ನೀಲಿ ಬಣ್ಣದ ಎಲ್ ಇ ಡಿ ಡಯೋಡ್ ಗಳು
ನೀಲಿ ಬಣ್ಣದ ಎಲ್‌ಇಡಿ,ಅಂದರೆ 'ಲೈಟ್ ಎಮಿಟಿಂಗ್ ಡಯೋಡ್'ಗಳ ಬಗ್ಗೆ ಅರಿಯಲು ಬಳಕೆದಾರರಿಗೆಲ್ಲಾ ಅತ್ಯಂತ ಕುತೂಹಲ. ಈ 'ನೀಲಿಬಣ್ಣದ ಡಯೋಡ್'ಗಳನ್ನು ರೂಪಿಸಿದ ಪರಿಣಾಮಕ್ಕಾಗಿ [೧] ೨೦೧೪ನೇ ಸಾಲಿನ ಭೌತವಿಜ್ಞಾನ ಮೂವರು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟರು.[೨] ಈಗಾಗಲೇ ಬಳಕೆದಾರರ ಗಮನಕ್ಕೆ ಬಂದಿರುವ 'ಎಲ್‌ಇಡಿ ಡಯೋಡ್'ಗಳ ಬಗ್ಗೆ ಹೆಚ್ಚು ಹೆಚ್ಚು ವಿವರಗಳು ಮಾರುಕಟ್ಟೆಯಲ್ಲಿ ಬರುವ ಹಿನ್ನೆಲೆಯಲ್ಲಿ ಖರೀದಿಗಾರರ ಆಸಕ್ತಿಯೂ ಹೆಚ್ಚುತ್ತಿದೆ.[೩] ಮಕ್ಕಳ ಆಟಿಕೆ, ಅಲಂಕಾರದ ಸೀರಿಯಲ್ ಸೆಟ್, ಬಸ್ಸು, ರೈಲಿನ ಬೋರ್ಡು ಮೊದಲಾದವುಗಳಿಂದ ಆರಂಭಿಸಿ ಅತ್ಯಾಧುನಿಕ ಟೀವಿ-ಮೊಬೈಲುಗಳವರೆಗೆ 'ಎಲ್‌ಇಡಿ'ಗಳು ಈಗ ಬಳಕೆಯಾಗುತ್ತಿರುವುದೂ ಬಹಳ ಜನರಿಗೆ ತಿಲಿದಿದೆ. ಬೇರೆಬೇರೆ ಬಣ್ಣದ ಎಲ್‌ಇಡಿಗಳ ಕಾರ್ಯ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಅವುಗಳಲ್ಲಿ ಈಗಾಗಲೇ ಜನರ ಮನಸ್ಸಿನಲ್ಲಿ ಸ್ಥಾನಪಡೆದ 'ಕೆಂಪು ಮತ್ತು ಹಸಿರು ಬಣ್ಣದ ಎಲ್ ಇ ದಡಿ' ಗಳು ದಶಕದಿಂದ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಇತ್ತಿಚೆಗೆ ಮಾರುಕಟ್ಟೆಗ ತಮ್ಮ ಇರುವಿಕೆಯನ್ನು ಸಾರಲು ಬಂದ ಪರಿಕರಗಳಲ್ಲಿ ಮುಖ್ಯವಾದವೆಂದರೆ, ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ 'ಬಿಳಿಯ ಎಲ್‌ಇಡಿ'ಗಳೂ ಬಿಳಿಯ ಬಣ್ಣದವುಗಳಿಗೆ ಅತಿ ಹೆಚ್ಚಿನ ಮಹತ್ವ ದೊರೆತಿದೆ. ಮನೆಯ ದಿವಾನಖಾನೆಯಲ್ಲಿ 'ಬಿಳಿ ಲೈಟ್' ನ ಆವಶ್ಯಕತೆ ಹೆಚ್ಚಾಗಿರುವುದರಿಂದ ಮನೆಯ ಮೂಲ ಬೆಳಕಿನ ಸಾಧನೆಗಾಗಿ ಅವುಗಳನ್ನು ಬಳಸಬಹುದು.
ನೀಲಿಯ ಎಲ್‌ಇಡಿಗಳ ಬಗ್ಗೆ
[ಬದಲಾಯಿಸಿ]ಸತತವಾಗಿ ಶ್ರಮವಹಿಸಿ ನಡೆಸಿದ ಸಂಶೋಧನೆಗಳಿಂದ ಪಡೆದ ನೀಲಿ ಬಣ್ಣದ ಕಿರಣಗಳನ್ನು ಹೊರಸೂಸುವ ಎಲ್‌ಇಡಿಯ ಆವಿಷ್ಕಾರ ವಾದದ್ದು, ೧೯೯೦ರ ದಶಕದ ಪ್ರಾರಂಭದಲ್ಲಿ. ಅವುಗಳು ಎಲ್‌ಇಡಿಗಳಿಂದ ಬಿಳಿಯ ಬಣ್ಣದ ಬೆಳಕನ್ನು ಹೊರಹೊಮ್ಮಿಸುವ ಕನಸನ್ನು ನಿಜವಾಗಿಸಿದವು. ಆದರೆ ನೀಲಿ ಬಣ್ಣದ ಬೆಳಕನ್ನು ಸೂಸುವ ಎಲ್‌ಇಡಿಗಳ ಕಾರ್ಯವಿಧಿಯಲ್ಲಿ ವಿಜ್ಞಾನಿಗಳು ಎಣಿಸಿದ ಯಶಸ್ಸನ್ನು ಕಾಣುವಲ್ಲಿ ಬಹಳ ಸಮಯ ಕಳೆಯಿತು. ಕೆಂಪು-ಹಸಿರು ಎಲ್‌ಇಡಿಗಳು ಹಾಗೂ ನೀಲಿ ಬಣ್ಣದ ಎಲ್‌ಇಡಿ-ತಂತ್ರಜ್ಞಾನಗಳನ್ನೂ ಒಟ್ಟಾಗಿ ಬಳಸಿ ಬಿಳಿಯ ಬೆಳಕನ್ನು ಹೊರಹೊಮ್ಮಿಸುವ ಪ್ರಯತ್ನ ಸಫಲವಾಯಿತು. ಎಲ್‌ಇಡಿಗಳ ಉನ್ನತ ಕಾರ್ಯಕ್ಷಮತೆ ಆತಿ ರೊಚಕವಾದ ಸಂಗತಿ. ಸದ್ಯ ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ತಿನ ಶೇ. ೨೦ರಷ್ಟು ಭಾಗ ಬೆಳಕಿಗಾಗಿಯೇ ವ್ಯಯವಾಗುವ ಬಗ್ಗೆ ವರದಿಗಳಿವೆ. ತಜ್ಞರ ಪ್ರಕಾರ, ಎಲ್‌ಇಡಿಗಳ ಸಮರ್ಪಕ ಬಳಕೆಯಿಂದ ಈ ಪ್ರಮಾಣವನ್ನು ಶೇ. ೪ರಷ್ಟಕ್ಕೆ ಇಳಿಸುವ ಆಶೆ ಸಫಲವಾಗಲಿದೆ. ಎಲ್ಲಾ ಬೆಳಕಿನ ವ್ಯವಸ್ಥೆಗಳನ್ನು ಎಲ್‌ಇಡಿ ದೀಪಗಳಿಗೆ ಬದಲಾಯಿಸುವುದು ಸಾಧ್ಯವಾದರೆ ವಿದ್ಯುತ್ ಬಳಕೆಯಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಹಲವು ಗ್ರಾಮಾಂತರ ಪ್ರದೇಶಗಳಲ್ಲೂ ಎಲ್‌ಇಡಿ ದೀಪಗಳು ಬಹು ಬಳಕೆಯ ಸಾಧನವಾಗಿವೆ. ಸೌರಶಕ್ತಿ ಆಧರಿತ ದೀಪಗಳೂ, ಕಡಿಮೆ ಪ್ರಮಾಣದ ವಿದ್ಯುತ್ತಿನಿಂದ ಹೆಚ್ಚುಕಾಲ ಬೆಳಗಬಲ್ಲ ಎಲ್‌ಇಡಿಗಳು ಹೋಲಿಕೆಯಲ್ಲಿ ಒಂದೆ ಆಗಿವೆ. ಕಡಿಮೆ ವಿದ್ಯುತ್ ಬಳಸುವ ನೀಲಿ ಎಲ್‌ಇಡಿಗಳ ಉಪಯೋಗ ಕೇವಲ ದೀಪಗಳಿಗಷ್ಟೇ ಅಲ್ಲದೆ, ಎಲ್‌ಇಡಿ ಟೀವಿಗಳು, ಕಂಪ್ಯೂಟರ್ ಮಾನಿಟರುಗಳು ಹಾಗೂ ಮೊಬೈಲ್-ಟ್ಯಾಬ್ಲೆಟ್ಟುಗಳ ಪರದೆಗಳನ್ನೆಲ್ಲ ಇದೀಗ ಎಲ್‌ಇಡಿಗಳು ಬೆಳಗುತ್ತಿವೆ. ಇದಲ್ಲದೆ ಉತ್ಕೃಷ್ಟ.ಮಟ್ಟದ ಚಿತ್ರಗಳನ್ನೂ ಮೂಡಿಸುವ ಸಾಮಾರ್ಥ್ಯವನ್ನುಗಳಿಸಿವೆ.
ಎಲ್‌ಇಡಿ ಗಳ ಕಾರ್ಯ ವೈಖರಿ
[ಬದಲಾಯಿಸಿ]ಎಲ್‌ಇಡಿ, ಲೈಟ್ ಎಮಿಟಿಂಗ್ ಡಯೋಡ್ ಪದ ಸಮೂಹದ ಚಿಕ್ಕ ಸ್ವರೂಪವಾಗಿದೆ. 'ಡಯೋಡ್' ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣಿಸುತ್ತವೆ. (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು) ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ.
ಬಳಕೆಯ ವ್ಯಾಪ್ತಿ
[ಬದಲಾಯಿಸಿ]ಟ್ರಾಫಿಕ್ ಸಂಕೇತಗಳಲ್ಲಿ, ಜಾಹೀರಾತು ಫಲಕಗಳಲ್ಲಿ, ಭಾರಿ ಪ್ರಮಾಣದ ಹೋರ್ಡಿಂಗ್ ಪ್ರದರ್ಶನ ಫಲಕಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ, ಬಳಕೆಯಾಗುತ್ತಿರುವ ಈ ದೀಪಗಳು ಇದೀಗ ಬಲ್ಬುಗಳನ್ನು, ಟ್ಯೂಬ್‌ಲೈಟ್-ಸಿಎಫ್‌ಎಲ್ ಇತ್ಯಾದಿಗಳನ್ನು ಬದಲಾಯಿಸುವ ದಿಶೆಯಲ್ಲಿ ಕೆಲಸಮಾಡುತ್ತಿವೆ. ಟೀವಿ, ಕಂಪ್ಯೂಟರ್, ಟ್ಯಾಬ್ಲೆಟ್ ಹಾಗೂ ಮೊಬೈಲ್ ದೂರವಾಣಿ ಪರದೆಗಳನ್ನೂ ಎಲ್‌ಇಡಿಗಳು ಬೆಳಗುತ್ತಿವೆ.
ಎಲ್‌ಇಡಿ ಮುಂದಿನ ದಿನಗಳಲ್ಲಿ
[ಬದಲಾಯಿಸಿ]ಆಧುನಿಕ ಜೀವನದಲ್ಲಿ ಕುಡಿಯುವ ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಎಲ್‌ಇಡಿಗಳು ಬಳಕೆಯಾಗಲಿವೆ. ತೀಕ್ಷ್ಣವಾದ ಅಲ್ಟ್ರಾವಯೊಲೆಟ್ (ಯೂವಿ) ಬೆಳಕಿನ ಕಿರಣಗಳನ್ನು ಬಳಸಿ ಕುಡಿಯುವ ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆ ಈಗ ಜಾರಿಯಲ್ಲಿದೆ. ಇದನ್ನೇ ಅಲ್ಟ್ರಾವಯೊಲೆಟ್ ಬೆಳಕನ್ನು ಪಡೆಯಲು ಹೆಚ್ಚು ವಿದ್ಯುತ್ ಬಳಸುವ ಹಾಗೂ ದುಬಾರಿಯಾದ ಯೂವಿ ದೀಪಗಳನ್ನು ಬಳಸಲಾಗುತ್ತದೆ. ಇಂತಹ ದೀಪಗಳ ಬದಲಿಗೆ ಎಲ್‌ಇಡಿಗಳನ್ನು ಬಳಸಿದರೆ ಬಹಳ ಕಡಿಮೆ ಖರ್ಚಿನಲ್ಲಿ ನೀರಿನ ಶುದ್ಧೀಕರಣ ಸಾಧ್ಯವೆನ್ನುವ ತಿಳುವಳಿಕೆಯನ್ನು ವಿಜ್ಞಾನಿಗಳು ಸಮರ್ಥಿಸುತ್ತಿದ್ದಾರೆ.
ವೈರ್ ಲೆಸ್ ಸಂವಹನ ಕ್ರಿಯೆಯಲ್ಲಿ
[ಬದಲಾಯಿಸಿ]ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ವಿಜ್ಞಾನಿಗಳು ಇಗ ಬಳಕೆಯಲ್ಲಿರುವ 'ವೈ-ಫಿ ತಂತ್ರಜ್ಞಾನ'ಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ 'ಲೈ-ಫಿ', ಅಂದರೆ, 'ಲೈಟ್ ಎನೇಬಲ್ಡ್ ವೈ-ಫಿ'ಯಲ್ಲಿ 'ಎಲ್‌ಇಡಿ'ಗಳ ಬಳಕೆ ಸಾಧ್ಯವೆಂದು ಪ್ರಯೋಗಗಳಿಂದ ಸಿದ್ಧಪಡಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ 'ಎಲ್ಲೆಲ್ಲೂ ಎಲ್‌ಇಡಿ'-ಟಿ.ಜಿ.ಶ್ರೀನಿಧಿ, ಇ-ಜ್ಞಾನ'[ಶಾಶ್ವತವಾಗಿ ಮಡಿದ ಕೊಂಡಿ]
- ↑ Nobel prizeorg.'The Nobel Prize in Physics 2014'
- ↑ 'ಪಂಜು', ಕ್ಟೋಬರ್,೨೭, ೨೦೧೪, ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್