ವಿಷಯಕ್ಕೆ ಹೋಗು

ನೀರಚಿಲುಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಪ್ರಕೃತಿ ರಮಣೀಯವಾದ ಪ್ರದೇಶ.ಮುಸ್ಸಂಜೆ ಹೊತ್ತು ಇಲ್ಲಿಗೆ ಬಂದ್ರೆ ಸಾಕು. ಚಿಲಿಪಿಲಿ ಹಕ್ಕಿಗಳ ನಿನಾದ ಮುಗಿಲು ಮುಟ್ಟುತ್ತದೆ. ಇನ್ನೇನು ಗೂಡು ಸೇರುವಷ್ಟರಲ್ಲಿ ಕೆಲವೊಂದು ಪಕ್ಷಿಗಳಿಗೆ ಇದು ತಾಣವಾಗಿದೆ. ಇಲ್ಲಿ ಹಕ್ಕಿಗಳೂ ಗೂಡು ಕಟ್ಟಿಕೊಡಿವೆ. ಈ ಕಡೆ ಸಂಚರಿಸುವ ವಾಹನಗಳು ಪ್ರತಿನಿತ್ಯವೂ ಸಾಲು ಸಾಲಾಗಿ ನಿಂತುಕೊಳ್ಳುತ್ತವೆ. ಹಾಗೆಂದ ಮಾತ್ರಕ್ಕೆ ಟ್ರಾಫಿಕ್ ಜಾಂ ಅಗುತ್ತದೆ ಎಂದು ಅಂದುಕೋಳ್ಳಬೇಡಿ. ಇಲ್ಲಿ ತುಂಬಾ ತಂಪಾದ ವಾತಾವರಣವಿದೆ. ಇಲ್ಲೇನೂ ನದಿ ಕೂಡಾ ಇಲ್ಲ. ಚಾರಣ ಪ್ರಿಯರಿಗೆ ತಾಣವಂತೂ ಅಲ್ಲವೇ ಅಲ್ಲ. ಇತ್ತ ಕಡೆ ಪ್ರಯಾಣ ಮಾಡುವಾಗ ಪ್ರತಿಯೊಬ್ಬರು ಇದನ್ನು ನೋಡುವ ಕುತೂಹಲ ಇದ್ದಿರಲೂಬಹುದು. ಪಕ್ಕಾ ಪ್ರಯಾಣಿಕರ ಬಸ್ಸು ತಂಗುದಾಣದಂತಿರುವ ಈ ವಿಶಾಲ ವಠಾರದಲ್ಲಿ ವರ್ಷ ಪೂರ್ತಿ ನೀರು ಝುಳು ಝುಳು ಹರಿಯುತ್ತಲೇ ಇರುತ್ತದೆ. ಎಂದರೆ ನೀವು ನಂಬಲೇಬೇಕು. ಸುಮ್ಮನೆ ಒಂದು ನಿಮಿಷ ಇಲ್ಲಿ ಬಂದು ಕುಳಿತರೆ ಸಾಕು .ಮನಸ್ಸಿಗೆ ತಂಪಾದ ಅನುಭವ ಸಿಗುತ್ತದೆ. ಬೆಳ್ತಂಗಡಿ ತಾಲೂಕಿನ ಕೇಂದ್ರ ಬಿಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವಾಗ ಮೂರು ಕಿ.ಮಿ. ದೂರದಲ್ಲಿ ಈ ಬಿಡಾರ ಕಾಣ ಸಿಗುತ್ತದೆ. ವರುಷದ ಎಲ್ಲಾ ದಿನ ದಿನಗಳಲ್ಲು ನೀರು ಜೀನುಗುತ್ತಿರುವ ಈ ಪ್ರದೇಶವನ್ನು "ನೀರ ಚಿಲುಮೆ" ಎನ್ನುತ್ತಾರೆ. ಈ ತಾಣಕ್ಕೆ ಪುರಾತನವಾದ ಇತಿಹ್ಯವಿದೆ. ಈ ಬಿಡಾರದ ಹಿಂದೆ,ನೀರು ಇರುವ ಒಂದು ಟ್ಯಾಂಕ್ ಇದೆ. ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥೀಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ, ಎತ್ತಿನ ಗಾಡಿಯಲ್ಲಿ ಬರುತ್ತಿದ್ದರು. ಇದನ್ನು ಮನಗಂಡ ಕ್ಷೇತ್ರದ ಆಡಳಿತ ಮಂಡಳಿ, ಯಾತ್ರಾರ್ಥೀಗಳ ಅನುಕೂಲಕ್ಕಾಗಿ, ವಿಶ್ರಾಂತಿ ಕೊಠಡಿಯನ್ನಾಗಿ ಇದನ್ನು ನಿರ್ಮಿಸಿದರು. ಎಲ್ಲಾ ಯಾತ್ರಾರ್ಥಿಗಳು ವಿಶ್ರಾಂತಿ ಪಡೆಯುವುದಕ್ಕಾಗಿ ಜೊತೆಗೆ ಉಪಾಹಾರವನ್ನು ತಯಾರಿಸಿಕೊಳ್ಳುವುದಕ್ಕಾಗಿ ಈ ಸ್ಥಳದಿಂದ ಅನುಕೂಲವಾಯಿತು. ಈಗಲೂ ಚಾಲ್ತಿಯಲ್ಲಿದೆ. ಇಲ್ಲಿ ಹರಿದು ಬರುವ ನೀರು ಶುದ್ದ ನೀರು ಎಂದು ಹೇಳುತ್ತಾರೆ. ಪ್ರಯಾಣಿಕರು ಈ ತಂಪಾದ ನೀರನ್ನು ದಾರಿ ಮಧ್ಯೆ ಬಾಯಾರಿಕೆಯಾದಾಗ ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಇದನ್ನು ಜೀವ ಜಲ ಎಂದು ಕೂಡಾ ಕರೆಯತ್ತಾರೆ.

<reference/>