮೀ. ದೂರದ ಲಂಜುಂಗ್‌ ಎಂಬಲ್ಲಿಗೆ ಕೇಂದ್ರಿತವಾಗಿತ್ತು. ರಿಕ್ಟರ್‌ ಮಾಪಕದಲ್ಲಿ ೭.೯ ತೀವ್ರತೆಯ ಭೀಕರ ಭೂಕಂಪವಾಗಿತ್ತು. ೧೮೦೦ಕ್ಕೂ ಹೆಚ್ಚು ಮಂದಿ ಸಾವು, ಸಾವಿರಾರು ಜನರಿಗೆ ಗಾಯವಾಯಿತು. ಲಕ್ಷಾಂತರ ಮಂದಿ ನಿರಾಶ್ರಿತರಾದರು. ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಮತ್ತು ಭೂತಾನಲ್ಲೂ ಕಂಪನವಾಯಿತು.


ನೇಪಾಳ ಕಾಲಮಾನ ಪ್ರಕಾರ ಏಪ್ರಿಲ್ ೨೫, ೨೦೧೫, ಶನಿವಾರ ಬೆಳಗ್ಗೆ ೧೧.೫೬ ಕ್ಕೆ ಸಂಭವಿಸಿತು. ಹಿಮಾಲಯ ದೇಶದ ಐತಿಹಾಸಿಕ ಸ್ಮಾರಕಗಳು ನೆಲಸಮವಾದವು. 1832ರ ಗೋಪುರ ಕುಸಿಯಿತು.

ಮೌಂಟ್ ಎವರೆಸ್ಟ್‌ನಲ್ಲೂ ಹಿಮಪಾತವಾಗಿದ್ದು, ಹಲವು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ.

ಹಾನಿ ಮತ್ತು ಸಾವು[ಬದಲಾಯಿಸಿ]

ಭೂಕಂಪವು ಬಯಲಲ್ಲೇ ಇದ್ದ ಜನರಲ್ಲಿ ಹಾಹಾಕಾರ ಸ್ರಷ್ಟಿಸಿತು. ಮೊದಲ ಕೆಲವು ಕ್ಷಣಗಳು ಸಂಪೂರ್ಣ ಶಾಂತವಾಗಿದ್ದವು. ನಂತರ ಎಲ್ಲರು ಕಿರುಚಲಾರಂಭಿಸಿದರು ಎಂದು ಒಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾನೆ. ಕಂಪನವು ಭೂಕುಸಿತ ಉಂಟುಮಾಡಿತು ಮತ್ತು ಮುಂಚೆ ಆಗಿದ್ದ ಭೂಕಂಪದಲ್ಲಿ ಉಳಿದ ಮನೆಗಳನ್ನು ಕೆಡವಿತು. ನೇಪಾಳದಲ್ಲಿ ೧೫೩ ಜನ ಪ್ರಾಣ ಕಳೆದುಕೊಂಡರು ಹಾಗು ೩೨೦೦ ಜನ ಗಾಯಗೊಂಡರು. ೭೫ ಜಿಲ್ಲೆಗಳಲ್ಲಿ ೩೨ ಜಿಲ್ಲೆಗಳಿಗೆ ಹಾನಿಯಾಯಿತು. ಭಾರತದಲ್ಲಿ ಈ ಭೂಕಂಪದಿಂದ ೧೭ ಜನ ಸತ್ತರು. ಇದರಲ್ಲಿ ೧೬ ಜನ ಬಿಹಾರನಲ್ಲಿ ಸತ್ತರು.


ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ[ಬದಲಾಯಿಸಿ]

ನೇಪಾಳ ಸೇನೆ ತನ್ನ ಆಪರೇಶನ್ ಸಂಕಟ ಮೊಚನವನ್ನು ಭಾರತ ಸೈನ್ಯದ ಜೊತೆಗೂಡಿ ಮುಂದುವರೆಸಿ ಸುಮಾರು ಟನ್ ಗಟ್ಟಳೆ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುತ್ತಿದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. "Nepal earthquake, magnitude 7.3, strikes near Everest". BBC News. Retrieved 12 May 2015.
  2. "Operation Maitri by Indian Army continues after 12 May Earthquake". news.biharprabha.com. 12 May 2015. Retrieved 12 May 2015.