ವಿಷಯಕ್ಕೆ ಹೋಗು

ನೆಲಮಾಳಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗ್ರಹ ಮತ್ತು ವ್ಯಾಯಾಮಕ್ಕಾಗಿ ಬಳಸಲಾದ ನೆಲಮಾಳಿಗೆ

ನೆಲಮಾಳಿಗೆ (ತಳಮನೆ) ಎಂದರೆ ನೆಲಮಹಡಿಯ ಕೆಳಗೆ ಸಂಪೂರ್ಣವಾಗಿ ಅಥವಾ ಭಾಗಶಃ ಇರುವ ಕಟ್ಟಡದ ಒಂದು ಅಥವಾ ಹೆಚ್ಚು ಮಹಡಿಗಳು.[] ಇದನ್ನು ಸಾಮಾನ್ಯವಾಗಿ ಕಟ್ಟಡದ ಸೌಲಭ್ಯ ಸ್ಥಳವಾಗಿ ಬಳಸಲಾಗುತ್ತದೆ, ಮತ್ತು ಇದರಲ್ಲಿ ಬಾಯ್ಲರ್, ವಾಟರ್ ಹೀಟರ್, ವಿದ್ಯುತ್ ಫಲಕ ಅಥವಾ ಕರಗುತಂತಿ ಪೆಟ್ಟಿಗೆ, ವಾಹನ ನಿಲ್ದಾಣ ಮತ್ತು ಹವಾನಿಯಂತ್ರಣ ವ್ಯವಸ್ಥೆಯಂತಹ ವಸ್ತುಗಳು ಸ್ಥಿತವಾಗಿರುತ್ತವೆ; ಇಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ಮತ್ತು ಕೇಬಲ್ ಟಿವಿ ವಿತರಣಾ ಬಿಂದುವಿನಂತಹ ಸೌಕರ್ಯಗಳು ಕೂಡ ಇರುತ್ತವೆ. ದುಬಾರಿ ಆಸ್ತಿ ದರಗಳನ್ನು ಹೊಂದಿರುವ ಲಂಡನ್‍ನಂತಹ ನಗರಗಳಲ್ಲಿ, ಹಲವುವೇಳೆ ನೆಲಮಾಳಿಗೆಗಳನ್ನು ಹೆಚ್ಚಿನ ಗುಣಮಟ್ಟದಲ್ಲಿ ಒದಗಿಸಲಾಗುತ್ತದೆ ಮತ್ತು ಇವನ್ನು ವಾಸಿಸುವ ಸ್ಥಳಗಳಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Basement - FEMA.gov". www.fema.gov.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]