ವಿಷಯಕ್ಕೆ ಹೋಗು

ನೀಲ್ ಸೇಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀಲ್ ಸೇಥಿ, ಭಾರತೀಯ ತಂದೆತಾಯಿಗಳ ಪ್ರೀತಿಯ ಮಗನಾಗಿ, ನ್ಯೂಯಾರ್ಕ್ ನಗರದಲ್ಲಿ ನಗರದಲ್ಲಿ ೨೦೦೪ ರಲ್ಲಿ ಜನಿಸಿದನು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಅಭಿನಯಕ್ಕಾಗಿ ಕರೆಬಂತು. ಅವರು ನಟಿಸಿದ ಮೊದಲ ಚಿತ್ರ,(೨೦೧೩) ದಿವಾಲಿ. ಆದರೆ ಅವರ ಅಭಿನಯಕ್ಕೆ ನಿಜವಾದ ಬೆಲೆಬಂದದ್ದು, ಜಾನ್ ಫೇವರೂ, ಅವರ ದಿಗ್ದರ್ಶನದಲ್ಲಿ ಪಾತ್ರವಹಿಸಿದ 'ಜಂಗಲ್ ಬುಕ್ ಚಲನಚಿತ್ರದ ಮೋಗ್ಲಿಯ ಪಾತ್ರಕ್ಕೆ. ೧೨ ವರ್ಷ ಪ್ರಾಯದ ಭಾರತೀಯ ಅಮೇರಿಕನ್ ಬಾಲಕ, ನೀಲ್, ೨೦೧೬ ರಲ್ಲಿ ಅಮೇರಿಕಾದ ಸುಪ್ರಸಿದ್ಧ ಡಿಸ್ನಿ ಲ್ಯಾಂಡ್ ಕಂಪೆನಿಯವರು ನಿರ್ಮಿಸಿದ 'ಜಂಗಲ್ ಬುಕ್' ಎಂಬ ವಿಶೇಷ ಕಂಪ್ಯೂಟರ್ ತಂತ್ರಜ್ಞಾನವನ್ನು (ಸಿ ಜಿ ಆಯ್) ಅಳವಡಿಸಿ ನಿರ್ಮಿಸಿದ ಚಲನಚಿತ್ರದಲ್ಲಿ ಮೋಗ್ಲಿ, ಎಂಬ ಕಾಡು ಹುಡುಗನ ಪ್ರಾಮುಖ ಪಾತ್ರವನ್ನು ನಿಭಾಯಿಸಿದ್ದಾನೆ, ಈ ಚಿತ್ರ 'ನೀಲ್' ನ ಪ್ರಪ್ರಥಮ ಚಿತ್ರ. ಅವನ ಜೊತೆ ಚಿತ್ರನಿರ್ಮಾಣದಲ್ಲಿ ಭಾಗವಹಿಸಿದ ಇತರರು : ಇದ್ರಿಸ್ ಎಲ್ಬಾ, ಬಿಲ್ ಮುರ್ರೆ, ಬೆನ್ ಕಿಂಗ್ಸ್ಲಿ, ಸ್ಕಾರ್ಲೆಟ್ ಜೊಹಾನ್ಸನ್, ಮತ್ತು ಕ್ರಿಷ್ಟೋಫರ್ ವಾಲ್ಕೆನ್, ಮೊದಲಾದವರು. ನೀಲ್, 'ಟೇಕ್ ವೆಂಡೋ' ಶಾಲೆಯಲ್ಲಿ ತನ್ನ ೪ ನೆಯ ವಯಸ್ಸಿನಲ್ಲಿ ಸೇರಿದನು. 'ಜಂಗಲ್ ಬುಕ್' ಚಲನಚಿತ್ರದ 'ಮೋಗ್ಲಿ' ಪಾತ್ರಕ್ಕೆ ಆಯ್ಕೆಗೆ ಭಾಗವಹಿಸಿದ ೨,೦೦೦ ಜನ ಅಭ್ಯರ್ಥಿಗಳಲ್ಲಿ ಒಬ್ಬನು. ನಿರ್ದೇಶಕರ ಮಾತಿನಂತೆ ಅಭಿನಯಿಸಿದರೂ, ಕೆಲವೊಮ್ಮೆ ತನ್ನದೇ ಅದ ರೀತಿಯಲ್ಲಿ ಕೆಲವು ಚಮತ್ಕಾರಿಕ ಅಭಿನಯವನ್ನು ಪ್ರದರ್ಶಿಸಿ, ಚಿತ್ರ ನಿರ್ಮಾಪಕ ನಿರ್ದೇಶಕರ ಮನ ಗೆದ್ದಿದ್ದಾನೆ.

ಉಲ್ಲೇಖಗಳು

[ಬದಲಾಯಿಸಿ]