ವಿಷಯಕ್ಕೆ ಹೋಗು

ನೀಲಕಮಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀಲಕಮಲ ನಿಂಫ಼ೀಯಾ ಕುಲದಲ್ಲಿನ ಒಂದು ನೈದಿಲೆ. ಈ ಕುಲದಲ್ಲಿನ ಇತರ ಪ್ರಜಾತಿಗಳಂತೆ, ಈ ಸಸ್ಯವು ಮನಃಪ್ರಭಾವಕ ಕ್ಷಾರಾಭವಾದ ಆಪೊರ್ಫ಼ಿನ್ನನ್ನು ಹೊಂದಿರುತ್ತದೆ. ಇದು ಪ್ರಾಚೀನ ಈಜಿಪ್ಟ್ನ ನಾಗರೀಕತೆಗಳಿಗೆ ಪರಿಚಿತವಿತ್ತು.

ಇದರ ಮೂಲ ಆವಾಸಸ್ಥಾನ ನೈಲ್ ನದಿಯ ಉದ್ದಕ್ಕೂ ಮತ್ತು ಪೂರ್ವ ಆಫ಼್ರಿಕಾದ ಇತರ ಭಾಗಗಳಾಗಿರಬಹುದು. ಪ್ರಾಚೀನ ಕಾಲದಲ್ಲಿ ಇದು ಭಾರತೀಯ ಉಪಖಂಡ ಮತ್ತು ಥೈಲಂಡ್‍ ಸೇರಿದಂತೆ ಹೆಚ್ಚು ವ್ಯಾಪಕವಾಗಿ ಹರಡಿತು.

ಎಲೆಗಳು ವಿಶಾಲವಾಗಿ ದುಂಡಾಗಿದ್ದು ೨೫-೪೦ ಸೆ.ಮಿ. ಉದ್ದವಿರುತ್ತವೆ ಮತ್ತು ಎಲೆಯ ಕಾಂಡದ ಭಾಗದಲ್ಲಿ ಕಚ್ಚನ್ನು ಹೊಂದಿರುತ್ತದೆ. ಹೂವುಗಳು ವ್ಯಾಸದಲ್ಲಿ ೧೦-೧೫ ಸೆ.ಮೀ. ಇರುತ್ತವೆ.

ಇದರ ವಾಸ್ತವಿಕ ಬೆಳವಣಿಗೆ ಮತ್ತು ಅರಳುವಿಕೆ ಚಕ್ರದ ಪರಿಚಯವಿಲ್ಲದ ವ್ಯಕ್ತಿಗಳಿಂದ ಸಾಹಿತ್ಯದಲ್ಲಿನ ವರದಿಗಳು ಹೂವುಗಳು ಬೆಳಿಗ್ಗೆ ತೆರೆದುಕೊಂಡು ನೀರಿನ ಮೇಲ್ಮೈಗೆ ಬಂದು, ನಂತರ ಮುಸ್ಸಂಜೆ ವೇಳೆಗೆ ಮುಚ್ಚಿಕೊಂಡು ಮುಳುಗುತ್ತವೆ ಎಂದು ಸೂಚಿಸಿವೆ. ವಾಸ್ತವವಾಗಿ, ಹೂವಿನ ಮೊಗ್ಗುಗಳು ಎರಡು ಮೂರು ದಿನದ ಅವಧಿಯಲ್ಲಿ ಮೇಲ್ಮೈಗೆ ಏಳುತ್ತವೆ, ಮತ್ತು ಸಿದ್ಧವಾದಾಗ, ಬೆಳಿಗ್ಗೆ ಸುಮಾರು 9:30ಕ್ಕೆ ತೆರೆದುಕೊಂಡು ಮಧ್ಯಾಹ್ನ ಸುಮಾರು 3:00ಕ್ಕೆ ಮುಚ್ಚಿಕೊಳ್ಳುತ್ತವೆ. ಹೂವುಗಳು ಮತ್ತು ಮೊಗ್ಗುಗಳು ಬೆಳಿಗ್ಗೆ ನೀರಿನಿಂದ ಮೇಲೇಳುವುದಿಲ್ಲ ಮತ್ತು ರಾತ್ರಿ ಮುಳುಗುವುದಿಲ್ಲ. ಹೂವುಗಳು ತಿಳಿ ಬಿಳಿ ಮಿಶ್ರಿತ ನೀಲಿ ಅಥವಾ ಆಕಾಶ ನೀಲಿ ಅಥವಾ ಕೆನ್ನೀಲಿ ಪಕಳೆಗಳನ್ನು ಹೊಂದಿರುತ್ತವೆ. ಈ ಬಣ್ಣ ಹೂವಿನ ಕೇಂದ್ರದಲ್ಲಿ ಸರಾಗವಾಗಿ ತಿಳಿ ಹಳದಿಗೆ ಬದಲಾಗುತ್ತದೆ.

ಈಜಿಪ್ಟ್‌ನ ಒಂದು ಸ್ಮಾರಕ ಸ್ತಂಭದಲ್ಲಿ ಒಬ್ಬ ಮೃತ ವ್ಯಕ್ತಿಯು ಪವಿತ್ರ ಕಮಲವನ್ನು ಮೂಸುತ್ತಿರುವಂತೆ ತೋರಿಸಲಾಗಿದೆ.

ಈ ಸಸ್ಯ ಮತ್ತು ಹೂವನ್ನು ಆಗಾಗ್ಗೆ ಈಜಿಪ್ಟ್‌ನ ಕಲೆಯಲ್ಲಿ ಚಿತ್ರಿಸಲಾಗುತ್ತದೆ. ಇವನ್ನು ಅಸಂಖ್ಯಾತ ಶಿಲಾ ಕೆತ್ತನೆಗಳು ಮತ್ತು ವರ್ಣಚಿತ್ರಗಳಲ್ಲಿ ಚಿತ್ರಿಸಲಾಗಿದೆ, ಕಾರ್ನಾಕ್‍ನ ಪ್ರಸಿದ್ಧ ದೇವಾಲಯದ ಗೋಡೆಗಳು ಸೇರಿದಂತೆ, ಮತ್ತು ಕೂಟ ದೃಶ್ಯಗಳು, ಕುಣಿತಕ್ಕೆ ಸಂಬಂಧಿಸಿದಂತೆ ಅಥವಾ ಗಮನಾರ್ಹ ಆಧ್ಯಾತ್ಮಿಕ ಅಥವಾ ಮಾಂತ್ರಿಕ ಕ್ರಿಯಾವಿಧಿಗಳಲ್ಲಿ ಆಗಾಗ್ಗೆ ಚಿತ್ರಿಸಲ್ಪಟ್ಟಿವೆ. ಇದನ್ನು ಈಜಿಪ್ಟ್‌ನ ಪುರಾಣ ಸಾಹಿತ್ಯದಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲಾಗಿದೆ, ಮತ್ತು ಹೂವುಗಳು ರಾತ್ರಿ ಮುಚ್ಚಿಕೊಂಡು ಮತ್ತೆ ಬೆಳಿಗ್ಗೆ ತೆರೆದುಕೊಳ್ಳುವುದರಿಂದ ಸೂರ್ಯನ ಸಂಕೇತವೆಂದು ಪರಿಗಣಿಸಲ್ಪಟ್ಟಿವೆ. ಹೀಲಿಯಾಪೊಲಿಸ್‍ನಲ್ಲಿ, ಸೂರ್ಯ ದೇವತೆ ರಾ ಆದಿಸ್ವರೂಪದ ನೀರಿನಲ್ಲಿ ಬೆಳೆಯುವ ಕಮಲದ ಹೂವಿನಿಂದ ಉದಯಿಸಿದಾಗ ವಿಶ್ವದ ಮೂಲ ಆಗಿತ್ತು ಎಂದು ಕಲಿಸಲಾಗಿತ್ತು. ರಾತ್ರಿ, ಅವನು ಮತ್ತೆ ಹೂವಿನೊಳಗೆ ನಿವರ್ತಿಸುತ್ತಿದ್ದನು ಎಂದು ನಂಬಲಾಗಿತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. Rawson, Jessica, Chinese Ornament: The lotus and the dragon, pp. 200 (quoted)–202, 1984, British Museum Publications, ISBN 0-714-11431-6


"https://kn.wikipedia.org/w/index.php?title=ನೀಲಕಮಲ&oldid=821038" ಇಂದ ಪಡೆಯಲ್ಪಟ್ಟಿದೆ