ನೆರೆಹೊರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆರೆಹೊರೆ ಎಂದರೆ ಒಂದು ದೊಡ್ಡದಾದ ನಗರ, ಪಟ್ಟಣ, ಉಪನಗರ ಅಥವಾ ಗ್ರಾಮೀಣ ಪ್ರದೇಶದೊಳಗಿನ ಭೌಗೋಳಿಕವಾಗಿ ಸ್ಥಳೀಕೃತ ಸಮುದಾಯವಾಗಿರುತ್ತದೆ. ನೆರೆಹೊರೆ ಪ್ರದೇಶಗಳು ಹಲವುವೇಳೆ ಸದಸ್ಯರ ನಡುವೆ ಗಣನೀಯ ಪ್ರಮಾಣದ ಪರಸ್ಪರ ಮುಖಾಮುಖಿ ಸಂವಹನವಿರುವ ಸಾಮಾಜಿಕ ಸಮುದಾಯಗಳಾಗಿರುತ್ತವೆ. ಸಂಶೋಧಕರು ಒಂದು ನಿಖರವಾದ ವ್ಯಾಖ್ಯಾನವನ್ನು ಒಪ್ಪಿಕೊಂಡಿಲ್ಲ, ಆದರೆ ಮುಂದಿನ ವಾಕ್ಯವು ಪ್ರಾರಂಭದ ಬಿಂದುವಾಗಿ ಕಾರ್ಯನಿರ್ವಹಿಸಬಹುದು: "ಸಾಮಾನ್ಯವಾಗಿ ನೆರೆಹೊರೆಯನ್ನು ಸ್ಥಳದ ದೃಷ್ಟಿಯಿಂದ ನಿರ್ದಿಷ್ಟ ಭೌಗೋಳಿಕ ಪ್ರದೇಶವೆಂದು ಮತ್ತು ಕಾರ್ಯಾತ್ಮಕವಾಗಿ ಸಾಮಾಜಿಕ ಸಂಪರ್ಕಜಾಲಗಳ ಸಮೂಹವೆಂದು ವ್ಯಾಖ್ಯಾನಿಸಲಾಗುತ್ತದೆ. ಹಾಗಾಗಿ, ನೆರೆಹೊರೆಗಳು ಸ್ಥಾನಿಕ ಘಟಕಗಳಾಗಿದ್ದು ಇವುಗಳಲ್ಲಿ ಮುಖಾಮುಖಿ ಪರಸ್ಪರ ಸಾಮಾಜಿಕ ಸಂವಹನಗಳು ನಡೆಯುತ್ತವೆ—ನಿವಾಸಿಗಳು ಸಮಾನ ಮೌಲ್ಯಗಳು ಕೈಗೂಡಿಸಿಕೊಳ್ಳಲು, ಯುವಜನತೆಯನ್ನು ಬೆರೆಯುವಂತೆ, ಮತ್ತು ಪರಿಣಾಮಕಾರಿ ಸಾಮಾಜಿಕ ನಿಯಂತ್ರಣವನ್ನು ಕಾಪಾಡಲು ಪ್ರಯತ್ನಿಸುವ ವೈಯಕ್ತಿಕ ಹಿನ್ನೆಲೆಗಳು ಮತ್ತು ಸಂದರ್ಭಗಳು.[೧]

ಉಲ್ಲೇಖಗಳು[ಬದಲಾಯಿಸಿ]

  1. Schuck, Amie and Dennis Rosenbuam 2006 "Promoting Safe and Healthy Neighborhoods: What Research Tells Us about Intervention." The Aspen Institute.